ಬೆಂಗಳೂರು: ಪ್ರಥಮ್ ಅಭಿನಯದ ಎಂಎಲ್‍ಎ ಚಿತ್ರದ ಹಾಡುಗಳು ಈಗ ಎಲ್ಲೆಡೆ ಗುನುಗಿಸಿಕೊಳ್ಳುತ್ತಿವೆ. ಹೀಗಿರುವಾಗಲೇ ಈ ಚಿತ್ರದ ವೀಡಿಯೋ ಸಾಂಗ್ ಒಂದು ಇನ್ನೊಂದು ದಿನಗಳಲ್ಲಿ ಬಿಡುಗಡೆಯಾಗಲಿದೆ. ಇದನ್ನು ಬಿಡುಗಡೆ ಮಾಡುತ್ತಿರುವವರು ಆಕ್ಷನ್ ಪ್ರಿನ್ಸ್ ಧೃವ ಸರ್ಜಾ!
ಈಗಾಗಲೇ ದರ್ಶನ್, ಯಶ್ ಸೇರಿದಂತೆ ಅನೇಕ ನಟರು ಎಂಎಲ್‍ಎ ಚಿತ್ರದ ಹಾಡುಗಳನ್ನು ಮೆಚ್ಚಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಈ ಹಾಡುಗಳನ್ನು ಕೇಳಿದ್ದ ಧೃವ ಸರ್ಜಾ ಕೂಡಾ ಖುಷಿಗೊಂಡಿದ್ದಾರಂತೆ. ಈ ಬಗ್ಗೆ ಧೃವ ನೇರವಾಗಿ ಪ್ರಥಮ್ ಮನೆಗೆ ತೆರಳಿ ಮೆಚ್ಚುಗೆ ಸೂಚಿಸಿದ್ದಾರೆ. ಇದೇ ಸಂದರ್ಭದಲ್ಲಿ ಅದಾಗಲೇ ರೆಡಿಯಾಗಿದ್ದ ವೀಡಿಯೋ ಸಾಂಗ್ ಒಂದನ್ನು ಪ್ರಥಮ್ ಧೃವ ಸರ್ಜಾಗೆ ತೋರಿಸಿದ್ದಾರೆ.
ಇದನ್ನು ಅಪಾರವಾಗಿ ಮೆಚ್ಚಿಕೊಳ್ಳುತ್ತಲೇ ಧೃವ ಅದನ್ನು ಸ್ವತಃ ಅನಾವರಣಗೊಳಿಸಲೂ ಒಪ್ಪಿಕೊಂಡಿದ್ದಾರೆ. ಧೃವ ಮನೆಗೇ ಬಂದು ತಮ್ಮನ್ನು ಭೇಟಿಯಾಗಿದ್ದರ ಬಗ್ಗೆ ಥ್ರಿಲ್ ಆಗಿರೋ ಪ್ರಥಮ್ ಅವರನ್ನು ಕೊಂಡಾಡಿದ್ದಾರೆ. ಕುಚೇಲನ ಮನೆಗೆ ಕೃಷ್ಣ ಬಂದಂತಾಯಿತೆಂದು ಬಣ್ಣಿಸಿರೋ ಪ್ರಥಮ್, ಧೃವಾರ ಫಿಟ್ನೆಸ್ ಮುಂತಾದವನ್ನು ಪರಿಗಣಿಸಿ ಅವರಿಗೆ ಡೆಡಿಕೇಟೆಡ್ ಹೀರೋ ಎಂಬ ಬಿರುದನ್ನೂ ದಯಪಾಲಿಸಿದ್ದಾರೆ!
ಪ್ರಥಮ್ ಫೇಸ್‍ಬುಕ್ ಪೋಸ್ಟ್ ಪೂರ್ಣ ಪಾಠ ಇಂತಿದೆ:
ಪ್ರೀತಿಯ ಸೋದರ,dedicated star…. (ನೀವ್ action prince ಇನ್ನು ಏನ್ ಬೇಕಾದ್ರು ಕರ್ಕೊಳಿ,ಈ ಮನುಷ್ಯನ gym,workout,dedication towards his film,ನೋಡ್ಬಿಟ್ಟು ನಾನ್ ಇಟ್ಟ ಹೆಸರು dedicated star*)
ಮೊನ್ನೆ ನಮ್ ಮನೆಗೆ ಬಡವನ ಮನೆಗೆ(ಕುಚೇಲನ ಮನೆಗೆ) ಶ್ರೀ ಕೃಷ್ಣ ಬಂದಂಗೆ ಬಂದಿದ್ರು….
Songs ನೋಡಿ ಫ಼ುಲ್ ಖುಷ್…
ನಾಳಿದ್ದು ವೀಡಿಯೋ ಸಾಂಗ್ release ಮಾಡ್ತಿದ್ದಾರೆ…ನೀವೆಲ್ಲರೂ ನೋಡ್ಲೇಬೇಕು…. #ಅಪ್ಪುಆಶೀರ್ವಾದ,#ದರ್ಶನ್ ಸರ್ ಹಾರೈಕೆ,#ದೃವಸರ್ಜಾ ರ ಸ್ನೇಹ…ಕನ್ನಡಿಗರ ಪ್ರೀತಿಯ ಭಿಕ್ಷೆಯೇ ಈ #MLA..
ಮಿಸ್ ಮಾಡದೇ ನಾಳಿದ್ದು ನೋಡಿ….ಹಾರೈಸಿ…
ಸಧ್ಯಕ್ಕೆ ಎಲ್ಲಾ ಕನ್ನಡಿಗರಿಗೂ ತಲುಪಿಸಿ….ಅರ್ಥ ಆಗ್ಲಿಲ್ವಾ?share ಮಾಡಿ ದೇವ್ರು….????
☺
ಪ್ರೀತಿಯ #ದೃವ_ಸರ್ಜಾ ರವರು ಇವಾಗ ನಮ್ ಮನೆಗೆ ಬಂದಿದ್ರು…. ಧನ್ಯವಾದಗಳು. ಸಕ್ಕಾತಾಗಿದೆ ಗೆಳೆಯ ದೇವರ ವಿಗ್ರಹ ಅಂದ್ರು….ಅಯ್ಯೋ ಬನ್ನಿ ಬಾಸ್… “#ನೀವ್_ಬಂದಿದ್ದು_ಬಡವರ_ಮನೆಗೆ_ಗ್ರಾಮವಾಸ್ತವ್ಯದ_ಕುಮಾರಣ್ಣ_ಬಂದಂಗಾಯ್ತು….”????
????
ಅಂದೆ…dialogue ಅಂತೂ ನೀವ್ ಸೂಪರ್ ಪ್ರಥಮ್ ಅಂದ್ರು…ಅತೀ ಶೀಘ್ರದಲ್ಲೇ surprise…wait ಮಾಡ್ತಾ ಇರಿ…