ಮುಂಬೈ: `ಹೌಸ್ ಅರೆಸ್ಟ್’ ರಿಯಾಲಿಟಿ ಶೋನಲ್ಲಿ (House Arrest Reality Show) ಮಹಿಳೆಯರನ್ನು ಅಸಭ್ಯವಾಗಿ ಚಿತ್ರಿಸಿರುವ ಆರೋಪದ ಮೇಲೆ ನಟ ಅಜಾಜ್ ಖಾನ್ (Actor Ajaz Khan) ಮತ್ತು ULLU ಆ್ಯಪ್‌ನ ಮಾಲೀಕ ವಿಭು ಅಗರ್ವಾಲ್ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಮುಂಬೈ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ.
ಇತ್ತೀಚೆಗೆ ಮಾಜಿ ʻಬಿಗ್ ಬಾಸ್’ ಸ್ಪರ್ಧಿಯಾಗಿರುವ ಖಾನ್ ನಡೆಸಿಕೊಡುವ ವೆಬ್ ಶೋನ ಕ್ಲಿಪ್ ವೈರಲ್ ಆಗಿತ್ತು. ಇದರಲ್ಲಿ ಸ್ಪರ್ಧಿಗಳಿಗೆ ಲೈಂಗಿಕ ಭಂಗಿಗಳಲ್ಲಿ ನಟಿಸುವಂತೆ ಒತ್ತಾಯಿಸಿ ಚಿತ್ರೀಕರಿಸಲಾಗಿತ್ತು. ಈ ವೇಳೆ ಸ್ಪರ್ಧಿಗಳು ಮುಜುಗರ ಅನುಭವಿಸಿದ್ದರು. ಅಲ್ಲದೇ ಈ ವೇಳೆ ಅಸಭ್ಯ ಪ್ರಶ್ನೆಗಳನ್ನು ಕೇಳುತ್ತಿರುವುದು ಸಹ ವೀಡಿಯೋ ಕ್ಲಿಪ್‌ನಲ್ಲಿ ಸೆರೆಯಾಗಿತ್ತು. ವಿವಾದದ ಬಳಿಕ ಈ ಕ್ಲಿಪ್‌ನ್ನು ಸ್ಟ್ರೀಮಿಂಗ್‌ನಿಂದ ತೆಗೆದುಹಾಕಲಾಗಿತ್ತು. ಇದನ್ನೂ ಓದಿ: ಬಾಲಿವುಡ್‌ನ ಖ್ಯಾತ ನಿರ್ಮಾಪಕನ ಜೊತೆ ಶ್ರೀಲೀಲಾ- ಶುರುವಾಯ್ತು ಚರ್ಚೆ
ಈ ಸಂಬಂಧ ಬಜರಂಗ ದಳದ ಕಾರ್ಯಕರ್ತರೊಬ್ಬರ ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನಡಿ ನಟ ಅಜಾಜ್ ಖಾನ್ ಮತ್ತು ULLU ಆ್ಯಪ್‌ನ ಮಾಲೀಕ ವಿಭು ಅಗರ್ವಾಲ್ ವಿರುದ್ಧ ಸಾರ್ವಜನಿಕ ಸ್ಥಳಗಳಲ್ಲಿ ಅಶ್ಲೀಲ ಕೃತ್ಯ, ಮಹಿಳೆಯರನ್ನು ಅಸಭ್ಯವಾಗಿ ಚಿತ್ರಿಸುವ ನಿಷೇಧ ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿತ್ತು.
ಈ ಬೆಳವಣಿಗೆಯ ಬೆನ್ನಲ್ಲೇ ಖಾನ್ ವಿರುದ್ಧ 30 ವರ್ಷದ ಮಹಿಳೆಯೊಬ್ಬಳು ಅತ್ಯಾಚಾರ ಆರೋಪ ಮಾಡಿದ್ದಾಳೆ. ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ಹಲವಾರು ಬಾರಿ ಖಾನ್ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾಳೆ. ಈ ಸಂಬಂಧ ಪ್ರತ್ಯೇಕ ಎಫ್‌ಐಆರ್ ದಾಖಲಾಗಿದೆ. ಇದನ್ನೂ ಓದಿ: ಸೋನು ನಿಗಮ್‌ಗೆ ಫಿಲ್ಮ್ಂ ಚೇಂಬರ್ ಶಾಕ್ – ಸ್ಯಾಂಡಲ್‌ವುಡ್‌ನಿಂದ ಗಾಯಕನಿಗೆ ಅಸಹಕಾರ