ಹಿಂದಿ ವೆಬ್ ಸರಣಿಗಳಲ್ಲಿ ನಟಿಸಿರುವ ಅಭಿಷೇಕ್ ಸಿಂಗ್ (Abhishek Singh) ಅವರು ಬಕ್ರೀದ್ ಹಬ್ಬಕ್ಕೆ ಶುಭ ಕೋರಿ ಪೋಸ್ಟ್ ಹಾಕಿದ ಪರಿಣಾಮ 1 ಲಕ್ಷ ಅನುಯಾಯಿಗಳನ್ನು ಕಳೆದುಕೊಂಡಿದ್ದಾರೆ.
Advertisement
ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಅಭಿಷೇಕ್ ಸಿಂಗ್ ಪೋಸ್ಟ್ ಮಾಡಿದ್ದಾರೆ. ಮುಸ್ಲಿಮರ ಟೋಪಿ ಧರಿಸಿ ಶುಭ ಕೋರಿದ್ದಕ್ಕೆ 1 ಲಕ್ಷ ಫಾಲೋವರ್ಸ್ ನನ್ನನ್ನು ಅನ್‌ಫಾಲೋ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
Advertisement
Advertisement
ಗುರುವಾರ ಕೆಂಪು ಬಣ್ಣದ ಕುರ್ತಾದ ಜೊತೆ ಮುಸ್ಲಿಮರು ಧರಿಸುವ ಬಿಳಿ ಬಣ್ಣದ ಟೋಪಿ ಧರಿಸಿದ ಫೋಟೋವನ್ನು ಶೇರ್ ಮಾಡಿದ್ದರು. ಪಕ್ಕಾ ಇಸ್ಲಾಂ ಸಂಪ್ರದಾಯದಂತೆ ರೆಡಿಯಾಗಿದ್ದ ಅಭಿಷೇಕ್ ಸಿಂಗ್ ಅವರ ಫೋಟೋವನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಇದನ್ನೂ ಓದಿ:ಕೋಟಿ ಕೊಟ್ರೂ ಸಿನಿಮಾದಲ್ಲಿ ಕಿಸ್ ಮಾಡಲ್ಲ- ಪ್ರಿಯಾಮಣಿ ಖಡಕ್ ಉತ್ತರ
Advertisement
ಈ ಪೋಸ್ಟ್ ಹಲವು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಅನೇಕರು ಪೋಸ್ಟ್ ಡಿಲೀಟ್ ಮಾಡಿ ಎಂದು ಹೇಳಿದ್ದರು. ಈ ಪೋಸ್ಟ್‌ಗೆ ರಿಪ್ಲೈ ರೂಪದಲ್ಲಿ ಕಮೆಂಟ್ ಮಾಡಿದ ಅಭಿಷೇಕ್ ಈ ಒಂದು ಪೋಸ್ಟ್‌ನಿಂದ ನಾನು 1 ಲಕ್ಷ ಅಭಿಮಾನಿಗಳನ್ನು ಕಳೆದುಕೊಂಡೆ ಎಂದು ಬರೆದುಕೊಂಡಿದ್ದಾರೆ. ಸದ್ಯ ಅಭಿಷೇಕ್ ಅವರನ್ನು ಇನ್‌ಸ್ಟಾದಲ್ಲಿ 48.46 ಲಕ್ಷ ಮಂದಿ ಫಾಲೋ ಮಾಡುತ್ತಿದ್ದಾರೆ.
https://www.instagram.com/p/CauB6eblbh8/?utm_source=ig_web_copy_link&igshid=MzRlODBiNWFlZA==
ಅಭಿಷೇಕ್ ಸಿಂಗ್ ಐಎಎಸ್ ಅಧಿಕಾರಿಯಾಗಿಯೂ ಈ ಹಿಂದೆ ಕೆಲಸ ಮಾಡಿದ್ದರು. ಈ ವರ್ಷದ ಆರಂಭದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸರ್ಕಾರವು ಅಭಿಷೇಕ್ ಅವರನ್ನು ಅಮಾನತುಗೊಳಿಸಿತ್ತು. 82 ದಿನಗಳ ಕಾಲ ಕಾರಣ ತಿಳಿಸಿದೇ ಕರ್ತವ್ಯಕ್ಕೆ ಗೈರು ಹಾಜರಿ ಹಾಕಿದ್ದಕ್ಕೆ ಸರ್ಕಾರ ಅಭಿಷೇಕ್ ಅವರನ್ನು ಅಮಾನತು ಮಾಡಿತ್ತು. ಈಗ ಇನ್‌ಸ್ಟಾ ಪೋಸ್ಟ್ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.