ಮಂಗಳೂರು: ಮುಸ್ಲಿಂ ಹೆಣ್ಮಕ್ಕಳಿಗೆ ಸಂಗೀತ ಹಾಗೂ ಕುಣಿತ ಧಾರ್ಮಿಕ ಕಟ್ಟುಪಾಡುಗಳ ಅನುಸಾರ ನಿಷೇಧವಾಗಿದೆ. ಆದರೆ ಈಗಿನ ತಲೆಮಾರಿನ ಕೆಲವು ಹೆಣ್ಮಕ್ಕಳು ಹಾಡು ಮತ್ತು ಕುಣಿತಕ್ಕೆ ಮುಂದಾಗುತ್ತಿರುವುದು ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ.
Advertisement
ಮಂಗಳೂರಿನ ಮಾಲ್ ಒಂದರಲ್ಲಿ ಇತರೇ ಹುಡುಗಿಯರ ಜೊತೆ ಬುರ್ಖಾ ಹಾಕಿಕೊಂಡಿದ್ದ ಯುವತಿಯೊಬ್ಬಳು ಡ್ಯಾನ್ಸ್ ಕಾರ್ಯಕ್ರಮದಲ್ಲಿ ಹೆಜ್ಜೆ ಹಾಕಿದ ವಿಡಿಯೋ ಈಗ ವೈರಲ್ ಆಗಿದ್ದು ಮುಸ್ಲಿಂ ವಾಟ್ಸಪ್ ಗ್ರೂಪ್‍ಗಳಲ್ಲಿ ಹರಿದಾಡುತ್ತಿದೆ.
Advertisement
Advertisement
ಕುಣಿತ ಹಾದರಕ್ಕೆ ಸಮ ಎನ್ನುವಂತೆ ಟೀಕಿಸುತ್ತಿದ್ದು ಆಕೆಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒಂದು ವರ್ಗ ಒತ್ತಾಯಿಸುತ್ತಿದೆ. ಈ ಹಿಂದೆ ಖಾಸಗಿ ವಾಹಿನಿಯಲ್ಲಿ ಶಿವಮೊಗ್ಗ ಮೂಲದ ಸುಹಾನಾ ಎಂಬ ಮುಸ್ಲಿಂ ಹುಡುಗಿ ಹಾಡು ಹಾಡಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು.
Advertisement