ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಗಿಣಿ ದ್ವಿವೇದಿ ಇತರೆ ಸ್ಯಾಂಡಲ್ ವುಡ್ ನಟರು ಒಟ್ಟಾಗಿ ಸೇರಿ ನಟ ಆದಿತ್ಯ ಸಿಂಗ್ ಅವರ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.
ಇತ್ತೀಚೆಗಷ್ಟೆ ಆದಿತ್ಯ ಅವರು ತಮ್ಮ 40ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಆದಿತ್ಯ ಹುಟ್ಟುಹಬ್ಬದ ಪ್ರಯುಕ್ತ ಸಿನಿಮಾರಂಗದ ಸ್ನೇಹಿತರಿಗೆಲ್ಲಾ ಒಂದು ವಿಶೇಷ ಪಾರ್ಟಿಯನ್ನು ಆಯೋಜನೆ ಮಾಡಿದ್ದರು.
ಬರ್ತ್ ಡೇ ಪಾರ್ಟಿಗೆ ಹಿರಿಯ ನಟ ಅಂಬರೀಶ್, ಸೃಜನ್ ಲೋಕೇಶ್, ನಟಿ ರಾಗಿಣಿ ದ್ವಿವೇದಿ, ಅರ್ಜುನ್ ಸರ್ಜಾ, ದರ್ಶನ್ ಮತ್ತು ರಿಷಿಕಾ ಸಿಂಗ್ ಪಾಲ್ಗೊಂಡಿದ್ದರು. ಎಲ್ಲರೂ ಒಂದೆಡೆ ಸೇರಿ ಹುಟ್ಟುಹಬ್ಬದ ಸಂಭ್ರಮವನ್ನು ಆಚರಿಸಿದ್ದಾರೆ.
ಸಿನಿಮಾರಂಗದ ಸ್ನೇಹಿತರೆಲ್ಲಾ ಪಾರ್ಟಿಯಲ್ಲಿ ಸೇರಿ ಸಂಭ್ರಮಿಸಿದ ಅಪರೂಪದ ಕ್ಷಣಗಳನ್ನು ಫೋಟೋಗಳಲ್ಲಿ ಸೆರೆಹಿಡಿದಿದ್ದು, ಆ ಫೋಟೋಗಳನ್ನು ಆದಿತ್ಯ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ತಮ್ಮ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿದ್ದ ಸ್ನೇಹಿತರಿಗೆ ಧನ್ಯವಾದ ತಿಳಿಸಿದ್ದಾರೆ.
ದರ್ಶನ್ ಗೆ ಆದಿತ್ಯ ತುಂಬಾ ಹತ್ತಿರದ ಸ್ನೇಹಿತರಾಗಿದ್ದು, ಇವರಿಬ್ಬರು ಜೊತೆಯಾಗಿ ಕೆಲವು ಸಿನಿಮಾಗಳನ್ನು ಸಹ ಮಾಡಿದ್ದಾರೆ. ಸದ್ಯಕ್ಕೆ ಆದಿತ್ಯ ಕೈನಲ್ಲಿ ನಾಲ್ಕೈದು ಸಿನಿಮಾಗಳಿದ್ದು, ರಾಗಿಣಿ ಮತ್ತು ಆದಿತ್ಯ ಕಾಂಬಿನೇಶನ್ ನಲ್ಲಿ ಕೂಡ ಒಂದು ಸಿನಿಮಾ ಮೂಡಿಬರುತ್ತಿದೆ.
https://www.instagram.com/p/Bijej61Atuj/?utm_source=ig_embed