ಬೆಳಗಾವಿ: ನಾನು ನನ್ನ ಅಣ್ಣ ಸೇರಿ ಒಂದು ರೆಸಾರ್ಟ್ ಖರೀದಿ ಮಾಡಿದ್ದೀವಿ. ಇದರ ಹಿಂದುಗಡೆ ನಮ್ಮ ಜಮೀನಿದೆ. ಹಿರೇಮಠ್ ಕಡೆಯವರು ಯಾರೋ ಬಂದು ರೇಸಾರ್ಟ್ ನೋಡ್ಬಿಟ್ಟು ಕೃಷಿ ಭೂಮಿಯಲ್ಲಿ ರೆಸಾರ್ಟ್ ಕಟ್ಟಿದ್ದಾರೆ ಅಂತ ಹೇಳಿದ್ದಾರೆ ಅಂತ ನಟ ಹಾಗೂ ಕೆಪಿಜೆಪಿ ಸ್ಥಾಪಕ ಉಪೇಂದ್ರ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಕೆಪಿಜೆಪಿ ಪಕ್ಷದ ಪ್ರಚಾರಕ್ಕೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೃಷಿ ಭೂಮಿಯಲ್ಲಿ ರೆಸಾರ್ಟ್ ಮಾಡಲು ಸಾಧ್ಯವೇ ಇಲ್ಲ. ಕೃಷಿ ಭೂಮಿಯನ್ನು ಕೃಷಿಗಾಗಿಯೇ ಬಳಸಬೇಕು. ಇಂದಿಗೂ ನಾವು ಅಲ್ಲಿ ವ್ಯವಸಾಯ ಮಾಡ್ತಾ ಇದ್ದೀವಿ. ಬೆಳೆ ಬೆಳೆಯುತ್ತಾ ಇದ್ದೀವಿ. ಒಟ್ಟಿನಲ್ಲಿ ಅವರಿಗೆ ಈ ಗೊಂದಲ ಉಂಟಾಗಲು ಕಾರಣ ಅವರು ರೆಸಾರ್ಟ್ ಮುಂದುಗಡೆ ಬಂದಿದ್ದಾರೆ. ಹೀಗಾಗಿ ಅವರು ಹಿಂದುಗಡೆ ನೋಡಿಲ್ಲ. ಹೀಗಾಗಿ ಮಂದುಗಡೆ ಬಂದು ಈ ಜಮೀನಿನಲ್ಲಿ ಹೊಟೇಲ್ ಮಾಡ್ಕೊಂಡಿದ್ದಾರೆ ಅಂತ ಅವರು ಹೇಳಿದ್ದಾರೆ.
Advertisement
ನಾವು ಹೊಟೇಲನ್ನು ಕೆಸ್‍ಇಡಿಸಿ (ಕರ್ನಾಟಕ ಸ್ಟೇಟ್ ಇಂಡಸ್ಟ್ರಿಯಲ್ ಡೆವೆಲಪ್ ಮೆಂಟ್ ಕಾರ್ಪೋರೇಶನ್) ಯಿಂದ ತೆಗೆದುಕೊಂಡಿದ್ದೇವೆ. ಅದರ ಸಂಪೂರ್ಣ ದಾಖಲೆಗಳಿವೆ. ಅದನ್ನೆಲ್ಲಾ ನೋಡಿಯೇ ಕೋರ್ಟ್ ನಮ್ಮ ಪರ ತೀರ್ಪು ನೀಡಿದೆ. ಹೀಗಾಗಿ ಕೋರ್ಟ್ ನಿರ್ಧಾರ ತೆಗೆದುಕೊಂಡ ಮೇಲೂ ಒಬ್ಬ ವ್ಯಕ್ತಿ ಅದರ ಬಗ್ಗೆ ಮಾತನಾಡುತ್ತಾರೆ ಅಂದ್ರೆ ನನಗೆ ಅದರ ಬಗ್ಗೆ ಅರ್ಥನೇ ಆಗಲ್ಲ. ಕೋರ್ಟ್ ಗಿಂತಲೂ ಇವರು ದೊಡ್ಡವರಾಗಿಬಿಟ್ಟರಾ ಅಂತ ಅವರು ಹೇಳಿದ್ರು. ಇದನ್ನೂ ಓದಿ: ನಟ, ಕೆಪಿಜೆಪಿ ಸ್ಥಾಪಕ ಉಪೇಂದ್ರಗೆ ಎಸ್.ಆರ್. ಹಿರೇಮಠ ಕಿವಿಮಾತು!
Advertisement
Advertisement
ಇದೇ ವೇಳೆ ಪಕ್ಷದ ಪರ ಪ್ರಚಾರ ಮಾಡಿದ ಅವರು, ಜನ ಈಗಿರುವ ರಾಜಕೀಯ ವ್ಯವಸ್ಥೆಗೆ ಬೇಸತ್ತು ಹೋಗಿದ್ದಾರೆ. ವಿಷಯಾಧಾರಿತ ರಾಜಕೀಯ ನಡೆಯುತ್ತಿದೆ. ಹೊಸ ರಾಜಕಾರಣಕ್ಕೆ ವೇದಿಕೆ ರೂಪಿಸಿದ್ದೇನೆ. ಸಾಕಷ್ಟು ಜನರು ನನ್ನ ಕೈಜೋಡಿಸುತ್ತಿದ್ದಾರೆ. ಕೇವಲ 20 ರಷ್ಟು ಜನರ ಕೈಯಲ್ಲಿ ಅಧಿಕಾರವಿದೆ. ಶೇ.80 ಜನರು ಸುಮ್ಮನಿದ್ದೇವೆ. ಅಕೌಂಟೆಬಿಲಿಟಿ ನಮಗೆ ಬೇಕಾಗಿದೆ. ಹಿಂದೆ ರಾಜರ ಆಡಳಿತ ಕಾಲವಿತ್ತು. ಈಗ ರಾಜಕಾರಣವಾಗಿದೆ ರಾಜಕೀಯ ವ್ಯವಸ್ಥೆ ಅಂದ್ರು.
Advertisement
ವಿಚಾರ ಇರೋರು ರಾಜಕಾರಣಕ್ಕೆ ಬರದಂತೆ ಹೆದರಿಸುತ್ತಾರೆ. ನಮ್ಮ ಮೈಂಡ್ ಸೆಟ್ ಹೇಗಾಗಿದೆ ಅಂದ್ರೆ ಹಣವಿದ್ರೆ ಮಾತ್ರ ರಾಜಕಾರಣ ಅಂತಾ ಆಗಿ ಹೋಗಿದೆ. ರಾಜ್ಯ ಮಟ್ಟದ ಪ್ಲಾನಿಂಗ್ ನಮ್ಮ ಪ್ರಣಾಳಿಕೆಯಲ್ಲಿದೆ. ಜನವರಿ ಅಂತ್ಯದವರೆಗೂ ಕೆಪಿಜೆಪಿ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡುವ ಉದ್ದೇಶ ಇದೆ. ಅರ್ಹತೆ ಇರುವ ಅಭ್ಯರ್ಥಿಗಳನ್ನ ಸಂದರ್ಶನ ಮಾಡಿ ಆಯ್ಕೆ ಮಾಡ್ತಿವಿ ಅಂತ ಅವರು ವಿವರಿಸಿದ್ರು.
https://www.youtube.com/watch?v=7C5QPHui87Y