ಒಡಿಶಾ ನಟ ಕಮ್ ಸಂಸದ ಅನುಭವ್ ಮೊಹಂತಿ (Anubhav Mohanty) ಅವರು ಪತ್ನಿ ವರ್ಷಾ ಪ್ರಿಯಾದರ್ಶಿನಿ (Varsha Priyadarshini) ಜೊತೆಗಿನ 10 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ. ಇದೀಗ ಈ ಜೋಡಿಗೆ ಅಧಿಕೃತವಾಗಿ ಡಿವೋರ್ಸ್ (Divorce) ಸಿಕ್ಕಿದೆ. ಈ ಬಗ್ಗೆ ನಟ ಅನುಭವ್ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.
Advertisement
ಅನುಭವ್ ಮೊಹಂತಿ ಡಿವೋರ್ಸ್ ಬಗ್ಗೆ ತಮ್ಮ ಎಕ್ಸ್‌ನಲ್ಲಿ ಬರೆದುಕೊಂಡು, ನನಗಾಗಿ ಮತ್ತು ನನ್ನ ಕುಟುಂಬದ ಶಾಂತಿ, ನೆಮ್ಮದಿಗಾಗಿ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದಗಳು. 10 ವರ್ಷ ಪೂರ್ಣಗೊಳ್ಳುವ ಒಂದು ದಿನ ಮುಂಚಿತವಾಗಿ ನಿಷ್ಪ್ರಯೋಜಕ, ಅರ್ಥಹೀನ, ಹೃದಯಹೀನ, ನೋವಿನ ಮತ್ತು ಸುಳ್ಳಿನಿಂದ ಕೂಡಿದ ಈ ದಾಂಪತ್ಯ ಜೀವನಕ್ಕೆ ಅಂತ್ಯ ಸಿಕ್ಕಿದೆ. ವಿಚ್ಛೇದನದ ತೀರ್ಪು ಸಿಕ್ಕಿತು. ನಾನು ಅವಳ ಸಂತೋಷಕ್ಕಾಗಿ ಪ್ರಾರ್ಥಿಸುತ್ತೇನೆ. ಇದರಲ್ಲಿ ಯಾವುದೇ ಅಪರಾಧವಿಲ್ಲ. ಹ್ಯಾಪಿ ರೋಸ್ ಡೇ ಎಂದು ಬರೆದುಕೊಂಡಿದ್ದಾರೆ.
Advertisement
Thanks all who prayed for me & my family’s peace????????
Got my decree of divorce today, which is just a day before the completion of 10 worthless/meaningless/heartless/painful & above all, false marital years of my false marriage! I pray for her happiness.
No Offence.#HappyRoseDay pic.twitter.com/EAEH5IY8qm
— Anubhav Mohanty (@AnubhavMohanty_) February 7, 2024
Advertisement
ಇದೀಗ ಒಡಿಶಾ, ಬೆಂಗಾಲಿ ನಟಿ ವರ್ಷಾ ಜೊತೆಗಿನ ದಾಂಪತ್ಯ 10 ವರ್ಷ ಪೂರ್ಣಗೊಳ್ಳುವ ಒಂದು ದಿನ ಮುಂಚೆ ನಟ ಅನುಭವ್ ಡಿವೋರ್ಸ್ ಘೋಷಿಸಿರುವುದು ಅಭಿಮಾನಿಗಳಿಗೆ ಶಾಕ್ ಕೊಟ್ಟಿದೆ. ಇದನ್ನೂ ಓದಿ:Bigg Boss: ವರ್ತೂರು ಸಂತೋಷ್ ನೇತೃತ್ವದ ಹಳ್ಳಿಕಾರ್ ಹಬ್ಬದಲ್ಲಿ ತಾರಾ ಮೆರುಗು
Advertisement
ಸಂಸದ ಅನುಭವ್ ಮೊಹಂತಿ ಅವರು 2013ರಲ್ಲಿ ತಮ್ಮ ರಾಜಕೀಯ ವೃತ್ತಿಗೆ ಬರುವ ಮೊದಲು ಒಂದು ದಶಕದಿಂದಲೂ ಒಡಿಯಾ ಚಲನಚಿತ್ರಗಳಲ್ಲಿ ಪ್ರಸಿದ್ಧ ನಟರಾಗಿದ್ದರು. 2014ರಲ್ಲಿ ರಾಜ್ಯಸಭಾ ಸಂಸದರಾದರು. 2019ರ ಲೋಕಸಭಾ ಕ್ಷೇತ್ರದಲ್ಲಿ ಕೇಂದ್ರಪಾರ ಲೋಕಸಭಾ ಕ್ಷೇತ್ರದಿಂದ ಬೈಜಯಂತ್ ಪಾಂಡಾ ವಿರುದ್ಧ ಗೆದ್ದಿದ್ದರು.