ಬೆಂಗಳೂರು: ನಟ ನಿಖಿಲ್ ಕುಮಾರ್ ಸ್ವಾಮಿ ಅಭಿನಯದ `ಸೀತಾರಾಮ ಕಲ್ಯಾಣ’ ಸಿನಿಮಾ ಶೂಟಿಂಗ್ ಸೆಟ್ ಗೆ ಹಿರಿಯ ನಟ ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಭೇಟಿ ಕೊಟ್ಟಿದ್ದಾರೆ.
ಶುಕ್ರವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ `ಸೀತಾರಾಮ ಕಲ್ಯಾಣ’ ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಸಂಜೆ ಸುಮಾರು 5:30ಕ್ಕೆ ಸಿನಿಮಾ ಸೆಟ್ ಗೆ ಅಭಿಷೇಕ್ ಭೇಟಿಕೊಟ್ಟು, ನಿಖಿಲ್ ಅವರ ಸಾಹಸ ದೃಶ್ಯಗಳ ಚಿತ್ರೀಕರಣವನ್ನು ವೀಕ್ಷಿಸಿದ್ದಾರೆ. ಇದನ್ನೂ ಓದಿ: ಅಪ್ಪ ಅಧಿಕಾರದಲ್ಲಿರುವಾಗ್ಲೇ ರಾಜಕೀಯಕ್ಕೆ ಎಂಟ್ರಿ ಕೊಡಿ- ತೆಲಂಗಾಣ ಸಿಎಂ ಪುತ್ರನಿಂದ ನಿಖಿಲ್ ಗೆ ಬುದ್ಧಿಮಾತು
Advertisement
ಈ ಹಿಂದೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಕೂಡ ತಮ್ಮ ಬ್ಯುಸಿ ಕೆಲಸದಲ್ಲೂ ಮಗನ ಶೂಟಿಂಗ್ ನೋಡಲು ಹೋಗಿದ್ದರು. ಅಭಿಷೇಕ್ ಭೇಟಿಕೊಟ್ಟ ಬಗ್ಗೆ ನಿಖಿಲ್ ಅವರು ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದರು.
Advertisement
`ಸೀತಾರಾಮ ಕಲ್ಯಾಣ’ ಸಿನಿಮಾ ಹರ್ಷ ಸಾರಥ್ಯದಲ್ಲಿ ಮೂಡಿ ಬರುತ್ತಿದ್ದು, ಚಿತ್ರದಲ್ಲಿ ರಚಿತಾ ರಾಮ್ ಮೊದಲ ಬಾರಿಗೆ ನಿಖಲ್ ಅವರಿಗೆ ನಾಯಕಿಯಾಗಿ ಬಣ್ಣಹಚ್ಚಿದ್ದಾರೆ. ಸಾಹಸನಿರ್ದೇಶಕ ರಾಮ್ ಲಕ್ಷ್ಮನ್ ನಿರ್ದೇಶನದಲ್ಲಿ ಫೈಟ್ ಸೀನ್ ಶೂಟ್ ಮಾಡಲಾಗುತ್ತಿತ್ತು.