ಬೆಂಗಳೂರು: ಹಿರಿಯ ನಟ, ರೆಬೆಲ್ ಸ್ಟಾರ್ ಅಂಬರೀಶ್ ಅವರು ನಮ್ಮೆಲ್ಲರನ್ನೂ ಅಗಲಿ ಇಂದಿಗೆ ಒಂದು ತಿಂಗಳು ಕಳೆದಿದೆ.
ನವೆಂಬರ್ 24 ಶನಿವಾರ ರಾತ್ರಿ ಅನಾರೋಗ್ಯದ ಕಾರಣ ಅಂಬರೀಶ್ ಅವರನ್ನು ವಿಕ್ರಂ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದ್ರೆ ಅಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆಸಿದ್ದರು. ಬಳಿಕ ಅವರ ಮೃತದೇಹವನ್ನು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಇರಿಸಲಾಗಿದ್ದು, ಸಿನಿಮಾ ರಂಗದವರು ಮತ್ತು ಆತ್ಮೀಯರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
Advertisement
Advertisement
ಅಂಬರೀಶ್ ಅವರು ಮಂಡ್ಯದ ಗಂಡು ಎಂದೇ ಖ್ಯಾತಿ ಪಡೆದಿದ್ದರು. ಆದ್ದರಿಂದ ಅವರ ಮೃತದೇಹವನ್ನು ಭಾನುವಾರ ಹುಟ್ಟೂರಿಗೆ ಕೊಂಡೊಯ್ದು, ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ಸೋಮವಾರ ಅಲ್ಲಿಂದ ವಿಮಾನದ ಮೂಲಕ ಅಂಬರೀಶ್ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತರಲಾಗಿದ್ದು, ಮೆರವಣಿಗೆ ಮೂಲಕ ಕಂಠೀರವ ಸ್ಟುಡಿಯೋಗೆ ತೆರಳಲಾಯಿತು. ಅಲ್ಲಿ ಸಂಜೆ 6 ಗಂಟೆ ಸುಮಾರಿಗೆ ಅವರ ಅಂತ್ಯಕ್ರಿಯೆ ಮಾಡಲಾಗಿತ್ತು. ಪುತ್ರ ಅಭಿಷೇಕ್ ಅಗ್ನಿ ಸ್ಪರ್ಶ ನೆರವೇರಿಸಿದ್ದರು. ಈ ವೇಳೆ ಕುಟುಂಬಸ್ಥರು, ಚಿತ್ರೋದ್ಯಮದ ಗಣ್ಯರು, ರಾಜಕಾರಣಿಗಳು ಸೇರಿದಂತೆ ಸಾವಿರಾರು ಅಭಿಮಾನಿಗಳು ಈ ವೇಳೆ ಭಾಗಿಯಾಗಿದ್ದರು.
Advertisement
ಸಿಮೆಂಟ್, ಇಟ್ಟಿಗೆಯಿಂದ 16*16 ಸುತ್ತಳತೆಯಲ್ಲಿ ನಿರ್ಮಾಣಗೊಂಡಿದ್ದ ಚಿತೆಗೆ ವಿಕಿ ಆರ್ಟ್ಸ್ ವತಿಯಿಂದ ಕಲಾಸ್ಪರ್ಶ ನೀಡಲಾಗಿತ್ತು. ಅಂಬಿ ಅಭಿಮಾನಿಗಳಾದ 5 ಜನ ಕಲಾವಿದರು ಅಂಬರೀಶ್ ಹಾಗೂ ಸೂರ್ಯ ಮುಳುಗುತ್ತಿರುವ ಪರಿಸರ ದೃಶ್ಯವನ್ನು ಚಿತೆಯ ಮೇಲೆ ಬಿಡಿಸಿ, ಕನ್ನಡ ಚಿತ್ರರಂಗದ ಭೀಷ್ಮ ಇನ್ನಿಲ್ಲ ಅಂತ ಬರೆದಿದ್ದರು. ಎಲ್ಲರಿಗೂ ಕಾಣಿಸಲೆಂದು ಒಂದೂವರೆ ಅಡಿ ಎತ್ತರದಲ್ಲಿ ಚಿತೆಯನ್ನು ನಿರ್ಮಾಣ ಮಾಡಲಾಗಿತ್ತು. ಚಿತೆಗೆ 500 ಕೆ.ಜಿ ಕಟ್ಟಿಗೆಯಲ್ಲಿ 300 ಶ್ರೀಗಂಧವನ್ನು ಬಳಸಲಾಗಿತ್ತು. ಉಳಿದ 200 ಕೆಜಿ ಹುಣಸೆ, ಸಾಮೆ, ಸರ್ವೆ ಹಾಗೂ ನೀಲಗಿರಿ ಮರಗಳ ಕಟ್ಟಿಗೆ ಬಳಕೆ ಮಾಡಲಾಗಿತ್ತು. ಜೊತೆಗೆ 30 ಕೆ.ಜಿ. ಕರ್ಪೂರವನ್ನು ಚಿತೆಗೆ ಹಾಕಲಾಗಿತ್ತು.
Advertisement
ನಟ ಅಂಬರೀಶ್ ಅವರ ಅಗಲಿಕೆಗೆ ಇಡೀ ಭಾರತೀಯ ಸಿನಿಮಾರಂಗದವರೇ ಕಣ್ಣೀರಿಟ್ಟಿತ್ತು. ಬಳಿಕ ಪ್ರತಿ ಜಿಲ್ಲೆಯಲ್ಲೂ ಅವರ ಅಭಿಮಾನಿಗಳು ಪುಣ್ಯತಿಥಿ ಕಾರ್ಯಕ್ರಮ ಮಾಡಿದ್ದರು. ಅಂಬರೀಶ್ ಮೃತ ಮಟ್ಟ ಕೆಲವು ದಿನಗಳಲ್ಲೇ ಅವರ ಮದುವೆ ವಾರ್ಷಿಕೋತ್ಸವವಿತ್ತು. ಅಂದಿನ ದಿನ ಸುಮಲತಾ ಅವರು ಅಂಬರೀಶ್ ಬಗ್ಗೆ ಬರೆದು ಒಂದು ಭಾವನಾತ್ಮಕ ಪೋಸ್ಟ್ ಹಾಕಿದ್ದರು. ಪುತ್ರ ಅಭಿಷೇಕ್ ಕೂಡ ಮತ್ತೆ ತನ್ನ ಉದ್ಯೂಗದತ್ತ ಮುಖ ಮಾಡಿದ್ದು, ಅಪ್ಪನ ಫೋಟೋ ಕೈಯಲ್ಲಿ ಹಿಡಿದ ತನ್ನ ಫೋಟೋವನ್ನು ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದರು. ಆ ಫೋಟೋದ ಮೇಲೆ ನನ್ನ ತಂದೆ ರೆಬೆಲ್ ನನ್ನನ್ನು ನೋಡುತ್ತಿದ್ದಾರೆ. ಮತ್ತೆ ಕೆಲಸದತ್ತ ಮುಖಮಾಡುವುದಾಗಿ ಬರೆದುಕೊಂಡಿದ್ದರು.
https://www.youtube.com/watch?v=jlNS3zR6NqQ
https://www.youtube.com/watch?v=1zAHuxijg6Q
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv