ಸಂಧ್ಯಾ ಥಿಯೇಟರ್ ದುರಂತ ಪ್ರಕರಣ ಸಂಬಂಧ ಅಲ್ಲು ಅರ್ಜುನ್‌ಗೆ (Allu Arjun) 14 ದಿನ ನ್ಯಾಯಾಂಗ ಬಂಧನ ವಿಧಿಸಿದ ಬೆನ್ನಲ್ಲೇ ಈ ಕುರಿತು ಪರ ವಿರೋಧದ ಚರ್ಚೆ ಶುರುವಾಗಿದೆ. ಅಲ್ಲು ಅಭಿಮಾನಿಗಳು ಬಂಧನಕ್ಕೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿರನ್ನು (CM Revanth Reddy) ದೂರಿದ್ದಾರೆ. ಇದರಲ್ಲಿ ರಾಜಕೀಯ ಕೈವಾಡವಿದೆ ಎಂಬ ಗುಮಾನಿ ಕೂಡ ಹಬ್ಬಿದೆ.
ಅಲ್ಲು ಅರ್ಜುನ್ ಬಂಧನದ ಬೆನ್ನಲ್ಲೇ ಈ ಹಿಂದೆ ‘ಪುಷ್ಪ 2’ (Pushpa 2) ಸಕ್ಸಸ್ ಈವೆಂಟ್‌ನಲ್ಲಿ ನಟ ಮಾತನಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದನ್ನೂ ಓದಿ:1 ತಿಂಗಳ ಹಿಂದೆಯಷ್ಟೇ ನೀತಿ ಸಂಹಿತೆ ಉಲ್ಲಂಘನೆ ಕೇಸ್‌ನಿಂದ ರಿಲೀಫ್ ಪಡೆದಿದ್ದ ಅಲ್ಲು ಅರ್ಜುನ್
Allu Arjun forgetting the name of Revanth Reddy pic.twitter.com/avhvYzGw0h
— HARSHA VARDHAN (@HarshaMadman) December 13, 2024
ಸಕ್ಸಸ್ ಮೀಟ್ ಕಾರ್ಯಕ್ರಮದಲ್ಲಿ ಅಲ್ಲು ಅರ್ಜುನ್ ಸಿನಿಮಾಗೆ ಸಂಬಂಧಿಸಿದ ಅನೇಕರಿಗೆ ಥ್ಯಾಂಕ್ಯೂ ಹೇಳಿದರು. ಈ ವೇಳೆ, ತೆಲಂಗಾಣದ ಸಿಎಂ ರೇವಂತ್ ರೆಡ್ಡಿ ಹೆಸರನ್ನು ಹೇಳುವುದನ್ನು ಮರೆತಿದ್ದರು. ಸಿಎಂ ಹೆಸರನ್ನು ಹೇಳಲು ಅರ್ಜುನ್ ತಡವರಿಸಿದ್ದ ವಿಡಿಯೋ ಸದ್ದು ಮಾಡುತ್ತಿದೆ. ಹಾಗಾಗಿ ಅಭಿಮಾನಿಗಳು ನಟನನ್ನು ಬಂಧಿಸಿರುವುದಕ್ಕೆ ರೇವಂತ್ ರೆಡ್ಡಿ ಕೈವಾಡವಿದೆ ಎಂದು ದೂರುತ್ತಿದ್ದಾರೆ ಅಲ್ಲು ಫ್ಯಾನ್ಸ್.
షాకింగ్
అల్లు అర్జున్ అరెస్ట్..
Revanth Reddy Revange ????#AlluArjun pic.twitter.com/RSe45HRQVV
— ???????????????????? ???????????????????? ???????????????? (@KethiReddy_Adda) December 13, 2024
ಸಿಎಂ ಹೆಸರು ಹೇಳಲು ತಡವರಿಸಿದ ಅಲ್ಲು ನಂತರ ಒಂದು ಗ್ಲಾಸ್ ನೀರು ಕುಡಿದು ರೇವಂತ್ ರೆಡ್ಡಿ ಹೆಸರನ್ನು ಹೇಳಿ ಧನ್ಯವಾದ ಅರ್ಪಿಸಿದ್ದರು. ಈ ಕಾರ್ಯಕ್ರಮ ಕೆಲ ದಿನಗಳ ಮೊದಲೇ ನಡೆದಿದ್ದರೂ ಅಲ್ಲು ಅರ್ಜುನ್ ಬಂಧನದ ಬಳಿಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Allu Arjun forgetting the name of Revanth Reddy pic.twitter.com/avhvYzGw0h
— HARSHA VARDHAN (@HarshaMadman) December 13, 2024
ಇನ್ನೂ ವಿಡಿಯೋ ವೈರಲ್ ಆದ ಬೆನ್ನಲ್ಲೇ ಸಿಎಂ ರೇವಂತ್ ರೆಡ್ಡಿ ಕೂಡ ರಿಯಾಕ್ಟ್ ಮಾಡಿದ್ದಾರೆ. ಅಲ್ಲು ಅರ್ಜುನ್ ವಿಚಾರದಲ್ಲಿ ಕಾನೂನು ತನ್ನ ಕೆಲಸ ಮಾಡಲಿದೆ. ಅವರ ಬಂಧನದಲ್ಲಿ ನನ್ನ ಹಸ್ತಕ್ಷೇಪವಿಲ್ಲ. ಕಾನೂನಿನ ಮುಂದೆ ಎಲ್ಲರೂ ಸಮಾನರು. ಕಾನೂನು ಪ್ರಕ್ರಿಯೆ ನಡೆಸಲಾಗುವುದು ಎಂದು ರೇವಂತ್ ರೆಡ್ಡಿ ಹೇಳಿದ್ದಾರೆ.