ಹಿಂದಿಯ ಸೂಪರ್ ಹಿಟ್ ಟಾಕ್ ಶೋ ಕಾಮಿಡಿ ವಿತ್ ಕಪೀಲ್ (Kapil) ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ ಬಾಲಿವುಡ್ ಹೆಸರಾಂತ ನಟ ಆಮೀರ್ ಖಾನ್ (Aamir Khan). ಅವರು ಈ ಕಾರ್ಯಕ್ರಮದಲ್ಲಿ ಸಾಕಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ ಲಾಲ್ ಸಿಂಗ್ ಚಡ್ಡಾ (Lal Singh Chadha) ಸಿನಿಮಾದ ಸೋಲಿನ ಹೊಣೆಯನ್ನೂ ಅವರು ಹೊತ್ತುಕೊಂಡಿದ್ದಾರೆ. ಸೆಟಲ್ ಆಗಿ ಆ ಸಿನಿಮಾದಲ್ಲಿ ನಟಿಸಲಿಲ್ಲ. ಹಾಗಾಗಿ ಜನರು ಅದನ್ನು ಸ್ವೀಕಾರ ಮಾಡಲಿಲ್ಲ ಎಂದಿದ್ದಾರೆ.
- Advertisement 2-
ಅಲ್ಲದೇ, ಅವರ ಮತ್ತೊಂದು ಸೂಪರ್ ಹಿಟ್ ಸಿನಿಮಾ ಪಿಕೆ ಸಿನಿಮಾದ ದೃಶ್ಯವೊಂದರ ಬಗ್ಗೆಯೂ ಅವರು ಮಾತನಾಡಿದ್ದಾರೆ. ಪಿಕೆ ಸಿನಿಮಾದ ದೃಶ್ಯವೊಂದರಲ್ಲಿ ರಿಯಲ್ ಆಗಿ ಬೆತ್ತಲೆಯಾಗಿಯೇ ನಟಿಸಿದ್ದೆ ಎಂದು ಅವರು ಹೇಳಿಕೊಂಡಿದ್ದಾರೆ.
- Advertisement 3-
- Advertisement 4-
ಪಿಕೆ ಸಿನಿಮಾದಲ್ಲಿ ಖಾಸಗಿ ಅಂಗಾಂಗಕ್ಕೆ ರೇಡಿಯೋ ಮುಚ್ಚಿಕೊಂಡು ಓಡುವ ದೃಶ್ಯವೊಂದಿದೆ. ಈ ದೃಶ್ಯದಲ್ಲಿ ತಾವು ಸಂಪೂರ್ಣ ಬೆತ್ತಲೆಯಾಗಿಯೇ ನಟಿಸಿದ್ದೆ. ಅದೊಂದು ರೀತಿಯಲ್ಲಿ ಮುಜಗರ ಕೂಡ ತಂದಿತ್ತು. ಮಾಡಲೇಬೇಕಾದ ಅನಿವಾರ್ಯ ಕೂಡ ಎದುರಾಗಿತ್ತು ಎಂದಿದ್ದಾರೆ ಆಮೀರ್.
ಈ ಮೊದಲು ನಿರ್ದೇಶಕ ರಾಜ್ ಕುಮಾರ್ ಹಿರಾನಿ, ಶಾರ್ಟ್ಸ್ ಧರಿಸಿದ್ದರು. ಅದನ್ನು ಹಾಕಿಕೊಂಡು ಓಡಲು ಸಾಧ್ಯವಾಗಲಿಲ್ಲ. ಪದೇ ಪದೇ ಬಿಚ್ಚಿ ಬೀಳುತ್ತಿತ್ತು. ಹಾಗಾಗಿ ಶಾರ್ಟ್ಸ್ ಕಿತ್ತಾಕಿ, ನೈಜವಾಗಿಯೇ ಬೆತ್ತಲೆ ದೃಶ್ಯ ಮಾಡಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಎಲ್ಲ ವಿಷ್ಯದಲ್ಲಿ ನಾನು ಫರ್ಫೆಕ್ಟ್ ಎಂದಿದ್ದಾರೆ ಆಮೀರ್.
ಹಳ್ಳಿಯೊಂದರಲ್ಲಿ ಚಿತ್ರೀಕರಣ ನಡೆದಿದ್ದರಿಂದ ಜನರೂ ಇರಲಿಲ್ಲ. ಶೂಟಿಂಗ್ ಸ್ಪಾಟ್ ನಲ್ಲೂ ಕಡಿಮೆ ಸದಸ್ಯರು ಇದ್ದರು. ಆದರೂ, ಆತಂಕದಲ್ಲೇ ಆ ದೃಶ್ಯವನ್ನು ಮುಗಿಸಿದೆ ಎಂದು ಆಮೀರ್ ಹೇಳಿಕೊಂಡಿದ್ದಾರೆ.