ಲಕ್ನೋ: ಪಾಕಿಸ್ತಾನದ ಐಎಸ್‌ಐ (Pakistan ISI) ಜೊತೆ ಸಂಪರ್ಕ ಹೊಂದಿದ್ದ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್‌ನ (BKI) ಸಕ್ರಿಯ ಭಯೋತ್ಪಾದಕನನ್ನು ಉತ್ತರ ಪ್ರದೇಶ ಎಸ್‌ಟಿಎಫ್ ಮತ್ತು ಪಂಜಾಬ್ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಗುರುವಾರ ಮುಂಜಾನೆ ಕೌಶಂಬಿ (Kaushambi) ಜಿಲ್ಲೆಯಲ್ಲಿ ಬಂಧಿಸಿದ್ದಾರೆ.
ಪಂಜಾಬ್‌ನ ಅಮೃತಸರದ ರಾಮದಾಸ್ ಪ್ರದೇಶದ ಕುರ್ಲಿಯನ್ ಗ್ರಾಮದ ನಿವಾಸಿಯಾಗಿದ್ದ ಭಯೋತ್ಪಾದಕ ಲಾಜರ್ ಮಸಿಹ್‌ನನ್ನು ಕೌಶಂಬಿಯ ಕೊಖ್ರಾಜ್ ಪೊಲೀಸ್ ಠಾಣೆ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ ಗುರುವಾರ ಬೆಳಗಿನ ಜಾವ 3:20ರ ಸುಮಾರಿಗೆ ಬಂಧಿಸಲಾಯಿತು ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಯುಪಿ ವಿಶೇಷ ಕಾರ್ಯಪಡೆ, ಕಾನೂನು ಮತ್ತು ಸುವ್ಯವಸ್ಥೆ) ಅಮಿತಾಭ್ ಯಶ್ ತಿಳಿಸಿದ್ದಾರೆ. ಇದನ್ನೂ ಓದಿ: 1 ಕೆಜಿ ಚಿನ್ನ ಸಾಗಾಟಕ್ಕೆ ರನ್ಯಾಗೆ 4ರಿಂದ 5 ಲಕ್ಷ ಕಮಿಷನ್ – ನಟಿ ಕೇವಲ ಪಾತ್ರಧಾರಿ, ಅಸಲಿ ಕಿಂಗ್‌ಪಿನ್ ಬೇರೆ!
ಬಂಧಿತ ಭಯೋತ್ಪಾದಕ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್‌ನ (ಬಿಕೆಐ) ಜರ್ಮನಿ ಮೂಲದ ಮಾಡ್ಯೂಲ್ ಮುಖ್ಯಸ್ಥ ಸ್ವರ್ಣ್ ಸಿಂಗ್ ಅಲಿಯಾಸ್ ಜೀವನ್ ಫೌಜಿಗಾಗಿ ಕೆಲಸ ಮಾಡುತ್ತಿದ್ದ. ಅಲ್ಲದೇ ಪಾಕಿಸ್ತಾನ ಮೂಲದ ಐಎಸ್‌ಐ ಕಾರ್ಯಕರ್ತರೊಂದಿಗೆ ನೇರ ಸಂಪರ್ಕದಲ್ಲಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಜನೌಷಧಿ ಮಾದರಿಯಲ್ಲೇ ಜಾನುವಾರುಗಳಿಗೆ ‘ಪಶು ಔಷಧಿ’ ಯೋಜನೆ – ಕೇಂದ್ರ ಸಂಪುಟ ಅನುಮೋದನೆ
ಬಂಧಿತ ಉಗ್ರ ಕೆಲವು ಸ್ಫೋಟಕ ವಸ್ತುಗಳು ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳುವಲ್ಲಿ ಯುಪಿ ಎಸ್‌ಟಿಎಫ್ ಯಶಸ್ವಿಯಾಗಿದೆ. ವಶಪಡಿಸಿಕೊಂಡ ವಸ್ತುಗಳ ಪೈಕಿ ಮೂರು ಸಕ್ರಿಯ ಹ್ಯಾಂಡ್ ಗ್ರೆನೇಡ್, ಎರಡು ಸಕ್ರಿಯ ಡಿಟೋನೇಟರ್, ಒಂದು ವಿದೇಶಿ ನಿರ್ಮಿತ ಪಿಸ್ತೂಲ್ ಮತ್ತು ವಿದೇಶಿ ನಿರ್ಮಿತ 13 ಕಾರ್ಟ್ರಿಡ್ಜ್ಗಳು ಸೇರಿವೆ. ಇದಲ್ಲದೆ, ಬಿಳಿ ಬಣ್ಣದ ಸ್ಫೋಟಕ ಪುಡಿ, ಗಾಜಿಯಾಬಾದ್ ವಿಳಾಸ ಹೊಂದಿರುವ ಆಧಾರ್ ಕಾರ್ಡ್, ಸಿಮ್ ಕಾರ್ಡ್ ಇಲ್ಲದ ಒಂದು ಮೊಬೈಲ್ ಫೋನ್ ಅನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಮೆಟ್ರೋ ಟಿಕೆಟ್ ದರ ಏರಿಕೆ ಎಫೆಕ್ಟ್ – ಬೆಂಗ್ಳೂರಲ್ಲಿ ಟ್ರಾಫಿಕ್ ಜೊತೆಗೆ ವಾಯುಮಾಲಿನ್ಯವೂ ಹೆಚ್ಚಳ
ಬಂಧಿತ ಉಗ್ರ ಸೆಪ್ಟೆಂಬರ್ 24, 2024ರಂದು ಪಂಜಾಬ್‌ನಲ್ಲಿ ನ್ಯಾಯಾಂಗ ಬಂಧನದಿಂದ ತಪ್ಪಿಸಿಕೊಂಡಿದ್ದ ಎಂದು ಎಡಿಜಿಪಿ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: 137 ಅಕ್ರಮ ವಲಸಿಗರು ಪತ್ತೆ, ಕಠಿಣ ಕ್ರಮ ಕೈಗೊಳ್ಳಲಾಗಿದೆ: ಪರಮೇಶ್ವರ್