ಬಾಲಿವುಡ್ ನಟ ಅಕ್ಷಯ್ ಕುಮಾರ್ (Akshay Kumar) ಅವರು ಲಾಯರ್ (Lawyer) ಆಗಿ ಬೆಳ್ಳಿಪರದೆಯಲ್ಲಿ ಅಬ್ಬರಿಸಲು ಸಜ್ಜಾಗಿದ್ದಾರೆ. ಲಾಯರ್ ಸಿ. ಶಂಕರನ್ ನಾಯರ್ (C. Sankaran Nair) ಬಯೋಪಿಕ್‌ನಲ್ಲಿ ಅಕ್ಷಯ್ ಕುಮಾರ್ ಜೊತೆ ನಟಿಸಲು ಅನನ್ಯಾ ಪಾಂಡೆ (Ananya Panday) ಮತ್ತು ತಮಿಳು ನಟ ಆರ್. ಮಾಧವನ್ (R.Madhavan) ಕೈಜೋಡಿಸಿದ್ದಾರೆ.
ಸಿನಿಮಾದಿಂದ ಸಿನಿಮಾಗೆ ಭಿನ್ನ ಪಾತ್ರಗಳನ್ನು ಆಯ್ಕೆ ಮಾಡೋ ಅಕ್ಷಯ್ ಕುಮಾರ್ ಈಗ ಕಪ್ಪು ಕೋಟ್ ಧರಿಸಿ ಲಾಯರ್ ಆಗಿ ನ್ಯಾಯದ ಪಾಠ ಮಾಡಲು ರೆಡಿಯಾಗಿದ್ದಾರೆ. ಖ್ಯಾತ ಅಡ್ವೋಕೇಟ್ ಸಿ. ಶಂಕರನ್ ನಾಯರ್ ಜೀವನ ಆಧರಿಸಿದ ಕಥೆಯಲ್ಲಿ ಅಕ್ಷಯ್ ಲೀಡ್ ರೋಲ್‌ನಲ್ಲಿ ನಟಿಸುತ್ತಿದ್ದಾರೆ. ಇದನ್ನೂ ಓದಿ:‘ಶೇರ್ಷಾ’ ಬಳಿಕ ಮತ್ತೊಂದು ಲವ್ ಸ್ಟೋರಿ ಸಿನಿಮಾದಲ್ಲಿ ಸಿದ್ಧಾರ್ಥ್, ಕಿಯಾರಾ?
View this post on Instagram
ಅಕ್ಷಯ್ ಕುಮಾರ್ ಜೊತೆ ಅನನ್ಯಾ ಪಾಂಡೆ ಮತ್ತು ತಮಿಳು ನಟ ಆರ್. ಮಾಧವನ್ ಕೂಡ ಕಾಣಿಸಿಕೊಳ್ತಿದ್ದಾರೆ. ಅವರ ಪಾತ್ರಕ್ಕೂ ಪ್ರಾಮುಖ್ಯತೆ ಇದೆ. ಕರಣ್ ಜೋಹರ್ ಈ ಚಿತ್ರವನ್ನು ನಿರ್ಮಾಣ ಮಾಡೋದಾಗಿ ಅನೌನ್ಸ್ ಮಾಡಿದ್ದು, ಮುಂದಿನ ವರ್ಷ ಮಾರ್ಚ್ 14ರಂದು ರಿಲೀಸ್ ಆಗಲಿದೆ ಎಂದು ಘೋಷಿಸಿದ್ದಾರೆ.
ಇನ್ನೂ ಅಕ್ಷಯ್ ನಟನೆಯ ಸಾಲು ಸಾಲು ಸಿನಿಮಾಗಳು ಚಿತ್ರಮಂದಿರದಲ್ಲಿ ಮಕಾಡೆ ಮಲಗಿವೆ. ಹಾಗಾಗಿ ಒಂದು ಗೆಲುವಿಗಾಗಿ ಎದುರು ನೋಡ್ತಿರುವ ನಟನಿಗೆ ಈ ಚಿತ್ರ ಕೈಹಿಡಿಯುತ್ತಾ? ಕಾದುನೋಡಬೇಕಿದೆ.