ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ಇಂದು ಶಾಲಾ ಬಾಲಕಿ ಮೇಲೆ ನಡೆದ ಆ್ಯಸಿಡ್ ದಾಳಿ (Acid Attack) ಜನರನ್ನು ಭಯಭೀತಗೊಳಿಸಿದೆ. ಈ ಭೀಕರ ಘಟನೆ ನಡೆದ ಬಳಿಕ ದೆಹಲಿ ಮಹಿಳಾ ಆಯೋಗದ (DCW) ಮುಖ್ಯಸ್ಥೆ ಸ್ವಾತಿ ಮಲಿವಾಲ್ (Swati Maliwal) ಮಾರುಕಟ್ಟೆಗಳಲ್ಲಿ ಆ್ಯಸಿಡ್ ತರಕಾರಿಯಂತೆ ಮಾರಾಟವಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
Advertisement
ಪಶ್ಚಿಮ ದೆಹಲಿಯ ಉತ್ತಮ್ ನಗರದ ಬಳಿಕ ಇಂದು ಬೆಳಗ್ಗೆ 7:30ರ ಹೊತ್ತಿಗೆ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ 17 ವರ್ಷದ ಬಾಲಕಿ ಮೇಲೆ ಆ್ಯಸಿಡ್ ಎರಚಿದ್ದಾರೆ. ಘಟನೆಯಿಂದ ಬಾಲಕಿಯ ಮುಖ ಹಾಗೂ ಕಣ್ಣುಗಳಿಗೆ ಸುಟ್ಟ ಗಾಯಗಳಾಗಿವೆ. ಬಾಲಕಿಯನ್ನು ನಗರದ ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರು ಆರೋಪಿಗಳ ಹೆಸರನ್ನು ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ. ಆರೋಪಿಗಳಲ್ಲಿ ಈಗಾಗಲೇ ಒಬ್ಬನನ್ನು ಬಂಧಿಸಲಾಗಿದೆ.
Advertisement
Advertisement
ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಸ್ವಾತಿ ಮಲಿವಾಲ್, ಆ್ಯಸಿಡ್ ಮಾರಾಟದ ಮೇಲಿನ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ನಾವು ನ್ಯಾಯಾಲಯವನ್ನು ಒತ್ತಾಯಿಸುತ್ತೇವೆ. ಘಟನೆಯ ಕುರಿತು ನಾವು ನಗರದ ಪೊಲೀಸರಿಗೆ ನೋಟಿಸ್ ನೀಡಿದ್ದೇವೆ. ದಾಳಿ ನಡೆಸಿದ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಎಂದು ತಿಳಿಸಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಶಾಲಾ ಬಾಲಕಿಯ ಮೇಲೆ ಆ್ಯಸಿಡ್ ದಾಳಿ – ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ
Advertisement
ಡಿಸಿಡಬ್ಲ್ಯು ಈ ಹಿಂದೆಯೇ ಹಲವಾರು ಸೂಚನೆಗಳನ್ನು ನೀಡಿದೆ. ಹಲವಾರು ಶಿಫಾರಸುಗಳನ್ನು ಮಾಡಿದೆ. ಆದರೆ ಆ್ಯಸಿಡ್ ಮಾರಾಟ ಇನ್ನೂ ಕೂಡಾ ಮುಂದುವರಿದಿದೆ. ಮಾರುಕಟ್ಟೆಗಳಲ್ಲಿ ತರಕಾರಿಗಳನ್ನು ಮಾರಾಟ ಮಾಡಿದಂತೆ ಆ್ಯಸಿಡ್ ಮಾರಾಟವಾಗುತ್ತಿದೆ. ಯಾರು ಬೇಕಾದರೂ ಆ್ಯಸಿಡ್ ಖರೀದಿಸಿ ಇಂತಹ ಕೃತ್ಯಗಳನ್ನು ಮಾಡಬಹುದು. ಇಂತಹ ಸಂದರ್ಭದಲ್ಲಿ ಸರ್ಕಾರ ಏಕೆ ನಿದ್ರಿಸುತ್ತಿದೆ? ಹುಡುಗಿಯರ ಮೇಲೆ ಆ್ಯಸಿಡ್ ದಾಳಿಯಾದಾಗ ಅವರು ಬಾಹ್ಯವಾಗಿ ಮಾತ್ರವಲ್ಲದೇ ಆಂತರಿಕವಾಗಿಯೂ ಗಾಯಗೊಳ್ಳುತ್ತಾರೆ. ಅವರ ಜೀವನವೇ ನಾಶವಾಗಿ ಹೋಗುತ್ತದೆ ಎಂದು ಹೇಳಿದರು.
We have issued notice to Delhi Police to arrest the attackers & to give strict punishment to them. We’re helping the victim & her family. But the biggest question here is why retail sale of acid isn’t banned, even after several notices: Chairperson, Delhi Commission for Women pic.twitter.com/vEFuww4NQZ
— ANI (@ANI) December 14, 2022
ಆ್ಯಸಿಡ್ ದಾಳಿಗೊಳಗಾದ ಬಾಲಕಿಯ ಮುಖ ಹಾಗೂ ಕಣ್ಣುಗಳಿಗೆ ಗಾಯಗಳಾಗಿವೆ. ಆಕೆಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಐಸಿಯುನಲ್ಲಿ ಇರಿಸಲಾಗಿದೆ. ಆಕೆಯ ಸ್ಥಿತಿ ಈಗ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ವೈದ್ಯನಿಂದ ಪತ್ನಿಯ ಬರ್ಬರ ಹತ್ಯೆ – ಸೂಟ್‍ಕೇಸ್‍ನಲ್ಲಿ ತುಂಬಿ 400 ಕಿ.ಮೀ ದೂರದಲ್ಲಿ ಸುಟ್ಟು ಹಾಕಿದ