ನಟ ಅಜಿತ್ ಕುಮಾರ್ (Ajith Kumar), ಬಾಲಯ್ಯ, ಸಿಂಗರ್ ಅರಿಜಿತ್ ಸಿಂಗ್, ಶೇಖರ್ ಕಪೂರ್ ಸೇರಿದಂತೆ ಹಲವು ಸಾಧಕರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದು (ಏ.28) ಪದ್ಮ ಪ್ರಶಸ್ತಿ ಪ್ರದಾನ (Padma Awards 2025) ಮಾಡಿದ್ದಾರೆ. ಇದನ್ನೂ ಓದಿ:ಮಂತ್ರವಾದಿ ಗೆಟಪ್‌ನಲ್ಲಿ ಬಂದ ಸಮಂತಾ- ಏನಿದು ಹೊಸ ಅವತಾರ?
President Droupadi Murmu presents Padma Bhushan in the field of Art to Shri S. Ajith Kumar. He is a towering figure in Indian cinema, particularly in the Tamil film industry. His ability to portray a wide spectrum of characters has cemented his reputation as one of the most… pic.twitter.com/ZDrBFoNiSu
— President of India (@rashtrapatibhvn) April 28, 2025
ದೆಹಲಿ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ತಮಿಳು ನಟ ಅಜಿತ್ ಕುಮಾರ್ ಮತ್ತು ತೆಲುಗು ನಟ ಬಾಲಯ್ಯ (Balayya) ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ್ದಾರೆ.
President Droupadi Murmu presents Padma Bhushan in the field of Art to Shri Nandamuri Balakrishna. He is a popular actor in the Telugu Cinema. During a career spanning over five decades, he acted in films of various genres and enacted memorable roles. He is also recognised for… pic.twitter.com/9ACBGQfOTj
— President of India (@rashtrapatibhvn) April 28, 2025
ಪದ್ಮ ಪ್ರಶಸ್ತಿ ಪಡೆದವರ ಪಟ್ಟಿ ಇಲ್ಲಿದೆ:
ದಿವಂಗತ ಗಾಯಕ ಪಂಕಜ್ ಉದಾಸ್- ಪದ್ಮಭೂಷಣ
ಚಲನಚಿತ್ರ ನಿರ್ಮಾಪಕ ಶೇಖರ್ ಕಪೂರ್-ಪದ್ಮಭೂಷಣ
ಕನ್ನಡದ ನಟ ಅನಂತ್ ನಾಗ್- ಪದ್ಮಭೂಷಣ
ನಟ ಅಶೋಕ್ ಲಕ್ಷ್ಮಣ್ ಸರಾಫ್- ಪದ್ಮಶ್ರೀ
ನಟನಾ ತರಬೇತುದಾರ, ರಂಗ ನಿರ್ದೇಶಕ ಬ್ಯಾರಿ ಗಾಡ್ಫ್ರೇ ಜಾನ್-ಪದ್ಮಶ್ರೀ
ಗಾಯಕ ಜಸ್ಪಿಂದರ್ ನರುಲಾ- ಪದ್ಮಶ್ರೀ
ಗಾಯಕಿ ಅಶ್ವಿನಿ ಭಿಡೆ-ದೇಶಪಾಂಡೆ-ಪದ್ಮಶ್ರೀ
ಸಂಗೀತ ಸಂಯೋಜಕ ರಿಕಿ ಗ್ಯಾನ್ ಕೇಜ್-ಪದ್ಮಶ್ರೀ
ಜಾನಪದ ಗಾಯಕ ಭೇರು ಸಿಂಗ್ ಚೌಹಾಣ್-ಪದ್ಮಶ್ರೀ
ಭಕ್ತಿ ಗಾಯಕ ಹರ್ಜಿಂದರ್ ಸಿಂಗ್ ಶ್ರೀನಗರ ವಾಲೆ-ಪದ್ಮಶ್ರೀ
ಜಾನಪದ ಸಂಗೀತಗಾರ ಜೋಯ್ನಾಚರಣ್ ಬಠಾರಿ-ಪದ್ಮಶ್ರೀ
ಶಾಸ್ತ್ರೀಯ ಗಾಯಕಿ ಕೆ ಓಮನಕುಟ್ಟಿ ಅಮ್ಮ-ಪದ್ಮಶ್ರೀ
ಗಾಯಕ ಮಹಾಬೀರ್ ನಾಯಕ್ – ಪದ್ಮಶ್ರೀ
ಮಮತಾ ಶಂಕರ್ – ಪದ್ಮಶ್ರೀ