ಬಾಲಿವುಡ್ ಸ್ಟಾರ್ ಜೋಡಿ ಅಭಿಷೇಕ್ ಬಚ್ಚನ್ (Abhishek Bachchan) ಮತ್ತು ಐಶ್ವರ್ಯಾ ರೈ (Aishwarya Rai) ಕುರಿತು ಆಗಾಗ ಡಿವೋರ್ಸ್ ಬಗ್ಗೆ ವದಂತಿ ಹರಿದಾಡುತ್ತಲೇ ಇದೆ. ಅದಕ್ಕೆಲ್ಲಾ ಜೊತೆಯಾಗಿ ಮತ್ತೆ ಕಾಣಿಸಿಕೊಳ್ಳುವ ಮೂಲಕ ವದಂತಿಗೆ ಬ್ರೇಕ್ ಹಾಕಿದ್ದಾರೆ. ಮಗಳು ಆರಾಧ್ಯ ಶಾಲೆಗೆ ಜೊತೆಯಾಗಿ ಐಶ್ವರ್ಯಾ ದಂಪತಿ ಎಂಟ್ರಿ ಕೊಟ್ಟಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗಿದೆ.
View this post on Instagram
Advertisement
ಮಗಳು ಆರಾಧ್ಯಳ ಶಾಲೆಯ ಕಾರ್ಯಕ್ರಮಕ್ಕೆ ಬಿಗ್ ಬಿ ಜೊತೆ ಅಭಿಷೇಕ್, ಐಶ್ವರ್ಯಾ ಒಟ್ಟಾಗಿ ತೆರಳಿದ್ದಾರೆ. ಆರಾಧ್ಯ ಧೀರುಭಾಯ್ ಅಂಬಾನಿ ಸ್ಕೂಲ್‌ನಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಶಾಲೆಗೆ ಆಗಮಿಸಿದ್ದ ವೇಳೆ, ಇಬ್ಬರು ನಗು ನಗುತ್ತಾ ಬರುತ್ತಿದ್ದು, ಪತ್ನಿಯನ್ನು ಅಭಿಷೇಕ್ ಕೇರ್ ಮಾಡುತ್ತಿದ್ದ ಪರಿ ಕಂಡು ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಇದು ಪಾಪರಾಜಿಗಳ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Advertisement
View this post on Instagram
Advertisement
ಇನ್ನೂ ಅಂಬಾನಿ ಮಗ ಅನಂತ್ ಮದುವೆಯಲ್ಲಿ ಬಿಗ್‌ಬಿ ಕುಟುಂಬದ ಜೊತೆ ಫೋಟೋಶೂಟ್‌ಗೆ ನಿಲ್ಲದೇ ಮಗಳೊಂದಿಗೆ ಪ್ರತ್ಯೇಕವಾಗಿ ನಿಂತಿದ್ದರು. ಇಲ್ಲಿಂದ ಇಬ್ಬರ ಕುರಿತು ಡಿವೋರ್ಸ್ ಸುದ್ದಿ ಚರ್ಚೆಗೆ ಗ್ರಾಸವಾಯ್ತು. ಇದನ್ನೂ ಓದಿ:ರಾಣಾ ದಗ್ಗುಬಾಟಿಗೆ ಕನ್ನಡ ಕಲಿಸಿದ ರಿಷಬ್ ಶೆಟ್ಟಿ
Advertisement
View this post on Instagram
ಇನ್ನೂ ಧೂಮ್ 2, ರಾವಣ್, ಗುರು ಸೇರಿದಂತೆ ಹಲವು ಸಿನಿಮಾಗಳಲ್ಲಿ ಐಶ್ವರ್ಯಾ ಮತ್ತು ಅಭಿಷೇಕ್ ಜೊತೆಯಾಗಿ ನಟಿಸಿದ್ದಾರೆ. ಈ ವೇಳೆ ಇಬ್ಬರಿಗೂ ಪ್ರೇಮಾಂಕುರವಾಗಿತ್ತು. 2007ರಲ್ಲಿ ಇಬ್ಬರೂ ಗುರುಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.