ಸ್ಯಾಂಡಲ್‌ವುಡ್ ನಟ ಅನಂತ್‌ನಾಗ್ (Anant Nag) ಅವರು ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಕುರಿತು ‘ಪಬ್ಲಿಕ್ ಟಿವಿ’ಗೆ ಪ್ರತಿಕ್ರಿಯಿಸಿ, ಈ ಪ್ರಶಸ್ತಿ ಬಂದಿರೋದಕ್ಕೆ ಅನಂತ್‌ನಾಗ್ ಸಂತಸ ವ್ಯಕ್ತಪಡಿಸಿದ್ದಾರೆ. ಪದ್ಮಭೂಷಣ ಪ್ರಶಸ್ತಿಯನ್ನು ಕನ್ನಡಿಗರಿಗೆ ಅರ್ಪಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ:ಸ್ಯಾಂಡಲ್‌ವುಡ್ ನಟ ಅನಂತನಾಗ್‌ಗೆ ಪದ್ಮಭೂಷಣ ಪ್ರಶಸ್ತಿ
ಧನ್ಯವಾದಗಳು ಈ ಪ್ರಶಸ್ತಿ ಸಿಕ್ಕಿರೋದಕ್ಕೆ ನನಗೆ ಸಂತೋಷವಾಗಿದೆ. ವಿಶೇಷವಾಗಿ ಕನ್ನಡಿಗರು ಈ ಪ್ರಶಸ್ತಿ ನನಗೆ ಬರಬೇಕು ಅಂತ ಇಷ್ಟಪಟ್ಟಿದರು. ನಮ್ಮ ದೇಶದಲ್ಲಿ ಹಿಂದಿನಿಂದ ಪದ್ಮ ಪ್ರಶಸ್ತಿ ಕೊಡುವ ವ್ಯವಸ್ಥೆ ಬೇರೆ ಇತ್ತು. ಪಿಎಂ ಅವರು 3 ವರ್ಷಗಳ ಹಿಂದೆ ಪದ್ಮ ಪ್ರಶಸ್ತಿಯಲ್ಲಿ ಸಾರ್ವಜನಿಕರು ಭಾಗಿಯಾಗಬೇಕು ಅಂತ ಘೋಷಣೆ ಮಾಡಿದ್ದರು. ಬಳಿಕ ಕನ್ನಡಿಗರು ನನ್ನ ಹೆಸರನ್ನು ಸೂಚಿಸಿದ್ದರು. ಆ ವರ್ಷ ನನಗೆ ಪ್ರಶಸ್ತಿ ಬರಲಿಲ್ಲ. 3 ವರ್ಷಗಳಿಂದ ಹೀಗೆ ಆಗಿತ್ತು ಎಂದು ಅನಂತ್‌ನಾಗ್ ಮಾತನಾಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಕನ್ನಡಿಗರು ನನಗೆ ಪದ್ಮ ಪ್ರಶಸ್ತಿ ಬರಲಿ ಅಂತಾ ಅಭಿಯಾನ ನಡೆಸಿದ್ದರು. ಅಭಿಮಾನಿಗಳಿಗೆ ಈಗ ಸಂತೋಷವಾಗಿರೋದು ನನಗೂ ಸಂತೋಷವಾಗಿದೆ. ಪ್ರಶಸ್ತಿಯನ್ನು ಕನ್ನಡ ಪ್ರೇಕ್ಷಕರಿಗೆ, ಅಭಿಮಾನಿಗಳಿಗೆ ಅರ್ಪಿಸುತ್ತೇನೆ. ನಾಟಕರಂಗ ಹಾಗೂ ನನ್ನ ಗುರುಗಳಿಗೆ ಪ್ರಶಸ್ತಿ ಅರ್ಪಿಸುತ್ತೇನೆ ಎಂದು ಅನಂತ್‌ನಾಗ್ ಮಾತನಾಡಿದ್ದಾರೆ.