ಭಾರತೀಯ ಸಿನಿಮಾ ರಂಗದಲ್ಲಿ ಎಲ್ಲೆಲ್ಲೂ ‘ಪುಷ್ಪ’ ಚಿತ್ರದ್ದೇ ಹಾವಳಿ. ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಕಾಂಬಿನೇಷನ್ ನ ಈ ಸಿನಿಮಾ ಚಿತ್ರಕಥೆಗಿಂತಲೂ ಹೆಚ್ಚು ಫೇಮಸ್ ಆಗಿದ್ದ ಅದರ ಹಾಡುಗಳ ಮೂಲಕ. ಅದರಲ್ಲೂ ‘ಸಾಮಿ.. ಸಾಮಿ’ ಸಾಂಗ್ ದಾಖಲೆಯ ರೀತಿಯಲ್ಲಿ ರೀಚ್ ಆಯಿತು. ರೀಲ್ ನಲ್ಲಂತೂ ಮಿಲಿಯನ್ ಗಟ್ಟಲೇ ವಿಡಿಯೋ ಹರಿದಾಡಿತು. ಹೀಗಿತ್ತು ಚಿತ್ರದ ಹವಾ. ಇದನ್ನೂ ಓದಿ : ಪುನೀತ್ ಹುಟ್ಟುಹಬ್ಬಕ್ಕೆ ಹೊಸ ಸಾಂಗ್: ಒಂದಾಯಿತು ‘ಗೊಂಬೆ ಹೇಳತೈತೆ’ ಕಾಂಬಿನೇಷನ್
Advertisement
‘ಪುಷ್ಪ’ ಗೆಲುವಿನ ಹಿನ್ನೆಲೆಯಲ್ಲಿ ಶೀಘ್ರವಾಗಿ ‘ಪುಷ್ಪ 2’ ಚಿತ್ರ ಕೂಡ ಸೆಟ್ಟೇರಲಿದೆ ಎನ್ನುವ ಮಾಹಿತಿ ಇದೆ. ಅದಕ್ಕೂ ಮೊದಲು ಕನ್ನಡದಲ್ಲಿ ‘ಪುಷ್ಪ 10’ ಸುದ್ದಿ ಹರಿದಾಡುತ್ತಿದೆ. ಅದೇನು ಅಂತ ನಟ ಸೃಜನ್ ಲೋಕೇಶ್ ಹೇಳಿದ್ದಾರೆ ಓದಿ. ಇದನ್ನೂ ಓದಿ : ಕಿರುತೆರೆಯ ನಟ, ನಿರ್ದೇಶಕ ರವಿಕಿರಣ್ ಪುತ್ರ ಸಿನಿಮಾಗೆ ರಂಗಕ್ಕೆ ಎಂಟ್ರಿ
Advertisement
Advertisement
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ನಮ್ಮಮ್ಮ ಸೂಪರ್ ಸ್ಟಾರ್’ ಶೋನಲ್ಲಿ ತನ್ನ ಪಟಾಕಿ ಮಾತುಗಳ ಮೂಲಕವೇ ಫೇಮಸ್ ಆಗಿರುವ ಚೂಟಿ ಹುಡುಗಿ ವಂಶಿಕಾ. ಈಕೆ ನಟ ಮಾಸ್ಟರ್ ಆನಂದ್ ಅವರ ಪುತ್ರಿ. ಈ ಶೋನಲ್ಲಿ ಜಡ್ಜ್ ಆಗಿದ್ದಾರೆ ನಟ ಸೃಜನ್ ಲೋಕೇಶ್. ಈ ಶೋನಲ್ಲೇ ‘ಪುಷ್ಪ 10’ ಸಿನಿಮಾದ ಕುರಿತು ಪ್ರಸ್ತಾಪ ಆಗಿದೆ. ಇದನ್ನೂ ಓದಿ : ಪೂಜಾ ಹೆಗ್ಡೆ ಅವಕಾಶ ಕಿತ್ತುಕೊಂಡ ರಶ್ಮಿಕಾ ಮಂದಣ್ಣ
Advertisement
ಈ ವಾರದ ಎಪಿಸೋಡ್ ನಲ್ಲಿ ವಂಶಿಕಾ ‘ಪುಷ್ಪ’ ಸಿನಿಮಾದ ಫೇಮಸ್ ಸಾಂಗ್ ‘ಸಾಮಿ.. ಸಾಮಿ..’ಗೆ ಡಾನ್ಸ್ ಮಾಡಿದರು. ಅದು ಥೇಟ್ ರಶ್ಮಿಕಾ ಮಂದಣ್ಣ ಹಾಕಿರುವ ರೀತಿಯಲ್ಲೇ ಸ್ಟೆಪ್ ಹಾಕಿದರು. ಅದನ್ನು ಕಂಡ ಸೃಜನ್ ಲೋಕೇಶ್ ‘ವಂಶಿಕಾ.. ಪುಷ್ಪ 10 ನಲ್ಲಿ ನೀನೇ ಹೀರೋಯಿನ್, ಫಿಕ್ಸ್’ ಎಂದು ಕೊಂಡಾಡಿದರು. ಎಲ್ಲರೂ ಚಪ್ಪಾಳೆ ತಟ್ಟಿ ಆ ಮಗುವಿಗೆ ಪ್ರೋತ್ಸಾಹ ನೀಡಿದ್ದು ವಿಶೇಷವಾಗಿತ್ತು. ಇದನ್ನೂ ಓದಿ : ಚಕ್ಡಾ ಎಕ್ಸ್ ಪ್ರೆಸ್ ಸಿನಿಮಾಗಾಗಿ ಅನುಷ್ಕಾ ಬೌಲಿಂಗ್ ಪ್ರಾಕ್ಟಿಸ್
ಪ್ರತಿ ಎಪಿಸೋಡ್ ನಲ್ಲೂ ಒಂದಲ ಒಂದು ವಿಶೇಷತೆಯನ್ನು ಪ್ರದರ್ಶಿಸುವ ವಂಶಿಕಾ, ಈ ಬಾರಿಯಂತೂ ಸಖತ್ ಮನರಂಜನೆ ಕೊಟ್ಟರು. ಒಂದು ರೀತಿಯಲ್ಲಿ ಆ ಕಾರ್ಯಕ್ರಮಕ್ಕೆ ಹೆಚ್ಚು ರಂಗು ತುಂಬುತ್ತಿರುವುದೇ ವಂಶಿಕಾ ಎನ್ನುವಷ್ಟರ ಮಟ್ಟಿ ಆ ಶೋವನ್ನು ಆಕೆ ಆವರಿಸಿಕೊಂಡಿದ್ದಾರೆ.