ಅಕ್ಷಯ್ ನಟನೆಯ ‘ವೆಲ್‌ಕಮ್ 3’ ಸಿನಿಮಾದಲ್ಲಿ ಸ್ಟಾರ್ ಕಲಾವಿದರ ದಂಡು

Public TV
1 Min Read
akshay kumar

ಬಾಲಿವುಡ್ ನಟ ಅಕ್ಷಯ್ ಕುಮಾರ್ (Akshay Kumar) ಬ್ಯಾಕ್ ಟು ಬ್ಯಾಕ್ ಹೊಸ ಪ್ರಾಜೆಕ್ಟ್‌ಗಳನ್ನ ಒಪ್ಪಿಕೊಳ್ಳುತ್ತಿದ್ದಾರೆ. ವೆಲ್‌ಕಮ್ ಪಾರ್ಟ್ 1 & 2 ಬಳಿಕ ವೆಲ್‌ಕಮ್ -3 (Welcome 3) ಸಿನಿಮಾ ಬಗ್ಗೆ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಚಿತ್ರದ ಟೈಟಲ್ ಟೀಸರ್ ರಿಲೀಸ್ ಆಗಿದ್ದು, ಅಭಿಮಾನಿಗಳ ಗಮನ ಸೆಳೆಯುತ್ತಿದೆ.

Akshay Kumar 3

‘ವೆಲ್‌ಕಮ್ ಟು ದಿ ಜಂಗಲ್’ ಎಂದು ಟೈಟಲ್ ಅನಾವರಣಗೊಂಡಿದೆ. ಅಕ್ಷಯ್ ಕುಮಾರ್, ದಿಶಾ ಪಟಾಣಿ, ಸುನೀಲ್ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್(Raveena Tandon), ಲಾರಾ ದತ್, ಜಾಕ್ವೆಲಿನ್, ಸೇರಿದಂತೆ ಹಲವು ಸ್ಟಾರ್ ಕಲಾವಿದರ ದಂಡೇ ಸಿನಿಮಾದಲ್ಲಿದೆ. ಇದನ್ನೂ ಓದಿ:‘ಬೇಡರ ಕಣ್ಣಪ್ಪ’ ತೆಲುಗು ರಿಮೇಕ್‌ನಲ್ಲಿ ಪ್ರಭಾಸ್

‘ವೆಲ್‌ಕಮ್ 3’ ಸಿನಿಮಾದ ಕಥೆ ವಿಭಿನ್ನವಾಗಿದ್ದು, ಅಹ್ಮದ್ ಖಾನ್ ನಿರ್ದೇಶನ ಮಾಡಿದ್ದಾರೆ. ಹಲವು ಸ್ಟಾರ್ ಕಲಾವಿದರ ದಂಡೇ ಇರುವ ಈ ಚಿತ್ರವು ಈ ವರ್ಷ ಡಿಸೆಂಬರ್ 20ಕ್ಕೆ ರಿಲೀಸ್ ಆಗಲಿದೆ.

ಅಕ್ಷಯ್ ನಟನೆಯ ಈ ಹಿಂದಿನ ‘ವೆಲ್‌ಕಮ್’ ಚಿತ್ರ, ಅವರ ಕೆರಿಯರ್‌ಗೆ ಬಿಗ್ ಬ್ರೇಕ್ ಕೊಟ್ಟಿತ್ತು. ಮತ್ತೊಮ್ಮೆ ಅದೇ ಟೈಟಲ್ ಮೂಲಕ ಹೊಸ ಕಥೆಯೊಂದಿಗೆ ಮೋಡಿ ಮಾಡಲು ರೆಡಿಯಾಗಿದ್ದಾರೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article