ಬಾಲಿವುಡ್ ಸ್ಟಾರ್ ಶಾರುಖ್ ಖಾನ್ (Shah Rukh Khan) ಅವರು ‘ಕಿಂಗ್’ (King) ಚಿತ್ರದ ಮೂಲಕ ಮಗಳು ಸುಹಾನಾ ಖಾನ್ ಅವರನ್ನು ಅದ್ಧೂರಿಯಾಗಿ ಲಾಂಚ್ ಮಾಡಲು ಮುಂದಾಗಿದ್ದಾರೆ. ದಿನದಿಂದ ದಿನಕ್ಕೆ ಕಲಾವಿದರ ಬಳಗ ಕೂಡ ಹಿರಿದಾಗುತ್ತಿದೆ. ದೀಪಿಕಾ ಪಡುಕೋಣೆ ಬಳಿಕ ಅನಿಲ್ ಕಪೂರ್ (Anil Kapoor) ಕೂಡ ‘ಕಿಂಗ್’ ಚಿತ್ರತಂಡಕ್ಕೆ ಸಾಥ್ ನೀಡಲಿದ್ದಾರೆ ಎನ್ನಲಾದ ಸುದ್ದಿಯೊಂದು ಹರಿದಾಡುತ್ತಿದೆ. ಇದನ್ನೂ ಓದಿ: ‘ಬಿಗ್ ಬಾಸ್’ ಫ್ರೆಂಡ್ಸ್ ಜೊತೆ ಮೋಕ್ಷಿತಾ ಫಾರಿನ್ ಟ್ರಿಪ್
ಸದಾ ಬಗೆ ಬಗೆಯ ಪಾತ್ರಗಳ ಮೂಲಕ ಕಮಾಲ್ ಮಾಡುವ ಅನಿಲ್ ಕಪೂರ್‌ಗೆ ಬಿಗ್ ಆಫರ್‌ವೊಂದು ಸಿಕ್ಕಿದೆ. ‘ಕಿಂಗ್’ ಸಿನಿಮಾದಲ್ಲಿ ನಟಿಸಲು ಅವರನ್ನು ಕೇಳಲಾಗಿದೆ. ಪವರ್‌ಫುಲ್ ಪಾತ್ರಕ್ಕೆ ಅವರು ಬಣ್ಣ ಹಚ್ಚಲಿದ್ದಾರೆ ಎನ್ನಲಾಗಿದೆ. ಚಿತ್ರದಲ್ಲಿ ಅವರ ಪಾತ್ರ ತಿರುವು ನೀಡಲಿದೆಯಂತೆ. ಈ ಬಗ್ಗೆ ಚಿತ್ರತಂಡವೇ ಅಧಿಕೃತವಾಗಿ ತಿಳಿಸಬೇಕಿದೆ. ಇದನ್ನೂ ಓದಿ:‘ಕಾಂತಾರ ಚಾಪ್ಟರ್ 1’ರಲ್ಲಿ ನಿನ್ನ ಪಾತ್ರ ಎಂದೆಂದಿಗೂ ಶಾಶ್ವತ: ರಾಕೇಶ್ ನಿಧನಕ್ಕೆ ರಿಷಬ್ ಶೆಟ್ಟಿ ಸಂತಾಪ
ಈ ಸಿನಿಮಾದ ಚಿತ್ರದ ಶೂಟಿಂಗ್ ಅನ್ನು ಮೇ 20ರಿಂದ ಶುರು ಮಾಡಲು ಪ್ಲ್ಯಾನ್ ಮಾಡಲಾಗಿದೆ. ಶಾರುಖ್, ಸುಹಾನಾ ಜೊತೆ ದೀಪಿಕಾ ಪಡುಕೋಣೆ, ಅಭಿಷೇಕ್ ಬಚ್ಚನ್, ಅಭಯ್ ವರ್ಮಾ ಸೇರಿದಂತೆ ಅನೇಕರು ನಟಿಸಲಿದ್ದಾರೆ. ಸದ್ಯದಲ್ಲೇ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿದೆ.
ಬಿಗ್ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ‘ಕಿಂಗ್’ ಚಿತ್ರಕ್ಕೆ ‘ಪಠಾಣ್’ ಖ್ಯಾತಿಯ ಡೈರೆಕ್ಟರ್ ಸಿದ್ಧಾರ್ಥ್ ಆನಂದ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.