ಬೆಂಗಳೂರು: ಕಿಯೋನಿಕ್ಸ್ ಹಗರಣದಲ್ಲಿ ಭಾಗಿಯಾದವರ ವಿರುದ್ದ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಕಿಯೋನಿಕ್ಸ್ (Karnataka State Electronics Development Corporation Limited) ಅಧ್ಯಕ್ಷ, ಶಾಸಕ ಶರತ್ ಬಚ್ಚೇಗೌಡ (Sharath Bachegowda) ಹೇಳಿದರು.
ನಗರದಲ್ಲಿ ಕಿಯೋನಿಕ್ಸ್ ವೆಂಡರ್ಸ್ ದಯಾಮರಣಕ್ಕೆ ಪತ್ರ ಬರೆದಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಅಕೌಂಟೆಂಟ್ ಜನರಲ್ ವರದಿಯಲ್ಲಿ ಸರ್ಕಾರದ ಖಜಾನೆಗೆ ನೂರಾರು ಕೋಟಿ ನಷ್ಟ ಆಗಿದೆ. ಮಹೇಶ್ವರ್ ರಾವ್ ಕಮಿಟಿ ವರದಿ ಪಡೆದು ಬಿಲ್ ಕ್ಲಿಯರ್ ಮಾಡುತ್ತೇವೆ. ಸಾರ್ವಜನಿಕರ ಹಣ ಬಳಸಿ ಅನುದಾನ ನೀಡ್ತಿದ್ದೇವೆ. ಬೆಲೆ ನಿಗದಿ ವಿಚಾರದಲ್ಲೂ ಮಾರ್ಕೆಟ್ ಬೆಲೆಗಿಂದ ಹೆಚ್ಚಿನ ಬೆಲೆಗೆ ಸಪ್ಲೈ ಮಾಡಿರುವ ಆರೋಪ ಇದೆ. ಶೀಘ್ರವಾಗಿ ಹಣ ಬಿಡುಗಡೆಗೆ ಕ್ರಮವಹಿಸಲಾಗುವುದು. ಇನ್ನೂ ಕಿಯೋನಿಕ್ಸ್ ಹಗರಣದಲ್ಲಿ ಭಾಗಿಯಾದವರ ವಿರುದ್ದ ಶಿಸ್ತು ಕ್ರಮ ಜರುಗಿಸಲಾಗುವುದು. 2021, 22, 23ನೇ ಸಾಲಿನ ಮೂರು ವರ್ಷದ ಖರ್ಚು ವೆಚ್ಚಗಳ ಪರಿಶೀಲನೆ ನಡೆಯುತ್ತಿದೆ ಎಂದು ತಿಳಿಸಿದರು.ಇದನ್ನೂ ಓದಿ: ಕಿಯೋನಿಕ್ಸ್ ವೆಂಡರ್ಸ್ ಆತ್ಮಹತ್ಯೆ ಮಾಡಿಕೊಂಡ್ರೆ ಪ್ರಿಯಾಂಕ್, ಶರತ್ ಬಚ್ಚೇಗೌಡ ಕಾರಣ: ರಾಷ್ಟ್ರಪತಿಗಳಿಗೆ ಪತ್ರ
ಇದೇ ವೇಳೆ ಐಟಿ,ಬಿಟಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ (Priyank Kharge) ಮಾತನಾಡಿ, ಅಕೌಂಟೆಂಟ್ ಜನರಲ್ ಅವರು ಯಾವುದೇ ಮಾನದಂಡ ಪಾಲಿಸದೇ ಪರ್ಚೆಸಿಂಗ್ ಬಿಲ್ಲಿಂಗ್ ಟೆಂಡರ್ ಮಾಡಿದ್ದಾರೆ ಮತ್ತು ಡೂಪ್ಲಿಕೇಟ್ ಬಿಲ್, ಮಾರ್ಕೆಟ್ ರೇಟ್‌ಗಿಂತ ಹೆಚ್ಚಿನ ದರಕ್ಕೆ ಮಟಿರಿಯಲ್ ಸಪ್ಲೈ ಆರೋಪ ಇದೆ. ಅಂದಾಜು 500 ಕೋಟಿ ರೂ. ಅವ್ಯವಹಾರ ಕಂಡು ಬಂದಿದೆ. ಆಡಿಟ್ ರಿಪೋರ್ಟ್ನಲ್ಲಿ 300 ಕೋಟಿ ರೂ. ಆಡಿಟ್ ಅಬ್‌ಜಕ್ಷನ್ ಇದೆ. ನಾಲ್ಕು ವರ್ಷದ ಆಡಿಟ್ ರಿಪೋರ್ಟ್ ಮಾಡಬೇಕಿದೆ. ಇದಕ್ಕೆ ಕಾಲಾವಕಾಶ ಬೇಕಿದ್ದು, ರಿಪೋರ್ಟ್ ಆಧಾರದ ಮೇಲೆ ಕೊಡಲಾಗುತ್ತದೆ ಎಂದಿದ್ದಾರೆ.
ಬ್ಲಾö್ಯಕ್ ಮೇಲ್ ಮಾಡುವುದು ಎಷ್ಟರ ಮಟ್ಟಿಗೆ ಸರಿ? ನಾವು ಭ್ರಷ್ಟಾಚಾರದಲ್ಲಿ ತೊಡಗಿರುವುದಾಗಿ ಎಲ್ಲೂ ಆರೋಪ ಇಲ್ಲ. ನಿಯಮಾವಳಿ ಪಾಲನೆ ಮಾಡಬೇಕಿದೆ. ಶರತ್ ಬಚ್ಚೇಗೌಡ ಚೇರ್ಮನ್ ಆದ ಬಳಿಕ ಪರಿಶೀಲನೆ ಮಾಡ್ತಿದ್ದಾರೆ. 5ಜಿ ಎಗ್ಸೆಮ್ಷನ್ ನಾನೇ ವಿತ್ ಡ್ರಾ ಮಾಡಿದ್ದೇನೆ. ಕೆಲವರಿಗೆ ತೊಂದರೆ ಆದರೂ ನಿಯಮ ಪಾಲಿಸಲೇಬೇಕಿದೆ ಎಂದು ಹೇಳಿದರು.ಇದನ್ನೂ ಓದಿ: ಗವಿಗಂಗಾಧರೇಶ್ವರನ ಸೂರ್ಯಾಭಿಷೇಕಕ್ಕೆ ಅಡ್ಡಿಯಾದ ಮೋಡ