ಕಂಫರ್ಟ್ ಎನಿಸುವ ಭಾಷೆಯಲ್ಲಿ ನಟಿಸುತ್ತೇನೆ: ನಟ ಆಮೀರ್ ಖಾನ್

Public TV
1 Min Read
aamir khan 1

ಬಾಲಿವುಡ್ (Bollywood) ಖ್ಯಾತ ನಟ ಆಮೀರ್ ಖಾನ್ (Aamir Khan) ನಿನ್ನೆ ಬೆಂಗಳೂರಿಗೆ ಬಂದಿದ್ದರು. ಮಾಜಿ ಪತ್ನಿ ಕಿರಣ್ ರಾವ್ ನಿರ್ದೇಶನದ, ತಮ್ಮದೇ ನಿರ್ಮಾಣ ಸಂಸ್ಥೆಯಲ್ಲಿ ಮೂಡಿ ಬಂದಿರುವ ‘ಲಾಪತಾ ಲೇಡಿಸ್’ ಸಿನಿಮಾದ ಪ್ರಿಮೀಯರ್ ಶೋನಲ್ಲಿ ಅವರು ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಕನ್ನಡ ಮತ್ತು ಬೆಂಗಳೂರಿನ ಬಗ್ಗೆ ಸಾಕಷ್ಟು ಪ್ರಶ್ನೆಗಳಿಗೆ ಅವರು ಉತ್ತರಿಸಿದ್ದಾರೆ.

aamir khan 3

ಕನ್ನಡದಲ್ಲಿ ಅವಕಾಶ ಸಿಕ್ಕರೆ ನಟಿಸುತ್ತೀರಾ ಎಂದು ಕೇಳಲಾದ ಪ್ರಶ್ನೆಗೆ ಅಷ್ಟೇ ಖುಷಿಯಿಂದಲೇ ಉತ್ತರಿಸಿದ ಅವರು, ನನಗೆ ಯಾವೆಲ್ಲ ಭಾಷೆ ಕಂಫರ್ಟ್ ಅನಿಸತ್ತೋ ಅದರಲ್ಲಿ ನಟಿಸುತ್ತೇನೆ. ಹಿಂದಿ, ಮರಾಠಿ ಹಾಗೂ ಇಂಗ್ಲಿಷ್ ನನಗೆ ಚೆನ್ನಾಗಿ ಬರುತ್ತದೆ. ಕನ್ನಡ ಕಲಿತಿಲ್ಲ. ಹಾಗೊಂದು ವೇಳೆ ಅವಕಾಶವಿದ್ದರೆ ನೋಡೋಣ ಅಂದಿದ್ದಾರೆ.

 

ಬೆಂಗಳೂರಿನ (Bangalore) ಬಗ್ಗೆ ಆಮೀರ್ ಅವರಿಗೆ ಅಪಾರವಾದ ಪ್ರೀತಿಯಿದೆ. ಕಾರಣ, ಬೆಂಗಳೂರಿನಲ್ಲಿ ಅವರ ಅನೇಕ ಗೆಳೆಯರು ಇದ್ದಾರಂತೆ. ಆಗಾಗ್ಗೆ ಬೆಂಗಳೂರಿಗೆ ಅವರು ಬಂದು ಹೋಗಿದ್ದಾರಂತೆ. ಜೊತೆಗೆ ಕನ್ನಡ ಚಿತ್ರಗಳ ಬಗ್ಗೆಯೂ ಆಮೀರ್ ಮಾತನಾಡಿದ್ದಾರೆ.

Share This Article