ಸಿನಿಮಾ ಅಂದ ಮೇಲೆ ಗ್ಲ್ಯಾಮರಸ್, ರೊಮ್ಯಾನ್, ಲಿಪ್‌ಲಾಕ್ ಎಲ್ಲವೂ ಕಾಮನ್. ಆದರೆ ಬಾಲಿವುಡ್‌ನಲ್ಲಿ ಅದು ಕೊಂಚ ಜಾಸ್ತಿನೇಯಿದೆ. ಹೀಗಿರುವಾಗ 66 ವರ್ಷದ ಹಿರಿಯ ನಟ ಅನಿಲ್ ಕಪೂರ್ (Anil Kapoor), ತನ್ನ ಮಗಳಿಗಿಂತ ಚಿಕ್ಕ ವಯಸ್ಸಿನ ನಟಿಯೊಂದಿಗೆ ಲಿಪ್‌ಲಾಕ್ ಮಾಡಿರೋದಕ್ಕೆ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನಟನಿಗೆ ಸಖತ್ ಕ್ಲಾಸ್ ತೆಗೆದುಕೊಳ್ತಿದ್ದಾರೆ.
ಬಣ್ಣದ ಲೋಕದಲ್ಲಿ ವಯಸ್ಸಿನ ಅಂತರವೇ ಇರುವುದಿಲ್ಲ. ನಟಿಯರಿಗೆ ವಯಸ್ಸು 35 ದಾಟಿದರೆ ಅವರು ನಾಯಕಿಯಾಗಿ ಗುರುತಿಸಿಕೊಳ್ಳುವುದು ಕಷ್ಟವೇ. ಇನ್ನು ವಯಸ್ಸು 40 ಮೀರಿದರಂತೂ ಅವರಿಗೆ ಸಿಗುವುದು ಅಮ್ಮನ ರೋಲ್ ಇಲ್ಲವೇ ನಾಯಕಿಯ ತಂಗಿಯ ರೋಲ್ ಅಷ್ಟೇ. ಬೆರಳೆಣಿಕೆ ನಟಿಯರನ್ನು ಹೊರತುಪಡಿಸಿ ಉಳಿದವರಿಗೆ ಸಿಗುವುದು ಇಂಥ ಪಾತ್ರಗಳೇ. ಇದು ಹಿರಿತೆರೆ ಮಾತ್ರವಲ್ಲದೇ ಕಿರಿತೆರೆಗೂ ಮೀಸಲು. ಆದರೆ ನಾಯಕ ನಟರಾದವರು ವಯಸ್ಸು 60 ದಾಟಿದರೂ ನಾಯಕರಾಗಿಯೇ ಮೆರೆಯುತ್ತಾರೆ. ಅವರು ಎಂದಿಗೂ ತಮ್ಮ ಇಮೇಜನ್ನು ಸಣ್ಣಪುಟ್ಟ ಪಾತ್ರ ಮಾಡಿ ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಯುವ ನಟಿಯರೂ ಇಂಥ ಹಿರಿಯ ನಟರ ಜೊತೆ ರೊಮ್ಯಾನ್ಸ್ ಮಾಡಲು ಹಿಂಜರಿಯುವುದಿಲ್ಲ. ಇದು ಹಲವು ಬಾರಿ ಟ್ರೋಲ್‌ಗೆ ಒಳಗಾಗುವುದೂ ಇದೆ. ಅದರಲ್ಲಿ ದಿ ನೈಟ್ ಮ್ಯಾನೇಜರ್ ವೆಬ್ ಸಿರೀಸ್ ಸಖತ್ ಸುದ್ದಿಯಲ್ಲಿದೆ.
ಇದೀಗ ಮತ್ತೊಂದು ವಿಚಾರದಿಂದ ಶೋಭಿತಾ (Shobhita) ಸಖತ್ ಸುದ್ದಿಯಾಗಿದ್ದಾರೆ. ಅದು 66 ವರ್ಷದ ಸೀನಿಯರ್ ನಟನೊಂದಿಗೆ ರೊಮ್ಯಾನ್ಸ್ ಮಾಡುವ ಮೂಲಕ ಚರ್ಚೆಯಲ್ಲಿದ್ದಾರೆ. ‘ದಿ ನೈಟ್ ಮ್ಯಾನೇಜರ್’ ಪಾರ್ಟ್ 2ನಲ್ಲಿ ಅನಿಲ್ ಕಪೂರ್ ನಟಿ ಶೋಭಿತಾ ಜೊತೆ ಲಿಪ್‌ಲಾಕ್ ಮಾಡಿ ರೊಮ್ಯಾನ್ಸ್ ಮಾಡಿರುವ ಫೋಟೋಗಳು ಸಖತ್ ವೈರಲ್ ಆಗಿದ್ದು, ಟ್ರೋಲ್‌ಗೂ ಒಳಗಾಗುತ್ತಿದೆ. ಅನಿಲ್ ಕಪೂರ್, ಆದಿತ್ಯ ರಾಯ್ ಕಪೂರ್ ಮತ್ತು ಶೋಭಿತಾ ಧೂಲಿಪಾಲ ನಟಿಸಿರುವ ದಿ ನೈಟ್ ಮ್ಯಾನೇಜರ್ ವೆಬ್ ಸೀರಿಸ್‌ನ ಎರಡನೇ ಭಾಗವು ಒಟಿಟಿಯಲ್ಲಿ ಜೂನ್ 29ರಂದು ರಿಲೀಸ್ ಆಗಿದೆ. ನೌಕಾಪಡೆಯ ಮಾಜಿ ಅಧಿಕಾರಿ ಶಾನ್ ಸೇನ್ ಗುಪ್ತಾ ಅವರ ಸುತ್ತ ಕಥೆ ಸುತ್ತುತ್ತದೆ. ಢಾಕಾದಲ್ಲಿ ಬಾಲಕಿಯ ದುರಂತ ಸಾವು ಸರಣಿಯ ವಿಷಯವಾಗಿದೆ. ಇದನ್ನೂ ಓದಿ:‘ಬಾಹುಬಲಿ’ ಪ್ರಭಾಸ್ ಫೇಸ್‌ಬುಕ್ ಅಕೌಂಟ್ ಹ್ಯಾಕ್
ತನ್ನ ಮಗಳಿಗಿಂತ ಚಿಕ್ಕ ವಯಸ್ಸಿನ ನಟಿ ಶೋಭಿತಾ ಜೊತೆ ಅನಿಲ್ ಕಪೂರ್ ರೊಮ್ಯಾನ್ಸ್ ಮಾಡಿರೋದಕ್ಕೆ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ‘ದಿ ನೈಟ್ ಮ್ಯಾನೇಜರ್’ನಲ್ಲಿನ (The Night Manager 2) ಇಬ್ಬರ ಹಸಿಬಿಸಿ ದೃಶ್ಯಗಳು, ಲಿಪ್ ಲಾಕ್ ಸೀನ್ ನೋಡಿ ನಟನಿಗೆ ನೆಟ್ಟಿಗರು ಛೀಮಾರಿ ಹಾಕ್ತಿದ್ದಾರೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]