ರಾಯಚೂರು: ಬಸ್ ಚಾರ್ಜ್‍ಗೂ 39 ರೂ. ದುಡ್ಡಿರಲಿಲ್ಲ. ಈಗ ದೊಡ್ಡ ನಟನಾಗಿ, ರಾಜ್ಯಸಭಾ ಸದಸ್ಯನಾಗಿದ್ದೇನೆ. ಅದಕ್ಕೆ ರಾಯರ ಆಶೀರ್ವಾದ ಕಾರಣ ಎಂದು ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್ ಹೇಳಿದ್ದಾರೆ.
Advertisement
ಗುರು ರಾಘವೇಂದ್ರ ಸ್ವಾಮಿಗಳ 351ನೇ ಆರಾಧನಾ ಮಹೋತ್ಸವ ಹಿನ್ನೆಲೆ ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದ ಜಗ್ಗೇಶ್ ಅವರು, ಶ್ರೀಗಳ ಆಶೀರ್ವಾದ ಪಡೆದು ಬಳಿಕ ಮಾಧ್ಯಮದೊಂದಿಗೆ ಮಾತನಾಡಿ, ಶ್ರೀಗಳ ನೇತೃತ್ವದಲ್ಲಿ ಮಠದ ಘನತೆ ಹೆಚ್ಚುತ್ತಿದೆ. ನನಗೆ ವೈಯಕ್ತಿಕವಾಗಿ ಇರುವ ದೊಡ್ಡ ಆಸೆ ಎಂದರೆ ಮಠಕ್ಕೆ ಒಂದು ಏರೋಡ್ರಮ್ ಬರಬೇಕು. ನಾವೇನು ಮಾಡುವುದಿಲ್ಲ. ರಾಯರೇ ಅದನ್ನು ಮಾಡಿಸುತ್ತಾರೆ. ರಾಯರ ಮೇಲೆ ಭಾರಹಾಕಿ ನಾನು ಈ ವಿಷಯವನ್ನು ಮುಂದಕ್ಕೆ ತೆಗೆದುಕೊಂಡು ಹೋಗುತ್ತೇನೆ ಅಂತ ತಿಳಿಸಿದರು. ಇದನ್ನೂ ಓದಿ: ‘ಹರ್ ಘರ್ ತಿರಂಗ’ ರ‍್ಯಾಲಿ ವೇಳೆ ಮಾಜಿ ಸಿಎಂ ನಿತಿನ್ ಪಟೇಲ್‍ಗೆ ತಿವಿದ ಹಸು
Advertisement
Advertisement
ಅಧಿಕಾರಕ್ಕೆ ಬಂದಾಗ ಯಾರೂ ತಮ್ಮ ಕೈ ಗಲೀಜು ಮಾಡಿಕೊಳ್ಳುತ್ತಾರೋ ಅವರನ್ನು ರಾಯರೂ ಎಂದೂ ಕ್ಷಮಿಸಲ್ಲ. ಅಂತವರು ಮುಂದೆ ಬೆತ್ತಲಾಗಿ ನಿಲ್ಲಬೇಕಾಗುತ್ತದೆ. ಅದಕ್ಕೆ ಸದ್ಭಾವನೆಯಿಂದ ಕೆಲಸ ಮಾಡಬೇಕು. ಬಸ್ ಚಾರ್ಜ್‍ಗೂ 39 ರೂ. ದುಡ್ಡಿರಲಿಲ್ಲ. ಈಗ ದೊಡ್ಡ ನಟನಾಗಿ, ರಾಜ್ಯಸಭಾ ಸದಸ್ಯನಾಗಿದ್ದೇನೆ. ಅದಕ್ಕೆ ರಾಯರ ಆಶೀರ್ವಾದ ಕಾರಣ ಎಂದರು.
Advertisement
ಎಷ್ಟೋ ಯೋಜನೆಗಳ ಬಗ್ಗೆ ಸರಿಯಾಗಿ ಯಾರೂ ಓದಿ ತಿಳಿದುಕೊಳ್ಳುವುದಿಲ್ಲ. ಎಷ್ಟೋ ಫಂಡ್‍ಗಳು ವಾಪಸ್ ಹೋಗಿವೆ. ಹೀಗಾಗಿ ನಮಗೆ ಯೋಜನೆಗಳ ಲಾಭ ಸಿಗುವುದಿಲ್ಲ. ಯೋಜನೆ ಬಗ್ಗೆ ಓದಿ ತಿಳಿದುಕೊಳ್ಳಬೇಕು. ನಮಗೆ ಪ್ರಹ್ಲಾದ್ ಜೋಶಿ, ಸಂತೋಷ ಜಿ ಮಾರ್ಗದರ್ಶನ ಮಾಡುತ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ಎಣ್ಣೆ ಏಟಲ್ಲಿ ರೆಸ್ಟೋರೆಂಟ್‍ನಲ್ಲಿ ರಂಪಾಟ – ಗಗನಸಖಿ ಸೇರಿ ಮೂವರು ಅರೆಸ್ಟ್
ಇಡೀ ವಿಶ್ವದಲ್ಲಿ ಯುದ್ಧಗಳು ನಿಲ್ಲಬೇಕು ಅಂದರೆ ಮೋದಿಯವರಂತೆ ಸಾಮರ್ಥ್ಯ ಬೇಕು. ಅಮೇರಿಕ, ರಷ್ಯಾ, ಚೀನಾ ಮೂರು ದೇಶಗಳೊಂದಿಗೆ ಮಾತನಾಡಿ ಅವರನ್ನು ಸಾತ್ವಿಕರನ್ನಾಗಿ ಮಾಡುವ ಶಕ್ತಿ ಮೋದಿಗೆ ಇದೆ. ಹರ್ ಘರ್ ತಿರಂಗದಿಂದ ಪ್ರತಿಯೊಬ್ಬರಲ್ಲೂ ದೇಶ ಭಕ್ತಿ ಬರುತ್ತದೆ. ಚಿಕ್ಕಮಕ್ಕಳು ಸಹ ಬಾವುಟ ಕೈಯಲ್ಲಿ ಹಿಡಿಯುವುದರಿಂದ ಅವರಿಗೆ ಸ್ವಾತಂತ್ರ್ಯದ ಪೂರ್ವ ತಿಳಿಯುತ್ತದೆ. ಮೇಧಾವಿಯಾದ ಮೋದಿ ರಾಷ್ಟ್ರ ಭಕ್ತಿ ಹೆಚ್ಚಿಸಲು ಈ ಯೋಚನೆ ಮಾಡಿದ್ದಾರೆ ಎಂದು ಹೇಳಿದರು.