ನಾಳೆಯಿಂದ ಜ.4ರ ವರೆಗೆ ರಾತ್ರಿ 10 ಗಂಟೆಯಿಂದ ಎಲ್ಲಾ ಫ್ಲೈಓವರ್ ಕ್ಲೋಸ್: ಕಮಲ್ ಪಂಥ್

Public TV
2 Min Read
KAMAL PANTH 1

ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ ನೈಟ್ ಕರ್ಫ್ಯೂ ಜಾರಿಯಾಗುತ್ತಿರುವ ಹಿನ್ನೆಲೆ ಡಿಸೆಂಬರ್ 29 ರಿಂದ ಜನವರಿ 4ರ ವರೆಗೆ ಎಲ್ಲಾ ಫ್ಲೈಓವರ್‌ಗಳನ್ನು ಬಂದ್ ಮಾಡಲಾಗುತ್ತದೆ. ಅನಗತ್ಯ ಓಡಾಡಿದರೆ ಕೇಸ್ ಹಾಕಲಾಗುತ್ತದೆ ಎಂದು ಪೊಲೀಸ್ ಕಮಿಷನರ್ ಕಮಲ್ ಪಂಥ್ ಖಡಕ್ ವಾರ್ನಿಂಗ್ ನೀಡಿದ್ದಾರೆ.

NIGHT CURFEW 2 1

ಇಂದಿನಿಂದ ನೈಟ್ ಕರ್ಫ್ಯೂ ಜಾರಿ ಹಿನ್ನೆಲೆ ಪೊಲೀಸ್ ಹಿರಿಯ ಅಧಿಕಾರಿಗಳ ಸಭೆ ನಡೆಯಿತು. ಆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕಮಿಷನರ್, ನೈಟ್ ಕರ್ಫ್ಯೂ ಹಿನ್ನೆಲೆ ಎಲ್ಲಾ ಕಡೆ ವಾಹನ ತಪಾಸಣೆ ನಡೆಯುತ್ತದೆ. ರಾತ್ರಿ ಪಾಳಿ ಕೆಲಸ ಮಾಡುವವರಿಗೆ ಮತ್ತು ತುರ್ತು ಸೇವೆಗೆ ಅವಕಾಶ ನೀಡಲಾಗಿದೆ. ಇವತ್ತು ಪ್ಲೈಓವರ್ ಕ್ಲೋಸ್ ಇರೋಲ್ಲ. ಮೊದಲ ದಿನ ಆದ್ದರಿಂದ ಇವತ್ತು ಮಾಡ್ತಾ ಇಲ್ಲ. ನಾಳೆಯಿಂದ ಎಲ್ಲಾ ಪ್ಲೈ ಓವರ್ ಕ್ಲೋಸ್ ಆಗುತ್ತೆ. ಬೇಕಾಬಿಟ್ಟಿ ಓಡಾಟ ನಡೆಸಿದರೆ ಗಾಡಿ ಸೀಜ್ ಮಾಡುಲಾಗುತ್ತದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ನೈಟ್ ಕರ್ಫ್ಯೂ ನಿಯಮ ಉಲ್ಲಂಘಿಸಿದ್ರೆ ಎಫ್‌ಐಆರ್ – ಬಳ್ಳಾರಿ ಎಸ್‌ಪಿ ಎಚ್ಚರಿಕೆ

