ಬಾಲಿವುಡ್ ನಟ ಅಜಯ್ ದೇವಗನ್ (Ajay Devgn) ಇತ್ತೀಚೆಗೆ ‘ಮೈದಾನ್’ (Maidaan) ಸಿನಿಮಾದಲ್ಲಿ ನಟಿಸಿ ಗಮನ ಸೆಳೆದಿದ್ದರು. ಫುಟ್‌ಬಾಲ್ ಕೋಚ್ ಸೈಯದ್ ಅಬ್ದುಲ್ ರಹೀಮ್ ಜೀವನದ ಕಥೆಯನ್ನು ಈ ಸಿನಿಮಾದ ಮೂಲಕ ಹೇಳಿದ್ದರು. ಈಗ ‘ಮೈದಾನ್’ ಸಕ್ಸಸ್ ನಂತರ ಮತ್ತೊಂದು ಬಯೋಪಿಕ್ ಈಗ ಅಜಯ್ ದೇವಗನ್‌ರನ್ನು ಅರಸಿ ಬಂದಿದೆ.
ಇದೀಗ ಭಾರತದ ಖ್ಯಾತ ಕ್ರಿಕೆಟಿಗ ಪಾಲ್ವಂಕರ್ ಬಾಲೂ (Palwankar Baloo) ಅವರ ಜೀವನ ಚರಿತ್ರೆಯನ್ನು (Biopic) ಸಿನಿಮಾ ಮಾಡಲು ಭರ್ಜರಿ ತಯಾರಿ ನಡೆಯುತ್ತಿದೆ. ನಿರ್ಮಾಪಕಿ ಪ್ರೀತಿ ಸಿನ್ಹಾ ಕ್ರಿಕೆಟಿಗ ಪಾಲ್ವಂಕರ್ ಬಾಲೂ ಬಯೋಪಿಕ್ ಅನ್ನು ಸಿನಿಮಾ ಮಾಡೋದಾಗಿ ಅಧಿಕೃತ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ:ಕುತೂಹಲ ಕೆರಳಿಸಿದ ವಿಜಯ್ ಸೇತುಪತಿ ನಟನೆಯ 50ನೇ ಚಿತ್ರದ ’ಮಹಾರಾಜ’ ಟ್ರೈಲರ್
ಪಾಲ್ವಂಕರ್ ಬಾಲೂ ಪಾತ್ರವನ್ನು ಖ್ಯಾತ ನಟ ಅಜಯ್ ದೇವಗನ್ ನಟಿಸುತ್ತಾರೆ ಎಂದು ತಿಳಿಸಿದ್ದಾರೆ. ಈ ಚಿತ್ರವನ್ನು ತಿಗ್‌ಮಂಶು ದುಲಿಯಾ ನಿರ್ದೇಶನ ಮಾಡಲಿದ್ದಾರೆ. ರಾಮಚಂದ್ರ ಗುಹಾ ಬರೆದ ‘ಎ ಕಾರ್ನರ್ ಆಫ್ ಎ ಫಾರೆನ್ ಫೀಲ್ಡ್’ ಪುಸ್ತಕ ಆಧರಿಸಿ ಈ ಚಿತ್ರವನ್ನು ಮಾಡಲಾಗುತ್ತಿದೆ. ಈ ವರ್ಷದ ಅಂತ್ಯದಲ್ಲಿ ಸಿನಿಮಾ ಶೂಟಿಂಗ್ ಶುರುವಾಗಲಿದೆ.
ಕ್ರಿಕೆಟಿಗ ಪಾಲ್ವಂಕರ್ ಬಾಲೂ ಅವರ ಯಶಸ್ಸು ಮತ್ತು ಸವಾಲಿನ ಹಾದಿಯ ಬಗ್ಗೆ ಅಜಯ್ ದೇವಗನ್ ನಟನೆಯ ಮೂಲಕ ತೋರಿಸಲಾಗುತ್ತದೆ.