ಕನ್ನಡದ ಹೆಸರಾಂತ ಸಾಹಸ ನಿರ್ದೇಶಕ ರವಿವರ್ಮ (Ravi Varma) ಪೆಟ್ಟು ಮಾಡಿಕೊಂಡಿದ್ದಾರೆ. ವಿಕ್ರಮ್ ರವಿಚಂದ್ರನ್ ನಟನೆಯ ಮುಧೋಳ್ (Mudhol) ಸಿನಿಮಾದ ಶೂಟಿಂಗ್ ವೇಳೆ ಈ ಘಟನೆ ನಡೆದಿದ್ದು, ಸಾಹಸ ದೃಶ್ಯಕ್ಕಾಗಿ ಕಟ್ಟಿದ ರೋಪ್ ಹರಿದು ಪೆಟ್ಟು ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
Advertisement
ವಿಕ್ರಮ್ ರವಿಚಂದ್ರನ್ (Vikram Ravichandran) ಮುಖ್ಯಭೂಮಿಕೆಯಲ್ಲಿ ಈ ಸಿನಿಮಾ ಮೂಡಿ ಬರುತ್ತಿದ್ದು, ಸಾಕಷ್ಟು ಸಾಹಸ ಸನ್ನಿವೇಶಗಳನ್ನು ಚಿತ್ರಕ್ಕಾಗಿ ಕಂಪೋಸ್ ಮಾಡಲಾಗಿದೆಯಂತೆ. ಸಾಮಾನ್ಯವಾಗಿ ಕಷ್ಟದ ಸ್ಟಂಟ್ ಗಳನ್ನೇ ಕಂಪೋಸ್ ಮಾಡುವ ರವಿವರ್ಮ, ಈ ಸಿನಿಮಾದಲ್ಲೂ ಅಂಥದ್ದೊಂದು ದೃಶ್ಯವನ್ನು ಕಂಪೋಸ್ ಮಾಡಿದ್ದರಂತೆ. ಈ ದೃಶ್ಯವನ್ನು ಚಿತ್ರೀಕರಿಸುವಾಗ ಅವರಿಗೆ ಗಾಯವಾಗಿದೆ.
Advertisement
Advertisement
ಆತಂಕ ಪಡುವಂತಹ ಘಟನೆ ಅದಲ್ಲವಾದರೂ, ರವಿವರ್ಮ ಪದೇ ಪದೇ ಇಂತಹ ಘಟನೆಗಳಿಗೆ ಸಾಕ್ಷಿ ಆಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಮಾಸ್ತಿಗುಡಿ ಸಿನಿಮಾದಲ್ಲೂ ದುರ್ಘಟನೆ ನಡೆದಿತ್ತು. ಮೊನ್ನೆಯಷ್ಟೇ ಜೋಗಿ ಪ್ರೇಮ್ ನಿರ್ದೇಶನ ಕೇಡಿ ಸಿನಿಮಾದಲ್ಲೂ ನಟರೊಬ್ಬರು ಗಾಯ (Injury) ಮಾಡಿಕೊಂಡಿದ್ದರು. ಈ ಎರಡು ಚಿತ್ರಗಳಿಗೂ ಇವರೇ ಸಾಹಸ ನಿರ್ದೇಶಕರು. ಇದನ್ನೂ ಓದಿ:ಕಸ್ಟಡಿಯಲ್ಲಿ ಪೊಲೀಸ್ ಕಾನ್ಸ್ ಟೇಬಲ್ ಆದ ನಾಗ ಚೈತನ್ಯ
Advertisement
ಮುಧೋಳ್ ಸಿನಿಮಾ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಶೂಟಿಂಗ್ ನಡೆಯುತ್ತಿದ್ದು, ಪ್ರಧಾನ ಸಾಹಸಮಯ ಸನ್ನಿವೇಶಗಳನ್ನು ನಿರ್ದೇಶಕರು ಸೆರೆ ಹಿಡಿಯುತ್ತಿದ್ದಾರೆ. ಇದೊಂದು ಆಕ್ಷನ್ ಸಿನಿಮಾವಾಗಿದ್ದು, ಕಳೆದ ಒಂದು ವಾರದಿಂದ ಚಿತ್ರೀಕರಣ ನಡೆಯುತ್ತಿದೆ.