ಜೊತೆ ಜೊತೆಯಲಿ ಧಾರಾವಾಹಿಯಿಂದ ನಟ ಅನಿರುದ್ದ ಅವರನ್ನು ಆಚೆ ಹಾಕುತ್ತಿದ್ದಂತೆಯೇ ನಿರ್ಮಾಪಕ ಆರೂರು ಜಗದೀಶ್, ನಟನ ಮೇಲೆ ಸಾಕಷ್ಟು ಆರೋಪಗಳನ್ನು ಮಾಡಿದ್ದಾರೆ. ಈ ಎಲ್ಲ ಆರೋಪಗಳಿಗೆ ಉತ್ತರ ಕೊಟ್ಟಿರುವ ಅನಿರುದ್ಧ, ನಿರ್ಮಾಪಕರು ಮಾಡಿರುವ ಎಲ್ಲ ಆರೋಪಗಳು ನಿಜ ಎಂದು ಅವರು ಮಕ್ಕಳ ಮೇಲೆ ಪ್ರಮಾಣ ಮಾಡಿ ಹೇಳಲಿ, ನಾನೂ ಮಾಡುತ್ತೇನೆ ಎಂದಿದ್ದಾರೆ.
ನಿರ್ಮಾಪಕ ಆರೂರು ಜಗದೀಶ್ ಅವರ ಎಲ್ಲ ಆರೋಪಗಳಿಗೂ ಉತ್ತರ ನೀಡಿರುವ ಅನಿರುದ್ಧ, ಅವೆಲ್ಲವೂ ನಿರಾಧಾರ ಎಂದು ಸಾರಾ ಸಗಟಾಗಿ ತಳ್ಳಿ ಹಾಕಿದ್ದಾರೆ. ಈ ಕುರಿತು ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ಮಾತನಾಡಿರುವ ಅನಿರುದ್ಧ, ಜೊತೆ ಜೊತೆಯಲ್ಲಿ ಧಾರಾವಾಹಿಯಿಂದ ನಾನು ಬಹಳಷ್ಟು ಪಡೆದುಕೊಂಡಿದ್ದೆನೆ. ನಾನು ಪ್ರಶಸ್ತಿಗಳನ್ನು ಪಡೆಯುವಾಗಲೂ ಈ ಮಾತು ಹೇಳಿದ್ದಾನೆ. ಯಾವತ್ತೂ ನಾನು ನನ್ನಿಂದ ಧಾರಾವಾಹಿ ಎಂದು ಹೇಳಿಲ್ಲ ಎನ್ನುತ್ತಾರೆ. ಇದನ್ನೂ ಓದಿ:ಉದಯ್ ಹಿಂಬದಿಯಿಂದ ತಬ್ಬಿ ಕಿಸ್ ಮಾಡ್ತಾರೆ: ಬಿಗ್ ಬಾಸ್ ಮನೆಯಲ್ಲಿ ಮಹಿಳಾ ಸ್ಪರ್ಧಿಗಳು ಗರಂ
ನನಗೆ ಬಹಳಷ್ಟು ದುರಹಂಕಾರ ಬಂದಿದೆ ಅನ್ನೊದು ಸುಳ್ಳು. ನಾನು ಯಾವತ್ತೂ ಹಾಗೆ ನಡೆದುಕೊಂಡಿಲ್ಲ. ಧಾರಾವಾಹಿಗಾಗಿ ನಾನು ೧೨ ಕೆಜಿ ತೂಕ ಕಡಿಮೆ ಮಾಡಿದ್ದೇನೆ. ಬಹಳಷ್ಟು ಶ್ರಮ ಹಾಕಿದ್ದಿನಿ. ಅಲ್ಲದೇ, ಕ್ಯಾರವ್ಯಾನ್ ಕೇಳಿಲ್ಲ. ನಾನು ರಂಗಭೂಮಿ ಕಲಾವಿದ. ಹಾಗೆ ಕೇಳುವುದಕ್ಕೆ ಸಾಧ್ಯವೇ ಇಲ್ಲ ಎಂದಿದ್ದಾರೆ. ಸೀರಿಯಲ್ ಒಪ್ಪಿಕೊಳ್ಳುವ ಮೊದಲ ದಿನವೇ ಸೀನ್ ಪೇಪರ್ ಬಗ್ಗೆ ಮಾತನಾಡಿದ್ದಿನಿ. ಹಿಂದಿನ ದಿನ ಸೀನ್ ಪೇಪರ್ ಕೊಡ್ತಿನಿ ಅಂತ ಅವರು ಒಪ್ಪಿಕೊಂಡಿದ್ದರು. ಅದನ್ನು ಕೇಳಿದ್ದೇನೆ. ಅದನ್ನೇ ಮನಸ್ತಾಪ ಅಂದುಕೊಂಡರೆ ಹೇಗೆ? ಎನ್ನುತ್ತಾರೆ ಅನಿರುದ್ಧ.
