ಬಾಲಿವುಡ್ ನಟ ಆಮೀರ್ ಖಾನ್ (Aamir Khan) ಬಗ್ಗೆ ಹೊಸ ವಿವಾದವೊಂದು ಭುಗಿಲೆದ್ದಿದೆ. ಆಮೀರ್ ಗುರುನಾನಕ್ (Guru Nanak) ಪಾತ್ರದಲ್ಲಿ ನಟಿಸುತ್ತಾರೆ ಎನ್ನಲಾದ ಚಿತ್ರದ ಟೀಸರ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆ ನಾನು ಗುರುನಾನಕ್ ಸಿನಿಮಾ ಮಾಡುತ್ತಿಲ್ಲ ಎಂದು ಆಮೀರ್ ಟೀಮ್‌ನಿಂದ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ:ಪುರಿ ಜಗನ್ನಾಥ್, ವಿಜಯ್ ಸೇತುಪತಿ ಸಿನಿಮಾಗೆ ದುನಿಯಾ ವಿಜಯ್ ಎಂಟ್ರಿ
ಆಮೀರ್ ಖಾನ್ ಅವರು ಗುರುನಾನಕ್ ಲುಕ್‌ನಲ್ಲಿ ಕಾಣುವಂತೆ AI ನಕಲಿ ಪೋಸ್ಟರ್ ಅನ್ನು ಕಿಡಿಗೇಡಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದರು. ಇದರಿಂದ ಪರ ವಿರೋಧದ ಚರ್ಚೆ ಶುರುವಾಗಿತ್ತು. ಹಾಗಾಗಿ ಆಮೀರ್ ಖಾನ್ ಅವರು ತಮ್ಮ ಪಿಆರ್ ಟೀಮ್ ಮೂಲಕ ಕ್ಲ್ಯಾರಿಟಿ ನೀಡಿದ್ದಾರೆ. ನಾನು ಗುರುನಾನಕ್ ಸಿನಿಮಾ ಮಾಡುತ್ತಿಲ್ಲ. ಇದೀಗ ಹರಿದಾಡ್ತಿರೋದು AI ನಿರ್ಮಿತ ಟೀಸರ್ ಆಗಿದೆ. ಅದು ನಕಲಿ ಪೋಸ್ಟರ್, ನನಗೂ ಇದಕ್ಕೂ ಸಂಬಂಧವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಇಂತಹ ಸುದ್ದಿಗಳನ್ನು ನಂಬಬೇಡಿ ಎಂದು ವಿವಾದಕ್ಕೆ ಆಮೀರ್ ತೆರೆ ಎಳೆದಿದ್ದಾರೆ. ಇದನ್ನೂ ಓದಿ:ಮಾಜಿ ಪತ್ನಿ ಮನೆಗೆ ಗೆಳತಿಯೊಂದಿಗೆ ಬಂದ ಆಮೀರ್ ಖಾನ್
View this post on Instagram
ಸದ್ಯ 2022ರಲ್ಲಿ ಕಡೆಯದಾಗಿ ‘ಲಾಲ್ ಸಿಂಗ್ ಚಡ್ಡಾ’ ಚಿತ್ರದಲ್ಲಿ ಆಮೀರ್ ನಟಿಸಿದ್ದರು. ಇದೀಗ ಅವರು ‘ಸಿತಾರೆ ಜಮೀನ್ ಪರ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ.