BollywoodCinemaKarnatakaLatest

ಡ್ರಗ್ಸ್ ಕೇಸ್: ಬಾಲಿವುಡ್ ನಟ ಸಿದ್ಧಾಂತ್ ಕಪೂರ್ ವಿರುದ್ಧ ಕಾನೂನು ಕ್ರಮ : ಗೃಹ ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರಿನ ಎಂಜಿ ರಸ್ತೆಯ ಟ್ರಿನಿಟಿ ಸರ್ಕಲ್ ನಲ್ಲಿರುವ ಪ್ರತಿಷ್ಠಿತ ಹೋಟೆಲ್ನಲ್ಲಿ ನಡೆದಿದ್ದ ಡ್ರಗ್ಸ್ ಪಾರ್ಟಿಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ ಈಗಾಗಲೇ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಸಹೋದರ ಸಿದ್ಧಾಂತ್ ಕಪೂರ್ ಸೇರಿದಂತೆ ಐದು ಜನರನ್ನು ಬಂಧಿಸಲಾಗಿದೆ. ಅವರ ವಿರುದ್ಧ ಕ್ರಮ ತಗೆದುಕೊಳ್ಳುವುದಕ್ಕಾಗಿ ಈಗಾಗಲೇ ರಕ್ತದ ಮಾದರಿ ಸೇರಿದಂತೆ ಹಲವು ತಪಾಸಣೆಗಳನ್ನು ಮಾಡಲಾಗಿದೆ. ಈ ಕುರಿತು ರಾಜ್ಯ ಗೃಹಸಚಿವ ಆಗರ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಗೃಹಸಚಿವರು, “ಹಿಂದಿ ಸಿನಿಮಾ ರಂಗದ ನಟನೊಬ್ಬನನ್ನು ಬೆಂಗಳೂರು ಪೊಲೀಸರು ಮಾದಕ ದ್ರವ್ಯ ಸೇವನೆ ಆರೋಪದ ಮೇಲೆ ಬಂಧಿಸಿದ್ದಾರೆ. ಅವರ ವಿರುದ್ಧ ಕಾನೂನು ಪ್ರಕಾರ ಕ್ರಮ ತಗೆದುಕೊಳ್ಳಲಾಗುತ್ತದೆ. ಕರ್ನಾಟಕ ಸರಕಾರ ಮಾದಕ ದ್ರವ್ಯ ಸೇವನೆ ಹಾಗೂ ಮಾರಾಟ ವಿರುದ್ಧ ಅಭಿಯಾನದ ರೂಪದಲ್ಲಿ ಕ್ರಮ ವಹಿಸುತ್ತಿದೆ. ಯುವಕರಲ್ಲಿ ಸಾಮಾಜಿಕ ಪಿಡುಗಾಗಿ ಕಾಡುತ್ತಿರುವ ಮಾದಕ ವಸ್ತುಗಳ ವಿರುದ್ಧದ ಹೋರಾಟದಲ್ಲಿ ಎಲ್ಲರೂ ಕೈಜೋಡಿಸಬೇಕು’ ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಭರ್ಜರಿ ಡ್ರಗ್ಸ್ ಪಾರ್ಟಿ – ಬಾಲಿವುಡ್ ನಟನ ಪುತ್ರ ಸೇರಿ 50ಕ್ಕೂ ಹೆಚ್ಚು ಮಂದಿ ವಶ

ಬಾಲಿವುಡ್ ಖ್ಯಾತ ನಟಿ ಶ್ರದ್ಧಾ ಕಪೂರ್ ಸಹೋದರ ಮತ್ತು ಬಾಲಿವುಡ್ ನಟ, ಡಿಜೆ ಸಿದ್ಧಾಂತ್ ಕಪೂರ್ ಅವರನ್ನು ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದಾರೆ. ಹೋಟೆಲ್ ಮೇಲೆ ಹಲಸೂರು ಪೊಲೀಸರು ದಾಳಿ ಮಾಡಿದ್ದಾರೆ. ಪಾರ್ಟಿಯಲ್ಲಿ ತೊಡಗಿದ್ದ ಯುವಕ ಯುವತಿ ಸೇರಿ ಒಟ್ಟು 50 ಜನರನ್ನ ವಶಕ್ಕೆ ಪಡೆದಿದ್ದರು. ಈ ಗುಂಪಿನಲ್ಲಿದ್ದ 35 ಜನರಿಗೆ ಮೆಡಿಕಲ್ ಟೆಸ್ಟ್ ಮಾಡಿಸಿದ್ದು, ಐವರು ಮಾದಕವಸ್ತು ಸೇವನೆ ಮಾಡಿರೋದು ದೃಢವಾಗಿದೆ. ಈ ಗುಂಪಿನಲ್ಲಿ ಸಿದ್ಧಾಂತ್ ಕಪೂರ್ ಸಹ ಇರುವುದು ಖಚಿತವಾಗಿದೆ. ಈ ಪರಿಣಾಮ ಸಿದ್ಧಾಂತ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಸಿದ್ಧಾಂತ್  ಹೋಟೆಲ್‍ನಲ್ಲಿ ಡಿಜೆ ಪ್ಲೈಯರ್ ಆಗಿದ್ದು, ಡ್ರಗ್ಸ್ ಸೇವನೆ ಮಾಡಿರೋದು ದೃಢವಾಗಿದೆ. ಸಿದ್ಧಾಂತ್ ಬಾಲಿವುಡ್ ಹಿರಿಯ ನಟ ಶಕ್ತಿ ಕಪೂರ್ ಮಗ ಆಗಿದ್ದು, ಶ್ರದ್ಧಾ ಕಪೂರ್ ಸಹೋದರ ಆಗಿದ್ದಾರೆ. ಅಖೀಲ್ ಸೋನಿ, ಅಜೋದ್ ಸಿಂಗ್ ಪಂಜಾಬ್, ಅಖೀಲ್, ಅನಿ, ದರ್ಶನ್ ಸುರೇಶ್ ಬಂಧಿತ ಆರೋಪಿಗಳು. ಆರೋಪಿಗಳೇಲ್ಲರು ಟೆಕ್ಕಿಗಳಾಗಿದ್ದು, ರಾತ್ರಿ ಪಾರ್ಟಿ ಮಾಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳಿಂದ ಸ್ಪಷ್ಟನೆ ಕೊಟ್ಟಿದ್ದಾರೆ.

Leave a Reply

Your email address will not be published.

Back to top button