ಧರಣಿಗೆ ಕೂತ ನಟ ಅನಿರುದ್ಧ: ಕೋವಿಡ್ ಸಮಯದ ದೇವರಿಗೆ ಬೆಂಬಲ

Public TV
1 Min Read
aniruddha jatkar 3 1

ರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಒಳಗುತ್ತಿಗೆ ನೌಕರರು (workers) ಹಲವು ದಿನಗಳಿಂದ ಅನಿರ್ದಿಷ್ಟಾವಧಿ ಧರಣಿಗೆ (support) ಕೂತಿದ್ದಾರೆ. ಒಳಗುತ್ತಿಗೆಯ ನೌಕರರನ್ನು ಖಾಯಂಗೊಳಿಸುವಂತೆ ಆಗ್ರಹಿಸಿ ಮತ್ತು ಕನಿಷ್ಠ ವೇತನ ಜಾರಿಗೊಳಿಸಬೇಕೆಂಬ ಬೇಡಿಕೆಯನ್ನಿಟ್ಟುಕೊಂಡು ಮುಷ್ಕರ ನಡೆಸಿದ್ದಾರೆ. ಈ ಧರಣಿಗೆ ಬೆಂಬಲಿಸಿ ನಟ ಅನಿರುದ‍್ಧ (Aniruddha) ಕೂಡ ಜೊತೆಯಾಗಿದ್ದಾರೆ.

aniruddha jatkar 1 1

ಈ ಹಿಂದೆ ಪೌರ ಕಾರ್ಮಿಕರ ಪರವಾಗಿಯೂ ಅನಿರುದ್ಧ ಮಾತನಾಡಿದ್ದರು. ಅವರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಅವರು ಸರಕಾರವನ್ನು ಒತ್ತಾಯಿಸಿದ್ದರು. ಇದೀಗ ಆರೋಗ್ಯ ಇಲಾಖೆಯ ಒಳಗುತ್ತಿಗೆಯ ನೌಕರರ ಬೆನ್ನಿಗೆ ನಿಂತಿದ್ದಾರೆ. ಹೋರಾಟ ಸ್ಥಳಕ್ಕೆ ಆಗಮಿಸಿದ ಅವರು, ಹಲವು ಗಂಟೆಗಳ ಕಾಲ ಅವರೊಂದಿಗೆ ಧರಣಿಗೂ ಕೂತರು. ಅವರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು. ಇದನ್ನೂ ಓದಿ: ರಮ್ಯಾಗಿಂತ ಸಾನ್ಯಗೆ ವಯಸ್ಸಾಯ್ತಾ? ಕಾಲೆಳೆದ ನೆಟ್ಟಿಗರು

aniruddha jatkar 1

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅನಿರುದ್ಧ, ‘ಆರೋಗ್ಯ ಸಿಬ್ಬಂದಿ ನಮಗೆ ಕೋವಿಡ್ ಕಾಲದ ದೇವರು ಆಗಿದ್ದರು. ಇಂದು ಆ ದೇವರುಗಳು ಬೀದಿಗೆ ಬಂದಿದ್ದಾರೆ. ಬೀದಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ತಮ್ಮ ನ್ಯಾಯಯುತ ಬೇಡಿಕೆ ಕೇಳುತ್ತಿದ್ದಾರೆ. ಕೂಡಲೇ ಸರಕಾರ ಅವರ ನೋವಿಗೆ ಸ್ಪಂದಿಸಬೇಕು. ನ್ಯಾಯ ಸಿಗಬೇಕು’ ಎಂದು ಅವರು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *