ಶಿವಮೊಗ್ಗದಲ್ಲಿ ಧ್ರುವ ಸರ್ಜಾ- ಕಿಕ್ಕಿರಿದ ಅಭಿಮಾನಿಗಳು

Public TV
1 Min Read
smg dhruva sarja collage copy

ಶಿವಮೊಗ್ಗ: ಜಿಲ್ಲೆಯ ನವೀಕೃತ ಜೋಯಾಲುಕ್ಕಾಸ್ ಮಳಿಗೆಯನ್ನು ಖ್ಯಾತ ನಟ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕಿಕ್ಕಿರಿದ ಅಭಿಮಾನಿಗಳ ನಡುವೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಜೋಯಾಲುಕ್ಕಾಸ್ ಸಮೂಹದ ಸಿಎಂಡಿ ಜಾಯ್ ಅಲುಕ್ಕಾಸ್ ಇನ್ನಿತರರು ಉಪಸ್ಥಿತರಿದ್ದರು.

ಧ್ರುವ ಸರ್ಜಾ ಮಳಿಗೆ ಉದ್ಘಾಟಿಸಿ ಚಿನ್ನಾಭರಣ, ವಜ್ರ, ವಾಚ್ ಇನ್ನಿತರ ವಿಭಾಗಗಳಿಗೆ ಭೇಟಿ ನೀಡಿ ವೈವಿಧ್ಯಮಯ ಶ್ರೇಣಿ ಹಾಗೂ ವಿನ್ಯಾಸಗಳಿಗೆ ಮೆಚ್ಚುಗೆ ಸೂಚಿಸಿದರು. ಈ ಮಳಿಗೆಯಲ್ಲಿನ ಪ್ರಾಚೀನ ಸಂಗ್ರಹಗಳನ್ನು ಒಳಗೊಂಡ ಹರಳುಗಳ ವಿಭಾಗ ಅಪೂರ್ವ ಸೇರಿದಂತೆ ವಿವಿಧ ವಿಭಾಗಗಳಲ್ಲಿನ ವಿವಿಧತೆಗೆ ಸಂತಸ ವ್ಯಕ್ತಪಡಿಸಿದರು.

smg dhruva sarja 2 copy

ನವೀಕೃತ ಮಳಿಗೆ ಆರಂಭಗೊಂಡ ಬೆನ್ನಲ್ಲೇ ಜೋಯಾಲುಕ್ಕಾಸ್ ಗ್ರಾಹಕರಿಗೆ ವಿವಿಧ ಕೊಡುಗೆಗಳನ್ನು ಘೋಷಿಸಿದೆ. ಪ್ರತಿ ಖರೀದಿಯ ಮೇಲೆ ಖಚಿತವಾದ ಗೃಹ ಬಳಕೆ ವಸ್ತುಗಳನ್ನು ಉಚಿತವಾಗಿ ಪಡೆಯಲಿದ್ದಾರೆ. ಬೆಳಗ್ಗಿನಿಂದಲೇ ತಮ್ಮ ಪ್ರೀತಿಯ ನಟ ಧ್ರುವ ಸರ್ಜಾ ಅವರನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಿಕ್ಕಿರಿದು ತುಂಬಿದ್ದರು.

ವೇದಿಕೆ ಮೇಲೆ ಬಂದ ಧ್ರುವ ಸರ್ಜಾ ಶಿವಮೊಗ್ಗ ಅಭಿಮಾನಿಗಳಿಗಾಗಿ ಸಿನಿಮಾ ಡೈಲಾಗ್ ಹೇಳಿ ರಂಜಿಸಿದರು. ಅಲ್ಲದೇ ಜೋಯಾಲುಕ್ಕಾಸ್ ಮಳಿಗೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಧ್ರುವ ಸರ್ಜಾ ಹಿಂತಿರುಗುವಾಗ ಅವರಿಗೆ ಅಡ್ಡಲಾದ ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *