ಬೆಂಗಳೂರು: ಹೊರ ರಾಜ್ಯದಿಂದ ಬರುವ ಅಕ್ರಮ ಮದ್ಯ (Illegal Alcohol) ತಡೆಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವುದಾಗಿ ಸಚಿವ ಬೋಸರಾಜು (NS Boseraju) ತಿಳಿಸಿದ್ದಾರೆ.
ವಿಧಾನ ಪರಿಷತ್ (Legislative Council) ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ನಾಗರಾಜ್ ಯಾದವ್ (Nagaraj Yadav) ಪ್ರಶ್ನೆ ಕೇಳಿದರು. ಅಬಕಾರಿ ಇಲಾಖೆಯಲ್ಲಿ ಈ ವರ್ಷ ಟಾರ್ಗೆಟ್ ರೀಚ್ ಆಗಿಲ್ಲ. ಕುಡುಕರು ಕಡಿಮೆ ಆಗಿದ್ದಾರೆ ಅಂದುಕೊಂಡಿದ್ದೆ. ಆದರೆ ನಕಲಿ ಮದ್ಯ, ಗೋವಾದಿಂದ ಅಕ್ರಮವಾಗಿ ಮದ್ಯ ಬರುತ್ತಿದೆ. ಹೀಗಾಗಿ ರಾಜ್ಯದಲ್ಲಿ ಟಾರ್ಗೆಟ್ ರೀಚ್ ಆಗಿಲ್ಲ. ಬೇರೆ ರಾಜ್ಯದಿಂದ ಅಕ್ರಮ ಮದ್ಯ ಬರುತ್ತಿರುವ ಬಗ್ಗೆ ಕ್ರಮ ಆಗಬೇಕು. ಗಡಿಭಾಗದಲ್ಲಿ ಇಂತಹ ಅಕ್ರಮ ಜಾಸ್ತಿ ಆಗುತ್ತಿದೆ. ಅಬಕಾರಿ ಇಲಾಖೆ ಕ್ರಮ ತೆಗೆದುಕೊಳ್ಳಬೇಕು. ಟಾಸ್ಕ್ ಫೋರ್ಸ್ ಮತ್ತಷ್ಟು ಉತ್ತಮವಾಗಿ ಕೆಲಸ ಮಾಡಬೇಕು ಎಂದು ಒತ್ತಾಯ ಮಾಡಿದರು. ಇದನ್ನೂ ಓದಿ: ರಾಜ್ಯ ಬಜೆಟ್ ಬಗ್ಗೆ ʻಕೈʼ ಶಾಸಕ ಇಕ್ಬಾಲ್ ಹುಸೇನ್ ಅಸಮಾಧಾನ
ಸಚಿವ ತಿಮ್ಮಾಪುರ್ ಬದಲಾಗಿ ಸಭಾ ನಾಯಕ ಬೋಸರಾಜು ಉತ್ತರ ನೀಡಿ, ಏಪ್ರಿಲ್ 2025ರಿಂದ ಜನವರಿ 2026ರಲ್ಲಿ ಅಬಕಾರಿಯಿಂದ 33,370.54 ಕೋಟಿ ಸಂಗ್ರಹ ಆಗಿದೆ. ಫೆಬ್ರವರಿ ಅಂತ್ಯಕ್ಕೆ 36,492.47 ಕೋಟಿ ಸಂಗ್ರಹ ಆಗಿದೆ. 0.51% ಆದಾಯ ಸಂಗ್ರಹ ಕಡಿಮೆ ಆಗಿದೆ. ಈ ವರ್ಷ ಮದ್ಯ ಮಾರಾಟ ಕುಸಿತ ಆಗಿದೆ. ಮಳೆ, ಚಳಿ ಜಾಸ್ತಿ ಆದ್ದರಿಂದ ಬಿಯರ್ ಮಾರಾಟ ಕಡಿಮೆ ಆಗಿದೆ ಎಂದು ಮಾಹಿತಿ ಕೊಟ್ಟರು. ಇದನ್ನೂ ಓದಿ: ಬಿಡದಿ ಪೊಲೀಸರ ಕಾರ್ಯಾಚರಣೆ – ಇಬ್ಬರು ಗ್ಯಾಸ್ ಕಳ್ಳರ ಬಂಧನ, 8 ಸಿಲಿಂಡರ್ ವಶಕ್ಕೆ
ಆಂಧ್ರ ಪ್ರದೇಶದಲ್ಲಿ ಅಬಕಾರಿ ನಿಯಮ ಬದಲಾವಣೆ ಮಾಡಿ ಮದ್ಯದ ಬೆಲೆ ಕಡಿಮೆ ಮಾಡಿದ್ದರು. ಅಲ್ಲಿಂದ ಮದ್ಯ ಜಾಸ್ತಿ ಬರಲಾಯಿತು. ಹೀಗಾಗಿ ನಮ್ಮಲ್ಲಿ ಮದ್ಯ ಕಡಿಮೆ ಮಾರಾಟ ಆಗಿದೆ. ಅಕ್ರಮ ಮದ್ಯ ಮಾರಾಟ ತಡೆಗೆ ಕ್ರಮವಹಿಸಲಾಗಿದೆ. ಡಿಸಿಗಳಿಗೆ ಜವಾಬ್ದಾರಿ ಕೊಟ್ಟು ಕ್ರಮ ಮಾಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಮಧ್ಯಪ್ರಾಚ್ಯದಲ್ಲಿ ಯುದ್ಧ – ಇತ್ತ ಕ್ರೂಸ್ ಕ್ಷಿಪಣಿ ಪರೀಕ್ಷಿಸಿ, ಶೂಟಿಂಗ್ ಮಾಡಿದ ಕಿಮ್ ಜಾಂಗ್ ಉನ್

