ಕಪಿಲ್ ಶರ್ಮಾ ನಿರೂಪಣೆಯ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ಗೆ ನಟ ಆಮೀರ್ ಖಾನ್ (Aamir Khan) ಎಂಟ್ರಿ ಕೊಟ್ಟಿದ್ದಾರೆ. ಈ ವೇಳೆ, ಪಂಜಾಬ್ ಜನರ ನಮ್ರತೆಯನ್ನು ನಟ ಮೆಚ್ಚಿ ಮಾತನಾಡಿದ್ದಾರೆ. ನಾನು ಮುಸ್ಲಿಂನಾಗಿರುವುದರಿಂದ ಕೈ ಜೋಡಿಸಿ ಜನರಿಗೆ ನಮಸ್ತೆ ಹೇಳುವ ಅಭ್ಯಾಸವಿರಲಿಲ್ಲ. ಪಂಜಾಬ್‌ನಲ್ಲಿ ಚಿತ್ರೀಕರಣಕ್ಕೆಂದು ಎರಡೂವರೆ ತಿಂಗಳುಗಳನ್ನು ಕಳೆದ ನಂತರ, ನನಗೆ ನಮಸ್ತೆ ಎಂದು ಕೈ ಮುಗಿದು ಹೇಳುವ ಶಕ್ತಿ ಅರ್ಥವಾಯಿತು ಎಂದು ಹೇಳಿಕೊಂಡಿದ್ದಾರೆ.
ಈ ಕತೆ ನನಗೆ ತುಂಬ ಹತ್ತಿರವಾದದ್ದು. ‘ದಂಗಲ್’ ಸಿನಿಮಾವನ್ನು ಪಂಜಾಬ್‌ನಲ್ಲಿ ಚಿತ್ರೀಕರಣ ಮಾಡುವಾಗ ಅಲ್ಲಿಯ ಜನರನ್ನು ನಿಜವಾಗಿಯೂ ಇಷ್ಟಪಟ್ಟೆ. ಪಂಜಾಬಿ ಸಂಸ್ಕೃತಿಯು ಪ್ರೀತಿಯಿಂದ ತುಂಬಿದೆ. ‘ದಂಗಲ್’ (Dangal) ಸಿನಿಮಾಗಾಗಿ ನಾವು ಅಲ್ಲಿ ಹೋದಾಗ ಚಿತ್ರೀಕರಣ ಮಾಡುತ್ತಿದ್ದ ಸ್ಥಳ ಒಂದು ಪಟ್ಟ ಹಳ್ಳಿಯಾಗಿದ್ದು, ನಾವು ಆ ಸ್ಥಳದಲ್ಲಿ ಮತ್ತು ಆ ಮನೆಯಲ್ಲಿ ಎರಡು ತಿಂಗಳಿಗಿಂತ ಹೆಚ್ಚು ಕಾಲ ಶೂಟ್ ಮಾಡಿದ್ದೇವೆ ಎಂದಿದ್ದಾರೆ.
ಅಲ್ಲಿ ಶೂಟ್‌ಗೆಂದು ಬೆಳಗ್ಗೆ 5 ಗಂಟೆಗೆ ಕಾರ್‌ನಲ್ಲಿ ತಲುಪುತ್ತಿದ್ದಾಗ ಜನ ನನಗೆ ಕೈ ಮುಗಿದು ಸ್ವಾಗತಿಸುತ್ತಿದ್ದರು. ಮನೆಯ ಹೊರಗೆ ನಿಂತು ನಮಸ್ತೆ ಎಂದು ಕೈ ಮುಗಿದು ಹೇಳುತ್ತಿದ್ದರು. ಶೂಟ್ ಆಗಿ ಪ್ಯಾಕ್ ಅಪ್ ಆದ ಬಳಿಕವೂ ಮನೆ ಹೊರಗೆ ನಿಂತು ಕೈ ಮುಗಿದು ಗುಡ್ ನೈಟ್ ಎಂದು ಹೇಳುತ್ತಿದ್ದರು ಎಂದು ಆಮೀರ್ ಮಾತನಾಡಿದ್ದಾರೆ. ಇದನ್ನೂ ಓದಿ:ಭಾವಿ ಪತಿಯನ್ನು ಟ್ರೋಲ್ ಮಾಡಿದ್ದಕ್ಕೆ ‘ಮಾಣಿಕ್ಯ’ ನಟಿ ತಿರುಗೇಟು
ನಾನು ಮುಸ್ಲಿಂ ಆಗಿರುವುದರಿಂದ ಕೈ ಜೋಡಿಸಿ ಜನರಿಗೆ ನಮಸ್ತೆ ಎಂದು ಹೇಳುವ ಪದ್ಧತಿ ಇಟ್ಟುಕೊಂಡಿರಲಿಲ್ಲ. ಪಂಜಾಬ್‌ನಲ್ಲಿ ಕಳೆದ ನಂತರ ನಮಸ್ತೆ ಶಕ್ತಿ ಅರ್ಥವಾಯಿತು ಎಂದಿದ್ದಾರೆ.
ಕಡೆಯದಾಗಿ ಆಮೀರ್ ‘ಲಾಲ್ ಸಿಂಗ್ ಚಡ್ಡಾ’ ಚಿತ್ರದಲ್ಲಿ ನಟಿಸಿದ್ದರು. ಈಗ ‘ಸಿತಾರೆ ಜಮೀನ್ ಪರ್’ ಚಿತ್ರದಲ್ಲಿ ಆಮೀರ್ ಬ್ಯುಸಿಯಾಗಿದ್ದಾರೆ. ಈ ವರ್ಷದ ಅಂತ್ಯದಲ್ಲಿ ಸಿನಿಮಾ ರಿಲೀಸ್ ಆಗಲಿದೆ.