ಬೆಂಗಳೂರು: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ತಮ್ಮ ಹುಟ್ಟುಹಬ್ಬದ ದಿನವೇ ಮದುವೆಯ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.
ಇಂದು ಹುಟ್ಟುಹಬ್ಬ ಇರುವ ಹಿನ್ನೆಲೆಯಲ್ಲಿ ಧ್ರುವ ಮನೆ ಮುಂದೆ ಅಭಿಮಾನಿಗಳು ಜಮಾಯಿಸಿದ್ದರು. ಈ ವೇಳೆ ಧ್ರುವ ನವೆಂಬರ್ 24 ಹಾಗೂ 25ರಂದು ವೈವಾಹಿಕ ಜೀವನಕ್ಕೆ ಕಾಲಿಡುವುದಾಗಿ ಅಧಿಕೃತವಾಗಿ ಅನೌನ್ಸ್ ಮಾಡಿದ್ದಾರೆ. ಈ ಮೂಲಕ ಸರ್ಜಾ ಕುಟುಂಬದಲ್ಲಿ ಮದುವೆ ಸಂಭ್ರಮಕ್ಕೆ ಕೌಂಟ್ ಡೌನ್ ಶುರುವಾಗಿದೆ. ಇದನ್ನೂ ಓದಿ: 31ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಆ್ಯಕ್ಷನ್ ಪ್ರಿನ್ಸ್
2018ರ ಡಿಸೆಂಬರಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಧ್ರುವ ಸರ್ಜಾ ಮತ್ತು ಪ್ರೇರಣಾ ಜೋಡಿ ನವೆಂಬರ್ ನಲ್ಲಿ ಮದುವೆಯಾಗಲಿದ್ದಾರೆ. ಧ್ರುವ ಮತ್ತು ಪ್ರೇರಣಾ 14 ವರ್ಷಗಳಿಂದ ಪ್ರೀತಿಸುತ್ತಿದ್ದರು. ಮನೆಯಲ್ಲಿ ಪ್ರೀತಿಯ ವಿಚಾರವನ್ನು ತಿಳಿಸಿ ಒಪ್ಪಿಗೆ ಪಡೆದುಕೊಂಡು ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ಈಗಾಗಲೇ ಇಬ್ಬರ ಮನೆಯಲ್ಲಿ ಮದುವೆ ತಯಾರಿಗಳು ಜೋರಾಗಿ ಸಾಗುತ್ತಿದ್ದು, ಧ್ರುವ ಸದ್ಯ ಪೊಗರು ಚಿತ್ರದ ಶೂಟಿಂಗ್ ಕಂಪ್ಲೀಟ್ ಮಾಡಿ, ಬಳಿಕ ಮದುವೆಗಾಗಿ ತಮ್ಮ ಲುಕ್ ಬದಲಾಯಿಸಿಕೊಳ್ಳಲಿದ್ದಾರೆ. ತಮ್ಮ ನೆಚ್ಚಿನ ನಟನ ಮದುವೆ ವಿಷಯ ತಿಳಿದ ಅಭಿಮಾನಿಗಳು ಅವರಿಗೆ ಶುಭಾಷಯ ಕೋರುತ್ತಿದ್ದಾರೆ.
ಧ್ರುವ ಶನಿವಾರ ತಮ್ಮ ಟ್ವಿಟ್ಟರಿನಲ್ಲಿ, “ಪೊಗರು ಚಿತ್ರದ ಪೋಸ್ಟರ್ ಟ್ವೀಟ್ ಮಾಡಿದ್ದರು. ಈ ಫೋಟೋದಲ್ಲಿ ಅಕ್ಟೋಬರ್ 24ರಂದು ಡೈಲಾಗ್ ಟ್ರೈಲರ್ ಬಿಡುಗಡೆಯಾಗಲಿದೆ” ಎಂದು ಬರೆಯಲಾಗಿತ್ತು. ಈ ಫೋಟೋಗೆ ಧ್ರುವ “ಪೊಗರು ನಮ್ಮನ್ನು ಬೆಂಬಲಿಸಿ” ಎಂದು ಬರೆದುಕೊಂಡಿದ್ದರು.
POGARUU ✊????????
Dialogues trailer on Oct 24th ????
Encourage us ????
ಜೈ ಆಂಜನೇಯ ???? pic.twitter.com/SGG7e6OnB1
— Dhruva Sarja (@DhruvaSarja) October 5, 2019
ಪೊಗರು ರೊಮ್ಯಾಂಟಿಕ್ ಆ್ಯಕ್ಷನ್ ಚಿತ್ರವಾಗಿದ್ದು, ಧ್ರುವ ಸರ್ಜಾ ಅವರಿಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಹಾಗೂ ಶಾನ್ವಿ ಶ್ರೀವಾತ್ಸವ್ ನಟಿಸುತ್ತಿದ್ದಾರೆ. ಈ ಚಿತ್ರವನ್ನು ನಂದಕಿಶೋರ್ ನಿರ್ಮಿಸುತ್ತಿದ್ದು, ಬಿ.ಕೆ ಗಂಗಾಧರ್ ನಿರ್ಮಿಸುತ್ತಿದ್ದಾರೆ. ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿಯಲ್ಲೂ ಪೊಗರು ರಿಲೀಸ್ ಆಗಲಿದೆ.