ಕನ್ನಡತಿ ಶ್ರೀಲೀಲಾ ‘ಪುಷ್ಪ 2’ (Pushpa 2) ಸಿನಿಮಾದಲ್ಲಿ ‘ಕಿಸ್ಸಿಕ್’ ಹಾಡಿಗೆ ಸೊಂಟ ಬಳುಕಿಸಿ ಪಡ್ಡೆಹುಡುಗರ ನಿದ್ದೆ ಕದ್ದಿದ್ದಾರೆ. ಇದೀಗ ಸಿನಿಮಾ ಪ್ರಚಾರದ ವೇಳೆ, ಶ್ರೀಲೀಲಾರನ್ನು (Sreeleela) ಅಲ್ಲು ಅರ್ಜುನ್ ಹಾಡಿ ಹೊಗಳಿದ್ದಾರೆ. ಇದನ್ನೂ ಓದಿ:BBK 11: ಶಿಶಿರ್ ಹೆಣ್ಮಕ್ಕಳ ಹಿಂದೆ ಸುತ್ತೋ ಜೊಲ್ಲ ಎಂದ್ರಾ ಚೈತ್ರಾ?- ರಣರಂಗವಾಯ್ತು ದೊಡ್ಮನೆ
ಅಲ್ಲು ಅರ್ಜುನ್ (Allu Arjun) ಮಾತನಾಡಿ, ಶ್ರೀಲೀಲಾಗೆ ಚಿತ್ರರಂಗದಲ್ಲಿ ಉತ್ತಮ ಭವಿಷ್ಯವಿದೆ. ಶ್ರೀಲೀಲಾ ಕ್ಯೂಟ್, ಪ್ರತಿಭಾನ್ವಿತ ನಟಿ. ತೆಲುಗು ಹೆಣ್ಣು ಮಕ್ಕಳಿಗೆ ಆಕೆ ಸ್ಫೂರ್ತಿ ಎಂದು ಕೊಂಡಾಡಿದ್ದಾರೆ.
ಅಂದಹಾಗೆ, ಡಿ.5ರಂದು ‘ಪುಷ್ಪ 2’ ಸಿನಿಮಾಗೆ ಬಹುಭಾಷೆಗಳಲ್ಲಿ ರಿಲೀಸ್ ಆಗಲಿದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ‘(Rashmika Mandanna), ಶ್ರೀಲೀಲಾ, ಡಾಲಿ, ಅನಸೂಯ, ಫಹಾದ್ ಫಾಸಿಲ್ ಸೇರಿದಂತೆ ಅನೇಕರು ನಟಿಸಿದ್ದಾರೆ.