ಮಾಜಿ ಸಿಎಂ ಎಸ್.ಎಂ ಕೃಷ್ಣ (SM Krishna) ಅವರ ನಿಧನಕ್ಕೆ ರಾಜಕೀಯ ಗಣ್ಯರು ಮತ್ತು ಸಿನಿಮಾ ಕಲಾವಿದರು ಸಂತಾಪ ಸೂಚಿಸಿದ್ದಾರೆ. ಕೃಷ್ಣರವರ ಅಂತಿಮ ದರ್ಶನಕ್ಕೆ ಸುಮಲತಾ (Sumalatha) ಆಗಮಿಸಿದ ಬೆನ್ನಲ್ಲೇ ಅಭಿಷೇಕ್ ಅಂಬರೀಶ್ ಕೂಡ ಅಂತಿಮ ನಮನ ಸಲ್ಲಿಸಿದರು. ಎಸ್.ಎಂ ಕೃಷ್ಣರವರು ಅವರನ್ನು ಕಳೆದುಕೊಂಡಿದ್ದು ದೇಶಕ್ಕೆ ನಷ್ಟ ಎಂದು ಮಾತನಾಡಿದ್ದಾರೆ.
ಎಸ್‌ಎಂಕೆ ಅಂತಿಮ ದರ್ಶನ ಪಡೆದ ಬಳಿಕ ಅಭಿಷೇಕ್ ಮಾತನಾಡಿ, ಉತ್ತಮವಾದ ರಾಜಕಾರಣಿ ಎಸ್.ಎಂ ಕೃಷ್ಣರವರು ಅವರನ್ನು ಕಳೆದುಕೊಂಡಿದ್ದು ದೇಶಕ್ಕೆ ಲಾಸ್. ರಾಜ್ಯದ ರಾಜಕಾರಣದಲ್ಲಿ ಬದಲಾವಣೆ ತಂದವರು. ತಂದೆಯ ಜೊತೆಗಿನ ಕೃಷ್ಣ ಅವರ ಒಡನಾಟ ಹೇಳೋಕೆ ಆಗ ನಾನು ಚಿಕ್ಕವನಿದ್ದೆ, ಆದರೆ 1998ರಲ್ಲಿ ಮಂಡ್ಯ ಕಡೆ ಅವರೊಂದಿಗೆ ಕ್ಯಾಂಪೇನ್ ಮಾಡಿದ್ವಿ. ನಮ್ಮ ತಂದೆಯವರಿಗೆ ಅವರು ಸಿಎಂ ಆಗಬೇಕು ಆಸೆಯಿತ್ತು. ಅದು ಹಾಗೇ ಕೂಡ ನಡೆಯಿತು. ಇದನ್ನೂ ಓದಿ:ಡಿಗ್ನಿಫೈಡ್ ರಾಜಕಾರಣಿ, ಬೆಂಗಳೂರು ನಂ.1 ಆಗಲು ಎಸ್‌ಎಂಕೆ ಕಾರಣ: ಸುಮಲತಾ
ರಾಜ್ಯದ ರಾಜಕಾರಣದಲ್ಲಿ ಅವರು ಬಂದ್ಮೇಲೆ ಬೆಂಗಳೂರು ಸಾಕಷ್ಟು ಬದಲಾಯ್ತು. ಚಿತ್ರರಂಗಕ್ಕೂ ಅವರ ಕೊಡುಗೆ ಸಾಕಷ್ಟಿದೆ. ಕಲಾವಿದರ ಮೇಲೆ ಕಾಳಜಿ ತೋರಿಸುತ್ತಿದ್ದರು. ವೀರಪ್ಪನ್ ಅಪಹರಣ ಮಾಡಿದ ಸಂದರ್ಭದಲ್ಲಿ ಅವರು ತೆಗೆದುಕೊಂಡಂತಹ ಕಠಿಣ ನಿರ್ಧಾರಗಳಿಂದ ಮತ್ತೆ ಅಣ್ಣಾವ್ರು ವಾಪಸ್ ಕರೆದುಕೊಂಡು ಬರಲು ಸಹಾಯವಾಯ್ತು. ಇಂದು ಬೆಂಗಳೂರು ಇಷ್ಟರ ಮಟ್ಟಿಗೆ ಬೆಳೆದಿದೆ ಅಂದರೆ ಅದರ ಕ್ರೆಡಿಟ್ ಕೃಷ್ಣ ಅವರಿಗೆ ಸಲ್ಲುತ್ತದೆ ಎಂದು ಅಭಿಷೇಕ್ ಅಂಬರೀಶ್ ಸ್ಮರಿಸಿದರು.
ಇನ್ನೂ ಕರ್ನಾಟಕ ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ವಿದೇಶಾಂಗ ಸಚಿವ, ಹಿರಿಯ ರಾಜಕಾರಣಿ ಎಸ್.ಎಂ. ಕೃಷ್ಣ (92) ಅವರು ಮಂಗಳವಾರ ಬೆಳಗ್ಗೆ 3:30ಕ್ಕೆ ವಿಧಿವಶರಾಗಿದ್ದಾರೆ.