ನಿರ್ದೇಶಕ ವಿನೋದ್ ದೊಂಡಾಳೆ (Vinod Dondale) ನಾಗರಭಾವಿಯಲ್ಲಿರುವ ನಿವಾಸಕ್ಕೆ ಹಿರಿಯ ನಟ ಅಭಿಜಿತ್ (Actor Abhijith) ಭೇಟಿ ನೀಡಿ ಅಂತಿಮ ದರ್ಶನ ಪಡೆದಿದ್ದಾರೆ. ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ವಿನೋದ್ ಅವರ ಸಾವು ನೋವು ಕೊಟ್ಟಿದೆ. ಅವರು ಹೀಗೆ ನಿರ್ಧಾರ ತೆಗೆದುಕೊಂಡಿದ್ದಾರೆ ಅಂದರೆ ನಂಬೋಕೆ ಆಗ್ತಿಲ್ಲ ಎಂದು ನಟ ಅಭಿಜಿತ್ ಭಾವುಕರಾಗಿದ್ದಾರೆ. ಇದನ್ನೂ ಓದಿ:ಅದೆಷ್ಟೋ ಜನರಿಗೆ ವಿನೋದ್ ಬದುಕಿನ ದಾರಿ ಹೇಳಿ ಕೊಟ್ಟಿದ್ದಾರೆ: ನಟಿ ಲಕ್ಷ್ಮಿ ಸಿದ್ದಯ್ಯ
ಇದು ದುಃಖಕರ ಸನ್ನಿವೇಶ ಆಗಿದೆ. ವಿನೋದ್ ನಿರ್ದೇಶನದಲ್ಲಿ ‘ಗಂಗೆ ಗೌರಿ’ ಸೀರಿಯಲ್‌ನಲ್ಲಿ (Gange Gowri Serial) ಆ್ಯಕ್ಟ್ ಮಾಡ್ತಿದ್ದೇನೆ. ಅವರು ಸೌಮ್ಯ ಸ್ವಭಾವದವರಾಗಿದ್ದರು. ಸೆಟ್‌ನಲ್ಲಿ ಸಿಟ್ಟು ಮಾಡಿಕೊಂಡಿರೋದನ್ನು ನಾನು ನೋಡೇ ಇಲ್ಲ. ಇಂದು ಈ ರೀತಿಯ ನಿರ್ಧಾರ ತೆಗೆದುಕೊಂಡಿರೋದನ್ನ ಸಹಿಸಿಕೊಳ್ಳೋಕೆ ಆಗ್ತಿಲ್ಲ. ಅವರ ಸಾವು ಇಡೀ ಫ್ಯಾಮಿಲಿಗೆ ತುಂಬಾ ನೋವಾಗಿದೆ. ವಿನೋದ್ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಭಗವಂತ ಕೊಡಲಿ ಅಂತ ಕೇಳಿಕೊಳ್ಳುತ್ತೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದಿದ್ದಾರೆ. ವಿನೋದ್ ಇಲ್ಲದೇ ಇರೋದು ಕಿರುತೆರೆ ಮತ್ತು ಹಿರಿತೆರೆಗೆ ದೊಡ್ಡ ಲಾಸ್ ಎಂದು ಹಿರಿಯ ನಟ ಅಭಿಜಿತ್ ಮಾತನಾಡಿದ್ದಾರೆ.
‘ಗಂಗೆ ಗೌರಿ’ಯಲ್ಲಿ ಮದುವೆ ಸೀನ್ ಶೂಟಿಂಗ್ ಮಾಡುವಾಗ ಹೆಚ್ಚು ಸಮಯ ಕಳೆದಿದ್ದೇನೆ. ನನಗೆ ತುಂಬಾ ಗೌರವ ಕೊಡುತ್ತಿದ್ದರು. ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಇನ್ನೂ ಅವರು ಒಂದು ಸಿನಿಮಾ ಮಾಡ್ತಿದ್ದರು ಅದು ಇತ್ತೀಚೆಗೆ ಸ್ಟಾಪ್ ಆಗಿತ್ತು ಅನ್ನೋ ವಿಚಾರ ಗೊತ್ತಿತ್ತು ಎಂದಿದ್ದಾರೆ. ಯಾಕೆ ಏನು ಎಂದು ಹಿಂದಿನ ಸತ್ಯ ನಮಗೂ ಗೊತ್ತಿಲ್ಲ ಎಂದು ನಟ ಅಭಿಜಿತ್ ಮಾತನಾಡಿದ್ದಾರೆ.
ಅಂದಹಾಗೆ, ನಿರ್ದೇಶಕ ವಿನೋದ್ ದೊಂಡಾಳೆ ಜು.20ರಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಂದು (ಜು.21) ಚಾಮರಾಜಪೇಟೆ ಟಿ.ಆರ್ ಮಿಲ್‌ನಲ್ಲಿ ವಿನೋದ್ ದೊಂಡಾಳೆ ಅಂತ್ಯಕ್ರಿಯೆ ನಡೆಯಲಿದೆ.