ರೆಬೆಲ್ ಸ್ಟಾರ್ ಅಂಬರೀಶ್ (Ambareesh) ಪುತ್ರ ಅಭಿಷೇಕ್ ಅಂಬರೀಶ್ (Abhishek Ambareesh) ಅವರ ಮದುವೆ ಡೇಟ್ ಫಿಕ್ಸ್ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನ ಅಭಿಷೇಕ್ ಭೇಟಿಯಾಗಿ ಮದುವೆ (Wedding) ಆಹ್ವಾನ (Invitation) ಪತ್ರಿಕೆ ನೀಡಿದ್ದಾರೆ. ಈ ಫೋಟೋ ಇದೀಗ ವೈರಲ್ ಆಗಿದೆ.
ಅಭಿಷೇಕ್ ಅಂಬರೀಶ್ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಹಲವು ವರ್ಷಗಳ ಪ್ರೀತಿಗೆ ಮದುವೆಯೆಂಬ ಮುದ್ರೆ ಒತ್ತಲು ಅಭಿಷೇಕ್ ಜೋಡಿ ರೆಡಿಯಾಗಿದ್ದಾರೆ. ಅವಿವಾ ಮತ್ತು ಅಭಿಷೇಕ್ ಮದುವೆಗೆ ಈಗಾಗಲೇ ದಿನಗಣನೆ ಶುರುವಾಗಿದೆ.
View this post on Instagram
ಮದುವೆ ಡೇಟ್ ಫಿಕ್ಸ್ ಆಗ್ತಿದ್ದಂತೆ, ಪ್ರಧಾನಿ ಮೋದಿ ಅವರನ್ನ ನಟ ಅಭಿಷೇಕ್- ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಭೇಟಿಯಾಗಿದ್ದಾರೆ. ಅಭಿಷೇಕ್-ಅವಿವಾ ಅವರ ಮದುವೆ ಪತ್ರಿಕೆ ನೀಡಿ ಆಹ್ವಾನ ನೀಡಿದ್ದಾರೆ. ಖುಷಿಯಿಂದ ಕೆಲ ಸಮಯ ಕಾಲ ಕಳೆದಿದ್ದಾರೆ. ಇದನ್ನೂ ಓದಿ:ಅಲ್ಲು ಅರ್ಜುನ್-ಸುಕುಮಾರ್ ಕಾಂಬೋ ಬ್ಯಾಕ್, ಧೂಳ್ ಎಬ್ಬಿಸಿದ ‘ಪುಷ್ಪ 2’ ಗ್ಲಿಂಪ್ಸ್
View this post on Instagram
ಇತ್ತೀಚಿಗಷ್ಟೇ ಅಭಿಷೇಕ್- ಅವಿವಾ ನಿಶ್ಚಿತಾರ್ಥ ಅದ್ದೂರಿಯಾಗಿ ನೆರವೇರಿತ್ತು. ಈಗ ಜೂನ್ 5ಕ್ಕೆ ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್‌ನಲ್ಲಿ ಮದುವೆ ಕಾರ್ಯಕ್ರಮ ನಡೆಯಲಿದೆ. ಸಿನಿಮಾ ರಂಗ-ರಾಜಕೀಯ ರಂಗದ ಗಣ್ಯರು ಮದುವೆಗೆ ಭಾಗಿಯಾಗಲಿದ್ದಾರೆ. ಇದೀಗ ಈ ಶುಭಸುದ್ದಿ ಕೇಳ್ತಿದ್ದಂತೆ ಫ್ಯಾನ್ಸ್ ಅಭಿಷೇಕ್ ಜೋಡಿಗೆ ವಿಶ್ ಮಾಡ್ತಿದ್ದಾರೆ.