ಬಾಲಿವುಡ್ ನಟ ಆಮೀರ್ ಖಾನ್ (Aamir Khan) ಮನೆಯಲ್ಲಿ ಈದ್ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಈ ಹಿನ್ನೆಲೆ ನಟ ಆಮೀರ್ ಮಾಜಿ ಪತ್ನಿಯರು ಕೂಡ ಭಾಗಿಯಾಗಿ ಸಂಭ್ರಮಿಸಿದ್ದಾರೆ. ಹಬ್ಬದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇದನ್ನೂ ಓದಿ:ಅಂದು ಹೈದರಾಬಾದ್‌ನವಳು, ಇಂದು ಕರ್ನಾಟಕ: ರಶ್ಮಿಕಾ ಮಂದಣ್ಣ ಹೇಳಿಕೆ ವೈರಲ್
ರಂಜಾನ್ ಹಬ್ಬವನ್ನು ಮಾಜಿ ಪತ್ನಿಯರಾದ ರೀನಾ ದತ್ (Reena Dutt) ಮತ್ತು ಕಿರಣ್ ರಾವ್ (Kiran Rao) ಜೊತೆ ನಟ ಸೆಲೆಬ್ರೇಟ್ ಮಾಡಿದ್ದಾರೆ. ಮಕ್ಕಳಾದ ಜುನೈದ್ ಖಾನ್, ಆಜಾದ್ ರಾವ್ ಖಾನ್, ಇರಾ ಖಾನ್ ಸೇರಿದಂತೆ ಮುಂತಾದವರು ಹಬ್ಬದಲ್ಲಿ ಪಾಲ್ಗೊಂಡಿದ್ದಾರೆ. ಹಬ್ಬದ ಖುಷಿಯನ್ನು ದುಪ್ಪಟ್ಟು ಮಾಡಿದ್ದಾರೆ.
ಆಮೀರ್ ಖಾನ್ ಮಾಜಿ ಪತ್ನಿಯರಿಗೆ ಡಿವೋರ್ಸ್ ನೀಡಿದ್ದರೂ ಕೂಡ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರೋದು ಅನೇಕರಿಗೆ ಅಚ್ಚರಿ ಮೂಡಿಸಿದೆ. ಮಕ್ಕಳಿಗೆ ಯಾವುದೇ ಕೊರತೆ ಬರದೆ ಇರೋ ಹಾಗೆ ಪೋಷಕರಾಗಿ ಜವಾಬ್ದಾರಿ ನಿಭಾಯಿಸುರೋದು ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ. ಇದನ್ನೂ ಓದಿ:ದುನಿಯಾ ವಿಜಯ್ ನಿರ್ದೇಶನದ ಸಿನಿಮಾದಲ್ಲಿ ಉಮಾಶ್ರೀ
View this post on Instagram
ಅಂದಹಾಗೆ, ಇತ್ತೀಚೆಗೆ ಬೆಂಗಳೂರಿನ ಬೆಡಗಿ ಗೌರಿಯೊಂದಿಗೆ ಡೇಟಿಂಗ್ ಮಾಡ್ತಿರೋದಾಗಿ ಆಮೀರ್ ಖಾನ್ ಅಧಿಕೃತವಾಗಿ ಘೋಷಿಸಿದ್ದರು. ಇದೀಗ ಗೌರಿಯೊಂದಿಗೆ ವಾಸಿಸುತ್ತಿರೋದಾಗಿ ನಟ ತಿಳಿಸಿದ್ದರು.