ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅವರು ‘ಪುಷ್ಪ 2’ (Pushpa 2) ಕಾಲ್ತುಳಿತ ವಿವಾದದ ಬಳಿಕ ಎಚ್ಚೆತ್ತುಕೊಂಡಿದ್ದಾರೆ. ‘ಪುಷ್ಪ 2’ ಕಾಲ್ತುಳಿತ ಪ್ರಕರಣದ ವಿಚಾರದಲ್ಲಿ ಬೇಲ್‌ನಲ್ಲಿರುವ ಅಲ್ಲು ಅರ್ಜುನ್ (Allu Arjun) ಸದ್ಯ ದಿಟ್ಟ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ. ತಮಗಾಗಿ ವಕ್ತಾರರನ್ನು ನೇಮಿಸಲು ಅವರು ಮುಂದಾಗಿದ್ದಾರೆ.
ವಿವಾದಗಳಿಂದ ತಪ್ಪಿಸಿಕೊಳ್ಳಲು ಮಾಧ್ಯಮಗಳ ಜೊತೆ ಹಾಗೂ ಅಭಿಮಾನಿಗಳಿಗೆ ತಮ್ಮ ಸಿನಿಮಾಗಳ ಅಪ್‌ಡೇಟ್ ಕೊಡಲು ವಕ್ತಾರರನ್ನು ನೇಮಿಸೋದು ಸೂಕ್ತ ಎಂದು ನಟ ನಿರ್ಧರಿಸಿದ್ದು, ಇನ್ಮುಂದೆ ವಕ್ತಾರರೇ ಮಾಹಿತಿ ನೀಡಲಿದ್ದಾರೆ.
ಇನ್ನೂ ‘ಪುಷ್ಪ 2’ ಸಿನಿಮಾ ಅಲ್ಲು ಅರ್ಜುನ್‌ಗೆ ಯಶಸ್ಸು ಕೊಟ್ಟಿದೆ. ಸಿನಿಮಾದ ಪ್ರೀಮಿಯರ್ ವೇಳೆ ಓರ್ವ ಮಹಿಳೆ ಸಾವನ್ನಪ್ಪಿದ ಘಟನೆಯಿಂದ ಅಷ್ಟೇ ತೊಂದರೆ ಕೂಡ ಅನುಭವಿಸಿದರು. ಇದರಿಂದ ಅವರ ಬಗ್ಗೆ ಅನಾವಶ್ಯಕ ಸುದ್ದಿಗಳು ಮತ್ತು ಸಿನಿಮಾ ಬಗ್ಗೆ ತಪ್ಪು ಮಾಹಿತಿಗಳು ವೈರಲ್ ಆಗೋಕೆ ಶುರುವಾಯ್ತು. ಹಾಗಾಗಿ ಅಲ್ಲು ಅರ್ಜುನ್ ವಕ್ತಾರರನ್ನು ನೇಮಿಸಿಕೊಳ್ಳುವ ಪ್ಲ್ಯಾನ್‌ನಲ್ಲಿದ್ದಾರೆ. ಮಾರ್ಚ್‌ನಿಂದ ಇದು ಜಾರಿಗೆ ಬರಲಿದೆ ಎಂದು ‘ತಾಂಡೇಲ್’ ಚಿತ್ರದ ಪ್ರಚಾರದ ವೇಳೆ, ಅಲ್ಲು ಅರ್ಜುನ್ ಆಪ್ತ ನಿರ್ಮಾಪಕ ಬನ್ನಿ ವಾಸ್ ರಿವೀಲ್ ಮಾಡಿದ್ದಾರೆ.
ಇನ್ನೂ ‘ಪುಷ್ಪ’, ‘ಪುಷ್ಪ 2’ ಸಿನಿಮಾಗಳ ಸಕ್ಸಸ್ ಬಳಿಕ ತ್ರಿವಿಕ್ರಂ ಶ್ರೀನಿವಾಸ್ ಜೊತೆ ಅಲ್ಲು ಅರ್ಜುನ್ ಕೈಜೋಡಿಸಿದ್ದಾರೆ. ಆ ನಂತರ ತಂದೆ ಅಲ್ಲು ಅರವಿಂದ್ ಬ್ಯಾನರ್‌ನಲ್ಲಿ ಹೊಸ ಸಿನಿಮಾ ಮಾಡಲಿದ್ದಾರೆ. ಬಳಿಕ ‘ಪುಷ್ಪ 3’ ಸಿನಿಮಾ ಶುರುವಾಗಲಿದೆ. ಪಾರ್ಟ್ 3 ಬರೋದು ಅಧಿಕೃತವಾಗಿದೆ. ಆದರೆ ಯಾವಾಗ? ಎಂಬುದು ಚಿತ್ರತಂಡ ತಿಳಿಸುವವರೆಗೂ ಕಾದುನೋಡಬೇಕಿದೆ.