FotoJet 20 1

ಜನರಿಗೆ ಅಗತ್ಯ ವಸ್ತುಗಳನ್ನು ತರಿಸಿಕೊಳ್ಳಲು ಆನ್‍ಲೈನ್ ಬುಕ್ಕಿಂಗ್ ಮಾಡಲು ಸೂಚನೆ ಕೊಡಲಾಗಿದೆ. ಆನ್‍ಲೈನ್ ಬುಕ್ಕಿಂಗ್ ಬಿಟ್ಟು ಬೇರೆ ಯಾರಿಗೂ ಓಡಾಡೋದಕ್ಕೆ ಅವಕಾಶ ಇಲ್ಲ. ಯಾವ್ಯಾವ ಬಿಗಿ ಕ್ರಮಕೈಗೊಳ್ಳಬೇಕು ಅದನ್ನು ತೆಗೆದುಕೊಳ್ಳಲಾಗ್ತಾ ಇದೆ. ಸಾರ್ವಜನಿಕರಿಗೆ ತೊಂದರೆ ಆಗದಂತೆ ಬಂದೋಬಸ್ತು ಮಾಡಿಕೊಳ್ಳಲಾಗುತ್ತದೆ. ಬಾರ್, ಪಬ್, ರೆಸ್ಟೋರೆಂಟ್‍ಗಳ ಮೇಲೆ ತೀವ್ರ ನಿಗಾ ಇಡಬೇಕು. ಯಾವುದೇ ಕಾರಣಕ್ಕೂ ರಾತ್ರಿ 10 ಗಂಟೆ ಬಳಿಕ ಪಬ್, ಬಾರ್, ರೆಸ್ಟೋರೆಂಟ್ ಓಪನ್ ಇರದಂತೆ ನೋಡಬೇಕು. 9 ಗಂಟೆಯಿಂದಲೇ ಮೈಕ್ ಮೂಲಕ ಅನೌನ್ಸ್ ಮಾಡಬೇಕು. ಜೊತೆಗೆ ಹೊಯ್ಸಳಗಳು ಸದಾ ಗಸ್ತಿನಲ್ಲಿ ಇರುವಂತೆ ಕಮಿಷನರ್ ಸೂಚನೆ ನೀಡಿದ್ದಾರೆ. ಇದನ್ನೂ ಓದಿ:  ಬೇಡಿಕೆ ಈಡೇರಿಸುವಂತೆ ಪ್ರತಿಭಟಸಿದ 100ಕ್ಕೂ ಹೆಚ್ಚು ಆದಿವಾಸಿಗಳು ಪೊಲೀಸರ ವಶಕ್ಕೆ

ಸಭೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಎಲ್ಲಾ ವಿಭಾಗದ ಡಿಸಿಪಿಗಳು ಹಾಜರಿದ್ದರು.

ಯಾವ್ಯಾವ ಫೈಓವರ್‌ಗಳು ಬಂದ್?
ಸದ್ಯದ ಮಾಹಿತಿ ಪ್ರಕಾರ ಡಿ.29 ರಿಂದ ಜ.4ರ ವರೆಗೆ ಮಾತ್ರ ಫ್ಲೈಓವರ್ ಬಂದ್‍ಗೆ ಸೂಚನೆ ಇದೆ. ಕೆಆರ್ ಮಾರ್ಕೆಟ್, ಬಸವನಗುಡಿ, ಹೆಣ್ಣೂರು, ತುಮಕೂರು ರೋಡ್, ಆನಂದ್ ಸರ್ಕಲ್, ಡಬ್ಬಲ್ ರೋಡ್, ನಾಯಂಡಹಳ್ಳಿ, ಡೈರಿ ಸರ್ಕಲ್, ಆಗರ, ಸರ್ಜಾಪುರ, ಇಬ್ಬಲೂರು, ದೊಮ್ಮಲೂರು, ಇಂದಿರಾನಗರ 100 ರಸ್ತೆ, ಬೆಳ್ಳಂದೂರು, ಮೈಸೂರು ರಸ್ತೆ, ಯಶವಂತಪುರ ಮೇಲ್ಸೇತುವೆ, ತುಮಕೂರು ರಸ್ತೆ, ಹೆಣ್ಣೂರು ರಸ್ತೆ, ಕಾರ್ಡ್ ರಸ್ತೆ, ಸುಮನಹಳ್ಳಿ ಜಂಕ್ಷನ್, ನಾಯಂಡಹಳ್ಳಿ ಮೇಲ್ಸೇತುವೆ, ರಿಚ್ಮಂಡ್ ರಸ್ತೆ, ಡೈರಿ ಸರ್ಕಲ್, ಬನ್ನೇರುಘಟ್ಟ ರಸ್ತೆ ಸೇರಿದಂತೆ ಪ್ರಮುಖ ಫೈಓವರ್ ಗಳು ಬಂದ್ ಮಾಡುವ ಸಾಧ್ಯತೆ ಇದೆ.

Share This Article
Leave a Comment

Leave a Reply

Your email address will not be published. Required fields are marked *