ರೆಬೆಲ್ ಸ್ಟಾರ್ ಅಂಬರೀಶ್ (Rebel Star Ambareesh) ಮನೆಗೆ ಮುದ್ದು ಕಂದಮ್ಮನ ಆಗಮನವಾಗಿದೆ. ನವೆಂಬರ್ 12ರಂದು ಅಭಿಷೇಕ್ ಪತ್ನಿ ಗಂಡು ಮಗುವಿಗೆ (Baby Boy) ಜನ್ಮ ನೀಡಿದರು. ಇದೀಗ ಈ ಕುರಿತು ವಿಶೇಷ ಪೋಸ್ಟ್‌ವೊಂದನ್ನು ಅಭಿಷೇಕ್ ಹಂಚಿಕೊಂಡಿದ್ದಾರೆ. ಮಗನನ್ನು ಬೇಬಿ ರೆಬೆಲ್ ಎಂದಿದ್ದಾರೆ. ಈ ಪೋಸ್ಟ್ ನೋಡಿ ಅಂಬಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಇದನ್ನೂ ಓದಿ:ಡಿ.4ರಂದು ನಾಗಚೈತನ್ಯ, ಶೋಭಿತಾ ಮದುವೆ- ಆಮಂತ್ರಣ ಪತ್ರಿಕೆ ವೈರಲ್
View this post on Instagram
ಎಲ್ಲರಿಗೂ ನಮಸ್ಕಾರ, ನವೆಂಬರ್ 12ರಂದು ನಮ್ಮ ಕುಟುಂಬಕ್ಕೆ ಅತೀವ ಸಂತಸದ ದಿನ. ರೆಬೆಲ್ ಸ್ಟಾರ್ ಅಂಬರೀಶ್ ಅಣ್ಣನ ಆಶೀರ್ವಾದ, ಗುರು-ಹಿರಿಯರ ಆಶೀರ್ವಾದದಿಂದ ಗಂಡು ಮಗು ಜನಿಸಿದ್ದು, ತಾಯಿ- ಮಗು ಆರೋಗ್ಯವಾಗಿದ್ದಾರೆಂದು ಈ ಮೂಲಕ ತಮ್ಮೆಲ್ಲರಿಗೂ ತಿಳಿಸಲು ಇಚ್ಛಿಸುತ್ತೇನೆ ಎಂದು ಅಭಿಷೇಕ್ ಬರೆದುಕೊಂಡಿದ್ದಾರೆ. ಅಂಬರೀಶ್ ಫೋಟೋ ಶೇರ್ ಮಾಡಿ ಮಗನನ್ನು ಬೇಬಿ ರೆಬೆಲ್ ಎಂದು ಬರೆದುಕೊಂಡಿದ್ದಾರೆ. ಆದಷ್ಟು ಬೇಗ ಬೇಬಿ ರೆಬೆಲ್ ಫೋಟೋ ರಿವೀಲ್ ಮಾಡಿ ಎಂದು ಫ್ಯಾನ್ಸ್ ಮನವಿ ಮಾಡಿದ್ದಾರೆ.
ಅಂದಹಾಗೆ, ಅವಿವ (Aviva Bidapa) ಜೊತೆ ಅಭಿಷೇಕ್ ಅಂಬರೀಶ್ ಕಳೆದ ವರ್ಷ ಜೂನ್ 5ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.