ಮಂಡ್ಯ: ಕಳೆದ ಕೆಲ ದಿನಗಳ ಹಿಂದೆ ಭೀಕರ ಅಪಘಾತದಲ್ಲಿ ಮೃತಪಟ್ಟ ಅಭಿಮಾನಿಯ ಮನೆಗೆ ರೆಬಲ್ ಸ್ಟಾರ್ ಅಂಬರೀಶ್ ಭೇಟಿ ನೀಡಿದ್ದರು. ಈ ವೇಳೆ ಅಭಿಮಾನಿಯನ್ನು ನೆನೆದ ಅವರು ಒಂದು ಕ್ಷಣ ಮೌನವಾಗಿ ಭಾವುಕರಾಗಿದ್ದರು.
ಮಂಡ್ಯ ವಿವಿ ನಗರದ ಅಂಬರೀಶ್ ಅಭಿಮಾನಿ ರಫಿಕ್ ಗುತ್ತಲು ರಸ್ತೆಯಲ್ಲಿ ನಡೆದ ಭೀಕರ ಲಾರಿ ಅಪಘಾತದಲ್ಲಿ ಅಸುನೀಗಿದ್ದರು. ಹೀಗಾಗಿ ಇಂದು ತಮ್ಮ ಅಭಿಮಾನಿ ರಫಿಕ್ ಮನೆಗೆ ಭೇಟಿ ನೀಡಿದ ಅಂಬರೀಶ್ ರಫಿಕ್ ನೆನೆದು ಭಾವುಕರಾದರು.
ಈ ವೇಳೆ ಮಾತನಾಡಿದ ಅಂಬರೀಶ್ ರಫಿಕ್‍ಗೆ ನನ್ನ ಕಂಡರೆ ಅಪಾರ ಪ್ರೀತಿ. ಹೀಗಾಗಿ ನನ್ನ ಮಗ ಅಭಿಷೇಕ್, ರಫಿಕ್ ಮನೆಗೆ ಹೋಗಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ ಬರಬೇಕು ಎಂದು ತಿಳಿಸಿದ್ದ. ರಫಿಕ್ ನನ್ನ ಮಗನ ಮನಸ್ಸಿಗೂ ತಾಕಿದ್ದಾನೆ ಎಂದು ಹೇಳಿ ಒಂದು ಕ್ಷಣ ಭಾವುಕರಾದರು. ಅಲ್ಲದೆ ಮೊನ್ನೆ ಅಂಬರೀಶ್ ಅವರ ಸಿನಿಮಾ ತೆರೆಕಂಡ ದಿನ ಕೂಡ ರಫಿಕ್ ಅಂಬರೀಶ್ ಅವರಿಗೆ ಕರೆ ಮಾಡಿ ಮಾತನಾಡಿದ್ದನ್ನು ನೆನೆದು ವಿಷಾದ ವ್ಯಕ್ತಪಡಿಸಿದರು. ಇದನ್ನೂ ಓದಿ: ಮಂಡ್ಯದಲ್ಲಿ ಲಾರಿ ಹರಿದು ಐವರು ಪಾದಚಾರಿಗಳ ದಾರುಣ ಸಾವು
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv