ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಯುವತಿ ಮೇಲೆ ಆ್ಯಸಿಡ್ ದಾಳಿ ನಡೆದು ಐದು ದಿನ ಆಯ್ತು. ಆದರೆ ಪಾಗಲ್ ಪ್ರೇಮಿ, ಆ್ಯಸಿಡ್ ನಾಗ ಅಲಿಯಾಸ್ ನಾಗೇಶ್ ಇನ್ನೂ ಪತ್ತೆಯಾಗಿಲ್ಲ. ಇತ್ತ ನಾಗೇಶ್ ದಾಳಿಗೂ ಮೊದಲೇ ಪ್ರೀಪ್ಲಾನ್ ಮಾಡಿಕೊಂಡಿದ್ದ ಅನ್ನೋ ಸ್ಫೋಟಕ ಅಂಶ ಬೆಳಕಿಗೆ ಬಂದಿದೆ.
Advertisement
ಹೌದು. ಬೆಂಗಳೂರಿನ ಸುಂಕದಕಟ್ಟೆಯಲ್ಲಿ ಯುವತಿ ಮೇಲೆ ನಡೆದ ಆ್ಯಸಿಡ್ ಅಟ್ಯಾಕ್‍ನ ಕಿರಾತಕ ನಾಗೇಶ್ ಸುಳಿವು ಸಿಕ್ಕಿಲ್ಲ. ಬೆಂಗಳೂರು ಪೊಲೀಸರು, ನಾಗೇಶನಿಗಾಗಿ 10 ತಂಡ ರಚಿಸಿಕೊಂಡು, ಹಗಲು- ರಾತ್ರಿಯನ್ನದೇ ಕಣ್ಣಿಗೆ ಎಣ್ಣೆಬಿಟ್ಕೊಂಡು ಹುಡುಕಾಡ್ತಿದ್ದಾರೆ. ಆದರೆ ಖತರ್ನಾಕ್ ನಾಗೇಶ್ ಮಾತ್ರ ಸಿಗ್ತಾನೇ ಇಲ್ಲ. ತನಿಖೆ ವೇಳೆ, ಆರೋಪಿಯ ಪ್ರೀಪ್ಲಾನ್ ಕೇಳಿ ಪೊಲೀಸರೇ ದಂಗಾಗಿ ಹೋಗಿದ್ದಾರೆ.
Advertisement
Advertisement
ಆರೋಪಿ ನಾಗೇಶ್ ಯುವತಿ ಮೇಲೆ 10 ದಿನ ಮೊದಲೇ ಪ್ಲಾನ್ ಮಾಡಿ ಕೃತ್ಯವೆಸಗಿರೋದು ತಿಳಿದು ಬಂದಿದೆ. ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲು ಏನೆಲ್ಲ ಮಾಡಬೇಕು ಅನ್ನೋದನ್ನ ಮೊದಲೇ ಪ್ಲಾನ್ ಮಾಡಿಕೊಂಡಿದ್ದ. ಏಪ್ರಿಲ್ 28ರಂದು ದಾಳಿಗೂ ಮೊದಲೇ ಗಾರ್ಮೆಂಟ್ಸ್ ಖಾಲಿ ಮಾಡಲು, ಅಲ್ಲಿದ್ದ ಸ್ಟಾಕ್‍ಗಳನ್ನೆಲ್ಲಾ 1 ದಿನ ಮೊದಲು 1 ಲಕ್ಷ ರೂ.ಗೆ ಕ್ಲಿಯರೆನ್ಸ್ ಮಾಡಿದ್ದ. ಹಣಕ್ಕಾಗಿ ಎಟಿಎಂ ಬಳಸಿದ್ರೆ ಸಿಕ್ಕಿ ಬೀಳ್ತೀನಿ ಅಂತ, ದಾಳಿ ದಿನ 1 ಲಕ್ಷ ಕ್ಯಾಶ್ ಇರುವಂತೆ ನೋಡಿಕೊಂಡಿದ್ದ. ಯುವತಿ ಮೇಲೆ ದಾಳಿ ನಡೆಸಿದ ಬಳಿಕ ನನ್ನ ಸಿಬಿಜೆಡ್ ಬೈಕ್‍ನಲ್ಲಿ ಮೆಜೆಸ್ಟಿಕ್‍ಗೆ ಬಂದು, ಎಸ್ಕೇಪ್ ಆಗಿದ್ದಾನೆ. ಇದೀಗ ಆರೋಪಿ ಬೈಕ್, ಕೋರ್ಟ್ ಬಳಿ ಪತ್ತೆ ಆಗಿದೆ. ಮೊಬೈಲ್ ಅನ್ನ ಹೊಸಕೋಟೆ ಟೋಲ್ ಬಳಿ ಬಿಸಾಕಿದ್ದು, ಮೊಬೈಲ್ ಸಿಕ್ಕವರು ಸ್ವಿಚ್ಛ್ ಆನ್ ಮಾಡಿದಾಗ ವಿಷಯ ಗೊತ್ತಾಗಿದೆ. ಇದನ್ನೂ ಓದಿ: ಆ್ಯಸಿಡ್ ಎರಚಿದ ಕಿರಾತಕನಿಗೆ ಲುಕ್‍ಔಟ್ ನೊಟೀಸ್ ಜಾರಿ
Advertisement
ಒಂದ್ಕಡೆ ನೀಚ ಕೃತ್ಯವೆಸಗಿರುವ ಆರೋಪಿ ನಾಗೇಶ್ ಆಂಜನೇಯನ ಪರಮ ಭಕ್ತನಂತೆ. ಪ್ರತಿದಿನ ತಿಲಕವಿಲ್ಲದೆ ಮನೆಯಿಂದ ಹೊರಗೆ ಬರ್ತಿರಲಿಲ್ಲವಂತೆ. ಆಗಾಗ ತಮಿಳುನಾಡಿನ ದೇವಸ್ಥಾನಗಳಿಗೂ ಹೋಗ್ತಿದ್ದನಂತೆ. ಹೀಗಾಗಿ ಪೊಲೀಸರು ತಿರುಪತಿ ಸೇರಿದಂತೆ ಹೊರರಾಜ್ಯಗಳ ದೊಡ್ಡ ದೇವಸ್ಥಾನಗಳು, ಮಠಗಳು, ಧಾರ್ಮಿಕ ಕೇಂದ್ರಗಳಲ್ಲಿ ಹುಡುಕಾಟ ನಡೆದುತ್ತಿದ್ದಾರೆ. ತಿರುಪತಿಯ 3000 ಫೇಸ್ ರೆಕಗ್ನೈಸೇಷನ್ ಕ್ಯಾಮೆರಾಗಳನ್ನ ಪೊಲೀಸ್ರು ಜಾಲಾಡಿದ್ದಾರೆ. ಎಲ್ಲೂ ಕೂಡ ಆರೋಪಿಯ ಮುಖ ಕಂಡುಬಂದಿಲ್ಲ.
ಒಟ್ಟಾರೆ ಪ್ರೀತಿ ನಿರಾಕರಿಸಿದ್ರೂ ಅನ್ನೋ ಒಂದೇ ಒಂದು ಕಾರಣಕ್ಕೆ ಆರೋಪಿ ಆ್ಯಸಿಡ್ ದಾಳಿ ನಡೆಸಿದ್ದು, ಕ್ಷಮಿಸಲಾರದ ತಪ್ಪು. ಈತನ ವಿರುದ್ಧ ಕಠಿಣಾತಿ ಕಠಿಣ ಶಿಕ್ಷೆ ಆಗಬೇಕೆಂಬ ಕೂಗು ಹೆಚ್ಚಾಗುತ್ತಿದೆ. ಇತ್ತ ಅಮಾಯಕ ಯುವತಿ, ಸುಟ್ಟುಗಾಯಗಳಿಂದ ನರಳುತ್ತ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಡ್ತಿದ್ದಾಳೆ. ಆದಷ್ಟು ಬೇಗ, ಪಾಗಲ್ ಪ್ರೇಮಿ ನಾಗೇಶ್‍ನನ್ನು ಬಂಧಿಸಿ, ಯುವತಿ ಕುಟುಂಬಕ್ಕೆ ನ್ಯಾಯಕೊಡಿಸಬೇಕಿದೆ.