ಟಾಲಿವುಡ್‌ನ (Tollywood) ಲವರ್ ಬಾಯ್ ಅಕ್ಕಿನೇನಿ ನಾಗ ಚೈತನ್ಯ (Akkineni Naga Chaitanya) ಅವರು ಸಮಂತಾ (Samantha) ಜೊತೆಗಿನ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ಮೇಲೆ ಸಿನಿಮಾ ರಂಗದಲ್ಲಿ ಗೆಲ್ಲಲೇಬೇಕು ಎಂದು ಪಣ ತೊಟ್ಟಿದ್ದಾರೆ. ಇದೀಗ ಕರಾವಳಿ ಬೆಡಗಿ ಕೃತಿ ಶೆಟ್ಟಿ (Krithi Shetty) ಜೊತೆ ‘ಕಸ್ಟಡಿ’ (Custody) ಸಿನಿಮಾ ಮೂಲಕ ನಾಗ ಚೈತನ್ಯ ಬರುತ್ತಿದ್ದಾರೆ.
Advertisement
ನಾಗ ಚೈತನ್ಯ (Naga Chaitanya) ಅವರು ಸಿನಿಮಾಗಿಂತ ತಮ್ಮ ವೈಯಕ್ತಿಕ ಜೀವನದ ವಿಚಾರವಾಗಿಯೇ ಸಾಕಷ್ಟು ಸುದ್ದಿಯಾಗಿದ್ದರು. ಸಮಂತಾ- ಚೈತನ್ಯ ಡಿವೋರ್ಸ್ ಬಳಿಕ ಮೂವ್ ಆನ್ ಆಗಿದ್ದರು ಕೂಡ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದ್ದಾರೆ. ಸ್ಯಾಮ್- ಚೈ ಬೇರೆ ಆದ ಮೇಲೆ, ಸಮಂತಾ ಸೌತ್- ಬಾಲಿವುಡ್‌ನಲ್ಲಿ ಬಂಪರ್ ಅವಕಾಶಗಳನ್ನ ಬಾಚಿಕೊಳ್ತಿದ್ದಾರೆ. ಚೈತನ್ಯ ತಮಗೆ ಅವಕಾಶವನ್ನ ಸದುಪಯೋಗಪಡಿಸಿಕೊಳ್ತಿದ್ದಾರೆ. ಕೆಲ ಸಿನಿಮಾಗಳ ಸೋಲಿನ ನಂತರ ತಾವು ಗೆಲ್ಲಲೇಬೇಕು. ಗೆದ್ದು ಬೀಗಬೇಕು ಎಂದು ಪಣ ತೊಟ್ಟಿದ್ದಾರೆ. ಇದನ್ನೂ ಓದಿ:ಲವರ್‌ಗಾಗಿ ಕವಿತೆ ಬರೆದ ‘ಗಟ್ಟಿಮೇಳ’ ನಟಿ ನಿಶಾ? ಹುಡುಗ ಯಾರು?
Advertisement
Advertisement
ಸಾಮಾನ್ಯವಾಗಿ ಸಿನಿಮಾ ಹೀರೋಗಳು ತಮ್ಮ ಪಾತ್ರದ ಇಮೇಜ್ ಬಗ್ಗೆ ಸಾಕಷ್ಟು ಕಾಳಜಿ ವಹಿಸುತ್ತಾರೆ. ಅನೇಕ ಹೀರೋಗಳು ಈಗಾಗಲೇ ಪೊಲೀಸ್ ಪಾತ್ರ ಮಾಡಿ ಮಿಂಚಿದ್ದಾರೆ. ಆದರೆ ಆ ಎಲ್ಲ ಪಾತ್ರಗಳು ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳ ಪಾತ್ರಗಳೇ ಆಗಿರುತ್ತವೆ. ಕಾನ್ಸ್‌ಟೇಬಲ್ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕು ಎಂದಾಗ ಕೆಲವು ಹೀರೋಗಳು ಒಪ್ಪಿಕೊಳ್ಳದೇ ಇರಬಹುದು. ಆದರೆ ನಾಗ ಚೈತನ್ಯ ಅವರು ಈ ಪಾತ್ರವನ್ನು ಇಷ್ಟಪಟ್ಟು ನಟಿಸಿದ್ದಾರೆ. ಇಮೇಜ್‌ಗಿಂತ ಪಾತ್ರ, ಕಥೆಗೆ ಒತ್ತು ನೀಡಿದ್ದಾರೆ.
Advertisement
ಕಾನ್ಸ್‌ಟೇಬಲ್ ಪಾತ್ರ ಮಾಡುವಾಗ ನಾಗ ಚೈತನ್ಯ ಅವರು ಕಥೆಗೆ ಅವರು ಹೆಚ್ಚು ಮಹತ್ವ ನೀಡಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಕಾನ್ಸ್‌ಟೇಬಲ್‌ಗೆ ಹೆಚ್ಚು ಅಧಿಕಾರ ಇರುವುದಿಲ್ಲ. ಅಂಥ ಪಾತ್ರವನ್ನು ‘ಕಸ್ಟಡಿ’ ಚಿತ್ರದಲ್ಲಿ ಹೀರೋ ರೀತಿ ತೋರಿಸುತ್ತಿರುವುದು ವಿಶೇಷ. ಚಿತ್ರದ ದ್ವಿತೀಯಾರ್ಧದಲ್ಲಿ ಈ ಪಾತ್ರ ಹೆಚ್ಚು ಮಹತ್ವ ಪಡೆದುಕೊಳ್ಳಲಿದೆಯಂತೆ. ಆಗ ಪ್ರೇಕ್ಷಕರಿಗೆ ಟ್ವಿಸ್ಟ್ ಸಿಗಲಿದೆ. ಈ ಎಲ್ಲಾ ಕಾರಣದಿಂದ ನಾಗ ಚೈತನ್ಯ ಅವರು ಕಾನ್ಸ್‌ಟೇಬಲ್ ಪಾತ್ರವನ್ನು ಒಪ್ಪಿಕೊಂಡು ನಟಿಸಿದ್ದಾರೆ. ಮೇ 12ರಂದು ವೆಂಕಟ್ ಪ್ರಭು ನಿರ್ದೇಶನದ ‘ಕಸ್ಟಡಿ’ ಸಿನಿಮಾ ತೆರೆಗೆ ಬಂದಿದೆ.
View this post on Instagram
ನಾಗಚೈತನ್ಯಗೆ ನಾಯಕಿಯಾಗಿ ಕೃತಿ ಶೆಟ್ಟಿ ನಟಿಸಿದ್ದಾರೆ. ಚೈ ಮುಂದೆ ಅರವಿಂದ್ ಸ್ವಾಮಿ ವಿಲನ್ ಆಗಿ ಅಬ್ಬರಿಸಿದ್ದಾರೆ. ನಟಿ ಪ್ರಿಯಾಮಣಿ (Priyamani), ಶರತ್ ಕುಮಾರ್, ಸಂಪತ್ ರಾಜ್, ಪ್ರೇಮ್‌ಜಿ ಸೇರಿದಂತೆ ಹಲವರು ನಟಿಸಿದ್ದಾರೆ.