ಸ್ಯಾಂಡಲ್‌ವುಡ್ (Sandalwood) ನಟ ಅಭಿಷೇಕ್- ಅವಿವ ಬಿಡಪ ಆರತಕ್ಷತೆಗೆ (Reception) ಈಗಾಗಲೇ ಕೌಂಟ್‌ಡೌನ್ ಶುರುವಾಗಿದೆ. ಅಂಬಿ ಪುತ್ರನ ಅದ್ದೂರಿ ಆರತಕ್ಷತೆ ಹೇಗಿದೆ.? ಯಾರೆಲ್ಲಾ ಸ್ಟಾರ್ಸ್ ಅಭಿವಾ ಸಂಭ್ರಮಕ್ಕೆ ಭಾಗಿಯಾಗುತ್ತಾರೆ ಎಂಬುದರ ಡಿಟೈಲ್ಸ್ ಇಲ್ಲಿದೆ ನೋಡಿ.
ಜೂನ್ 5ರಂದು ಬೆಂಗಳೂರಿನ ಚಾಮರ ವಜ್ರದಲ್ಲಿ ಅದ್ದೂರಿಯಾಗಿ ಅಭಿ-ಅವಿವ (Aviva Bidapa) ಮದುವೆಯಾದರು. ಅಂಬಿ (Ambareesh) ಪುತ್ರನ ಮದುವೆ ಸಂಭ್ರಮಕ್ಕೆ ರಜನಿಕಾಂತ್, ಸುದೀಪ್, ಮೀನಾ, ಯಶ್-ರಾಧಿಕಾ ಸಾಕ್ಷಿಯಾದರು. ಜೂನ್ 7ರಂದು ಸಂಜೆ 7ಕ್ಕೆ ಪ್ಯಾಲೆಸ್ ಗ್ರೌಂಡ್‌ನಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಅದರ ತಯಾರಿ ಕೂಡ ಯಾವ ರಾಜಮನೆತನಕ್ಕೂ ಕಡಿಮೆಯಿಲ್ಲದಂತೆ ಅದ್ದೂರಿಯಾಗಿ ಮಾಡಲಾಗಿದೆ.
ಇಂಡಿಯನ್ ಕ್ರಿಸ್ಟಲ್ ಶಾಗ್ಲಿಯರ್ ಡಿಸೈನ್‌ನಲ್ಲಿ ಸ್ಟೇಜ್ ನಿರ್ಮಾಣ ಮಾಡಲಾಗಿದೆ. 300 ಶಾಗ್ಲಿಯರ್ಸ್ ಜೊತೆಗೆ 72 ಅಡಿ ಅಗಲ 32 ಉದ್ದದ ಶಾಗ್ಲಿಯರ್‌ನಲ್ಲಿ ಸ್ಟೇಜ್ ನಿರ್ಮಿಸಲಾಗಿದೆ. ವಿಶೇಷ ಅಂದರೆ, ಭಾರತದಲ್ಲಿ ಇದೇ ಮೊದಲ ಬಾರಿಗೆ ಕ್ರಿಸ್ಟಲ್ಸ್ ಡಿಸೈನ್ ಸ್ಟೇಜ್ ನಿರ್ಮಾಣ ಮಾಡಲಾಗಿದೆ. ಅಭಿಷೇಕ್ (Abhishek Ambareesh) ಆರತಕ್ಷತೆಗಾಗಿಯೇ ದೆಹಲಿ ಮುರದಾಬಾದ್‌ನಿಂದ ತರಿಸಲಾದ ಕ್ರಿಸ್ಟಲ್ಸ್ ಇದಾಗಿದೆ. ಅಭಿ-ಅವಿವ ಆರತಕ್ಷತೆಗೆ ವೆಡ್ಡಿಂಗ್ಸ್ ಬೈ ಧ್ರುವ ತಂಡದಿಂದ ವೇದಿಕೆ ನಿರ್ಮಾಣವಾಗಿದೆ.
ಈಗಾಗಲೇ ಶಿವಣ್ಣ ಮಗಳು, ಜನಾರ್ದನ ರೆಡ್ಡಿ ಮಗಳು, ಯದುವೀರ್ ಮಹಾರಾಜರು ಸೇರಿದಂತೆ ಹಲವು ಗಣ್ಯರ ಮದುವೆಗೆ ಧ್ರುವ ಡಿಸೈನ್ ಮಾಡಿದ್ದಾರೆ. ಅಭಿ-ಅವಿವ ಆರತಕ್ಷತೆಗೆ 3 ಸಾವಿರ ಜನಕ್ಕೆ ಆಸನದ ವ್ಯವಸ್ಥೆ, 25 ಸಾವಿರ ಜನಕ್ಕೆ ಊಟದ ವ್ಯವಸ್ಥೆ ಮಾಡಲಾಗಿದೆ. ಇದನ್ನೂ ಓದಿ:ನಟ ಚಿರಂಜೀವಿ ಸರ್ಜಾ 3 ನೇ ವರ್ಷದ ಪುಣ್ಯತಿಥಿ
ಕಾಲಿವುಡ್ ನಟ ಸೂರ್ಯ, ಕಾಶ್ಮೀರ ಮುಖ್ಯ ಮಂತ್ರಿ ಫಾರುಖ್ ಅಬ್ದುಲಾ, ಮೆಗಾಸ್ಟಾರ್ ಚಿರಂಜೀವಿ ಕುಟುಂಬ, ನಾಗಾರ್ಜುನ, ಸಿಎಂ ಸಿದ್ದರಾಮಯ್ಯ ಸೇರಿದಂತೆ ಕನ್ನಡ ಹಲವು ಸ್ಟಾರ್ ನಟ-ನಟಿಯರು ಭಾಗಿಯಾಗಲಿದ್ದಾರೆ.