ಕಾರ್ಯಕರ್ತರನ್ನು ಮನೆ ಬಾಗಿಲಿಗೆ ಬರಮಾಡಿಕೊಳ್ಳಲಿದ್ದಾರೆ ಹೆಚ್‍ಡಿಕೆ

Public TV
2 Min Read
HDK

– 2023 ಜೆಡಿಎಸ್ ಗುರಿ – ದಾರಿ ನಿಗದಿಗೆ ಮಂಥನ

ಬೆಂಗಳೂರು: 2023ರ ವಿಧಾನಸಭೆ ಚುನಾವಣೆಯನ್ನು ಗುರಿ ಇಟ್ಟುಕೊಂಡು ರಾಜ್ಯದಲ್ಲಿ ತೃತೀಯ ಶಕ್ತಿಯಾಗಿ ಹೊರಹೊಮ್ಮಲು ಜೆಡಿಎಸ್ ಸರ್ವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

ಈ ನಿಟ್ಟಿನಲ್ಲಿ ಪಕ್ಷದ ವರಿಷ್ಠ ನಾಯಕ ಹಾಗೂ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಾರ್ಯತಂತ್ರ ರೂಪಿಸುತ್ತಿದ್ದು, ಮನೆ ಬಾಗಿಲಿಗೆ ಪಕ್ಷದ ಕಾರ್ಯಕರ್ತರನ್ನು ಬರಮಾಡಿಕೊಂಡು ಸಮಾಲೋಚನೆ ನಡೆಸಲು ಮುಂದಾಗಿದ್ದಾರೆ. ರಾಜ್ಯದ ಉದ್ದಗಲಕ್ಕೂ ಇರುವ ಕಾರ್ಯಕರ್ತರಿಗೆ, ಮುಖಂಡರಿಗೆ ಚೈತನ್ಯ ತುಂಬುವುದು ಸೇರಿದಂತೆ ಪಕ್ಷವನ್ನು ಬಲಿಷ್ಠಗೊಳಿಸಲು ಎಲ್ಲಾ ತಂತ್ರಗಳನ್ನು ಅವರು ರೂಪಿಸುತ್ತಿದ್ದಾರೆ.  ಇದನ್ನೂ ಓದಿ:  ಯತ್ನಾಳ್, ಬೆಲ್ಲದ್‍ಗೆ ಅಭಿನಂದನೆ ಸಲ್ಲಿಸಿದ ಜಯಮೃತ್ಯುಂಜಯ ಸ್ವಾಮೀಜಿ

hdk session

ತಳಮಟ್ಟದಿಂದ ಪಕ್ಷವನ್ನು ಬಲವಾಗಿ ಮೇಲೆತ್ತಲು ಅಗತ್ಯ ಇರುವ ಎಲ್ಲಾ ಕ್ರಮಗಳ ಜೊತೆಗೆ ತಮ್ಮ ಪರಿಕಲ್ಪನೆಯಲ್ಲಿ ಪಕ್ಷಕ್ಕೆ ಪುನಶ್ಚೇತನ ನೀಡಲು ಮಾಜಿ ಸಿಎಂ ಶ್ರಮವಹಿಸುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಪಕ್ಷದ ಮುಂದಿರುವ ಆಯ್ಕೆಗಳು ಹಾಗೂ ಸವಾಲುಗಳು, ಅವುಗಳ ಪರಿಹಾರದ ಬಗ್ಗೆಯೂ ಅವರು ಚರ್ಚೆ ನಡೆಸಿ ಸೂಚನೆಗಳನ್ನು ನೀಡಲಿದ್ದಾರೆ.

