Connect with us

Cinema

ಅಂಬಿ ಪಾರ್ಥಿವ ಶರೀರ ಇಟ್ಟಿದ್ದ ಜಾಗದಲ್ಲಿ ಅಭಿಮಾನಿಯ ಗೋಳಾಟ

Published

on

ಮಂಡ್ಯ: ಅಭಿಮಾನಿಯೊಬ್ಬರು ಹಿರಿಯ ನಟ ಅಂಬರೀಶ್ ಅವರ ಪಾರ್ಥಿವ ಶರೀರ ಇದ್ದ ಸ್ಥಳದಲ್ಲಿ ಕುಳಿತು ಬಿಕ್ಕಿ ಬಿಕ್ಕಿ ಅಳುವ ಮೂಲಕ ತನ್ನ ದುಃಖವನ್ನು ವ್ಯಕ್ತಪಡಿಸಿದ್ದಾರೆ.

ಭಾನುವಾರ ಸಂಜೆಯಿಂದ ಸೋಮವಾರ ಬೆಳಗ್ಗೆಯವರೆಗೆ ಅಂಬಿ ಪಾರ್ಥಿವ ಶರೀರವನ್ನು ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸಾರ್ವಜನಿಕರ ದರ್ಶನಕ್ಕಾಗಿ ಇಡಲಾಗಿತ್ತು. ಇಂದು ಬೆಳಗ್ಗೆ 10.53ಕ್ಕೆ ಸೇನಾ ಹೆಲಿಕಾಪ್ಟರ್ ಮೂಲಕ ಪಾರ್ಥಿವ ಶರೀರವನ್ನು ಬೆಂಗಳೂರಿನ ಎಚ್‍ಎಎಲ್‍ಗೆ ತಂದು ಅಲ್ಲಿಂದ ಕಂಠೀರವ ಕ್ರೀಡಾಂಗಣಕ್ಕೆ ಅಂಬುಲೆನ್ಸ್ ಮೂಲಕ ತರಲಾಗಿದೆ.

ಅಂಬರೀಶ್ ಪಾರ್ಥಿವ ಶರೀರ ಮಂಡ್ಯದಿಂದ ನಿರ್ಗಮಿಸಿದ ಬಳಿಕ ಅಭಿಮಾನಿಯೊಬ್ಬರು ಪಾರ್ಥಿವ ಶರೀರ ಇಟ್ಟಿದ್ದ ಸ್ಥಳದಲ್ಲಿ ಕುಳಿತು ಗೋಳಾಡಿದ್ದಾರೆ.

ಅಂಬಿ ಪಾರ್ಥಿವ ಶರೀರ ಇಟ್ಟ ಜಾಗದಲ್ಲಿ ಕುಳಿತು, ಇಲ್ಲಿಂದ ನಾನು ಹೋಗಲ್ಲ. ನೀವಿಲ್ಲದೇ ನಾವಿರಲು ಸಾಧ್ಯವಿಲ್ಲ. ನಾನು ನಿಮ್ಮೊಂದಿಗೆ ಬರುತ್ತೇನೆ ಎಂದು ಕಣ್ಣೀರು ಹಾಕಿದ್ದಾರೆ. ಬಳಿಕ ಅಲ್ಲಿ ನಿಯೋಜನೆಗೊಂಡಿದ್ದ ಪೊಲೀಸರು ಅಭಿಮಾನಿಯ ಮನವೊಲಿಸಿ ಕರೆದುಕೊಂಡು ಹೋಗಲು ಹರಸಾಹಸ ಪಟ್ಟಿದ್ದಾರೆ.

ಭಾನುವಾರ ಸಂಜೆಯಿಂದ ಮಂಡ್ಯ ಜಿಲ್ಲೆಯ ಲಕ್ಷಾಂತರ ಮಂದಿ ಅಂಬರೀಶ್ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಅಂಬರೀಶ್ ಅವರ ಅಂತಿಮ ದರ್ಶನ ಪಡೆಯುವ ವೇಳೆ ಮಂಡ್ಯ ಜನತೆ ತಾಳ್ಮೆ ಮತ್ತು ಸಂಯಮವನ್ನು ಪ್ರದರ್ಶಿಸಿದ್ದಾರೆ. ಸತತ 18 ಗಂಟೆಗಳ ಕಾಲ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಈ ಸಮಯದಲ್ಲಿ ಒಂದು ಅಹಿತಕರ ಘಟನೆಯೂ ನಡೆಯದೇ ಸೂಸುತ್ರವಾಗಿ ಕಾರ್ಯ ನಡೆದಿದೆ.

https://www.youtube.com/watch?v=EdRmEJPlhQ8

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *