ಭಯಂಕರವಾಗಿದೆ ಆಮೀರ್ ಖಾನ್ ಲುಕ್- ಏನಿದು ಹೊಸ ಗೆಟಪ್?

Public TV
1 Min Read
aamir khan

ಅಂಬಾನಿ ಮನೆ ಮಗನ ವಿವಾಹ ಪೂರ್ವ ಸಮಾರಂಭ ಮುಗಿದ ಬೆನ್ನಲ್ಲೇ ಅಭಿಮಾನಿಗಳು ಅಚ್ಚರಿಪಡುವಂತಹ ಅಪ್‌ಡೇಟ್‌ವೊಂದನ್ನು ಆಮೀರ್‌ (Aamir Khan) ಫ್ಯಾನ್ಸ್‌ಗೆ ಸಿಕ್ಕಿದೆ. ಬೆಚ್ಚಿ ಬೀಳಿಸುವ ಅವತಾರದಲ್ಲಿ ಸ್ಟಾರ್‌ ನಟ ಆಮೀರ್‌ ಖಾನ್‌ ಎಂಟ್ರಿ ಕೊಟ್ಟಿದ್ದಾರೆ. ನಟನ ಹೊಸ ಗೆಟಪ್ ಇದೀಗ ಫ್ಯಾನ್ಸ್‌ಗೆ ಹಾರರ್ ಫೀಲ್ ಕೊಡ್ತಿದೆ. ಇದನ್ನೂ ಓದಿ:ರಾಮ್ ಚರಣ್‌ಗೆ ‘ಇಡ್ಲಿ ವಡಾ’ ಎಂದ ಶಾರುಖ್ ಖಾನ್- ಫ್ಯಾನ್ಸ್ ಆಕ್ರೋಶ

aamir khan 2

‘ಲಾಲ್ ಸಿಂಗ್ ಚಡ್ಡಾ’ (Lal Singh Chaddha) ಚಿತ್ರದ ಸೋಲಿನ ನಂತರ ಆಮೀರ್ ಸಿನಿಮಾಗಳಿಂದ ದೂರ ಇದ್ದರು. ಇದೀಗ ಮತ್ತೆ ‘ಸಿತಾರೆ ಜಮೀನ್ ಪರ್’ ಚಿತ್ರದ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಬಾರಿ ಗೆಲ್ಲಲೇಬೇಕು ಎಂದು ಪಟ್ಟು ಹಿಡಿದು ಕಮ್ ಬ್ಯಾಕ್ ಆಗಿದ್ದಾರೆ.

aamir

ಸದ್ಯ ಆಮೀರ್ ಖಾನ್ (Aamir Khan) ಭಯಂಕರವಾಗಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಆದರೆ ಇದು ಸಿನಿಮಾದಲ್ಲಿನ ಲುಕ್? ಅಥವಾ ಜಾಹೀರಾತಿನ ಫೋಟೋನಾ ಎಂಬುದರ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ. ಆಮೀರ್ ಕೂಡ ತಮ್ಮ ಖಾತೆಯಲ್ಲಿ ಇದನ್ನು ಶೇರ್ ಮಾಡಿಕೊಂಡಿಲ್ಲ. ಆದರೆ ನೆಚ್ಚಿನ ನಟನ ನಯಾ ಗೆಟಪ್ ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಆಮೀರ್ ಪ್ರಾಜೆಕ್ಟ್‌ಗಳ ಮೇಲೆ ಫ್ಯಾನ್ಸ್‌ಗೆ ಕೌತುಕ ಮೂಡಿಸಿದೆ.

ಈಗ ಕಲಾವಿದರು ತಮ್ಮ ಕೆಲಸಗಳನ್ನು ಪ್ರಚಾರ ಮಾಡುವ ವೈಖರಿ ಬದಲಾಗಿದೆ. ಹೊಸ ಹೊಸ ತಂತ್ರಗಳನ್ನು ಬಳಸಿ ಪ್ರಮೋಟ್ ಮಾಡುತ್ತಾರೆ. ಹಾಗಾಗಿ ಆಮೀರ್ ಈ ಬಗ್ಗೆ ಅಧಿಕೃತವಾಗಿ ಹೇಳುವವರೆಗೂ ಕಾಯಬೇಕಿದೆ.

Share This Article