ರಾಜ್ಯದ ಹಿತಾಸಕ್ತಿಗಳ ಪ್ರಶ್ನೆ ಬಂದಾಗ ರಾಷ್ಟ್ರೀಯ ಪಕ್ಷಗಳು ಇಬ್ಬಗೆಯ ನೀತಿ ತಾಳಿವೆ. ಜೆಡಿಎಸ್ ಮಾತ್ರ ಕನ್ನಡಿಗರಿಗೆ ಮಿಡಿಯುವ ಪಕ್ಷವಾಗಿದ್ದು, ಅದನ್ನು ಜನರಿಗೆ ಸಮರ್ಥವಾಗಿ ಮುಟ್ಟಿಸುವುದು ಸೇರಿ, ರಾಷ್ಟ್ರೀಯ ಪಕ್ಷಗಳು ಒಡ್ಡುವ ಸವಾಲುಗಳ ಬಗ್ಗೆ ಕೂಡ ಕುಮಾರಸ್ವಾಮಿ ಅವರು ವಿವರವಾಗಿ ಚರ್ಚೆ ಮಾಡಲಿದ್ದಾರೆ. ಇದನ್ನೂ ಓದಿ: ಅರ್ಚಕರಿಗೆ ಹಾಗೂ ದೇವಾಲಯ ನೌಕರರಿಗೆ ಆರೋಗ್ಯ ವಿಮೆ ಜಾರಿಗೊಳಿಸಲು ಶೀಘ್ರ ಕ್ರಮ: ಜೊಲ್ಲೆ

Congress JDS BJP 1

ಈ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಕುಮಾರಸ್ವಾಮಿ ಅವರು, ಸದ್ಯಕ್ಕೆ ಕನ್ನಡಿಗರಿಗೆ ಕಷ್ಟ ಎಂದು ಬಂದಾಗ ಪ್ರತಿಯೊಂದು ವಿಷಯಕ್ಕೂ ದೆಹಲಿಯತ್ತ ನೋಡುವ ದುಸ್ಥಿತಿ ಇದೆ. ಕಾಂಗ್ರೆಸ್ ಮತ್ತು ಬಿಜೆಪಿ ದಿಲ್ಲಿ ಸಂಸ್ಕøತಿಯಿಂದ ರಾಜ್ಯ ಹಿತವನ್ನು ನಿರಂತರವಾಗಿ ಬಲಿಗೊಡುತ್ತ ಬರಲಾಗಿದೆ. ಇದಕ್ಕೆ ಕಡಿವಾಣ ಹಾಕುವ ಅಗತ್ಯ ಇದೆ. 2023ರಲ್ಲಿ ಕನ್ನಡಿಗರೆಲ್ಲಾ ಒಂದಾಗಿ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಪಕ್ಷಗಳು ಎಷ್ಟೇ ಪ್ರಯತ್ನ ಮಾಡಿದರು ಜೆಡಿಎಸ್ ಪಕ್ಷವನ್ನು ಮುಗಿಸಲು ಸಾಧ್ಯವಾಗಿಲ್ಲ. ತುಳಿದಷ್ಟು ಅಷ್ಟೇ ಬಲವಾಗಿ ಪುಟಿದೆದ್ದು, ಬರುತ್ತಿದೆ ನಮ್ಮ ಪಕ್ಷ. ಅರ್ಪಣಾ ಮನೋಭಾವದ ಕಾರ್ಯಕರ್ತದಿಂದ ಇದು ಸಾಧ್ಯವಾಗಿದೆ ಎಂದರು. ಇದನ್ನೂ ಓದಿ: ಗೋಕಳ್ಳರ ಜೀಪ್ ಹಿಂದೆ ಅಮ್ಮನಿಗಾಗಿ ಅರಸುತ್ತ ಓಡಿದ ಕರು

ಕಾರ್ಯಗಾರದಲ್ಲಿ ಏನೇನಿರುತ್ತೆ?
ಮುಂದಿನ ಗುರಿ ಮತ್ತು ದಾರಿಯ ಬಗ್ಗೆ ಚರ್ಚೆ, ಕಾರ್ಯಕರ್ತರ ಸಮಸ್ಯೆಗಳ ಆಲಿಕೆ, ಪ್ರಶ್ನೆ, ಉತ್ತರ ಮತ್ತು ಪರಿಹಾರ, ತಳಮಟ್ಟದಲ್ಲಿ ಪಕ್ಷ ಕಟ್ಟುವ ಬಗ್ಗೆ ಸ್ಪಷ್ಟ ದಿಕ್ಸೂಚಿ, ಕಾರ್ಯಕರ್ತರ ಸಮಸ್ಯೆ ಪರಿಹಾರಕ್ಕೆ ನಿರಂತರ ವ್ಯವಸ್ಥೆ

Share This Article