ಕಾಲಿವುಡ್ ನಟ ಅಜಿತ್ ಕುಮಾರ್ (Ajith Kumar) ಅವರು ‘ಗುಡ್ ಬ್ಯಾಡ್ ಅಗ್ಲಿ’ (Good Bad Ugly) ಕಥೆ ಹೇಳೋಕೆ ರೆಡಿಯಾಗಿದ್ದಾರೆ. ಸದ್ಯ ರಿಲೀಸ್ ಆಗಿರೋ ಟೀಸರ್‌ನಲ್ಲಿ ಹಲವು ಗೆಟಪ್‌ನಲ್ಲಿ ಅಜಿತ್ ಮಿಂಚಿದ್ದಾರೆ. ನಟನ ನಯಾ ಅವತಾರವನ್ನು ಟೀಸರ್‌ನಲ್ಲಿ ನೋಡಿ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ತಂಗಿ ಬಗ್ಗೆ ರಶ್ಮಿಕಾ ಮಂದಣ್ಣ ಶಾಕಿಂಗ್ ಕಾಮೆಂಟ್: ಹೀಗ್ಯಾಕಂದ್ರು ಶ್ರೀವಲ್ಲಿ?
Advertisement
ಅಜಿತ್ ಸ್ಟೈಲೀಶ್ ಲುಕ್, ಕಾರ್ ರೇಸ್, ಕಲರ್‌ಫುಲ್ ಸೆಟ್, ಮಸ್ತ್ ಡ್ಯಾನ್ಸ್ ಜೊತೆಗೆ ಗನ್ ಹಿಡಿದು ನಟ ಖಡಕ್ ಎಂಟ್ರಿ ಕೊಟ್ಟಿರೋದು ಟೀಸರ್‌ನಲ್ಲಿ ತೋರಿಸಲಾಗಿದೆ. ಸಿನಿಮಾ ಅದ್ಧೂರಿಯಾಗಿ ಮೂಡಿ ಬಂದಿರೋದು ಟೀಸರ್ ಝಲಕ್‌ನಿಂದಲೇ ಎದ್ದು ಕಾಣುತ್ತಿದೆ. ಇದೇ ಏಪ್ರಿಲ್ 10ಕ್ಕೆ ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ. ಹಾಗಾಗಿ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ.
Advertisement
View this post on Instagram
Advertisement
ಅಜಿತ್ ಕುಮಾರ್‌ಗೆ ಜೋಡಿಯಾಗಿ ಮತ್ತೊಮ್ಮೆ ತ್ರಿಶಾ (Trisha Krishnan) ನಟಿಸಿದ್ದಾರೆ. ಈ ಚಿತ್ರವನ್ನು ‘ಪುಷ್ಪ 2’ ನಿರ್ಮಿಸಿದ್ದ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸಿದೆ. ಒಟ್ನಲ್ಲಿ ಸಾಕಷ್ಟು ವಿಚಾರಗಳಿಂದ ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ಸಖತ್ ಸದ್ದು ಮಾಡುತ್ತಿದೆ. ಸಿನಿಮಾಗಾಗಿ ಫ್ಯಾನ್ಸ್ ಕಾಯ್ತಿದ್ದಾರೆ.