ಆರೋಪಗಳನ್ನು ಮಾಡ್ತಿರುವವರು ಅವರ ಮಕ್ಕಳ ಮೇಲೆ ಕೈ ಇಟ್ಟು ಹೇಳಲಿ. ಆಮೇಲೆ ನಾನು ನನ್ನ ಮಕ್ಕಳ ಮೇಲೆಕೈ ಇಟ್ಟು ಉತ್ತರ ಕೊಡ್ತಿನಿ ಎಂದು ಜಗದೀಶ್ ಗೆ ಸವಾಲ್ ಹಾಕಿರುವ ಅನಿರುದ್ಧ, ದೇವಸ್ಥಾನದ ಸೀನ್ ಶೂಟಿಂಗ್ ನಲ್ಲಿ ಎರಡು ದಿನ ಕೆಲಸ ಮಾಡಿದ್ದಿನಿ. ಸುತ್ತ ಮುತ್ತ ಮನೆಗಳಿರಲಿಲ್ಲ ಹಾಗಾಗಿ ಕ್ಯಾರವ್ಯಾನ್ ಕೇಳಿದೆ. ಬಯಲಿನಲ್ಲಿ ಬಟ್ಟೆ ಬದಲಾಯಿಸಲು ಸಾಧ್ಯವಿಲ್ಲ. ನನಗೆ ಓಕೆ ಆದ್ರೆ ಹೆಂಗಸರು ಏನು ಮಾಡ್ಬೇಕು. ಅಭಿಮಾನಿಗಳ ಮನೆಯಲ್ಲಿ ಬಾತ್ ರೂಮ್ ಉಪಯೋಗಿಸಲು ಕಷ್ಟ ಆಗುತ್ತೆ. ಹಾಗಾಗಿ ಕ್ಯಾರವ್ಯಾನ್ ಕೇಳಿದ್ದೆ. ದಿನವೂ ಕೇಳಲಿಲ್ಲ ಎಂದಿದ್ದಾರೆ.
ನಾನು ಅಪ್ಪಾಜಿ (ಡಾ.ವಿಷ್ಣುವರ್ಧನ್) ದಾರಿಯಲ್ಲಿಯೇ ಹೋಗ್ತಿದ್ದೀನಿ. ಕರ್ನಾಟಕ ಟೆಲಿವಿಷನ್ ಅಧ್ಯಕ್ಷರ ಜೊತೆ ಮಾತನಾಡಿದ್ದೀನಿ. ಅವರು ಕೈ ಕುಲುಕುವ ಕೆಲಸ ಮಾಡುತ್ತೇವೆ ಅಂದರು. ನಾನೂ ಕೂಡ ಅದನ್ನೇ ಬಯಸಿ ನಿರ್ಮಾಪಕ ಜಗದೀಶ್ ಹಾಗೂ ಚಾನೆಲ್ ಅವರಿಗೆ ಒಂದಷ್ಟು ಮೆಸೇಜ್ ಮಾಡಿದ್ದೀನಿ. ಅವರ ಕಡೆಯಿಂದ ರಿಪ್ಲೈ ಇಲ್ಲ. ನಾಳೆ ಬನ್ನಿ ಅಂದ್ರೆ ಹೋಗ್ತೀನಿ. ಆದ್ರೆ ಸೀನ್ ಪೇಪರ್ ನಲ್ಲಿ ಡೈಲಾಗ್ ಸಂಭಾಷಣೆ ಸರಿಯಿಲ್ಲ ಅಂದ್ರೆ ನಾನು ಮತ್ತೆ ಪ್ರಶ್ನೆ ಕೇಳುತ್ತೇನೆ ಎಂದೂ ಅನಿರುದ್ಧ ಹೇಳಿದ್ದಾರೆ.